ನೀಟ್ ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದ ಬಸವರಾಜ ಕೌಲಗಿ

Basavaraj Kaulagi wishes good luck to NEET candidates

ನೀಟ್ ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದ ಬಸವರಾಜ ಕೌಲಗಿ 

ವಿಜಯಪುರ 03: ನೀಟ್ ಪರೀಕ್ಷೆಯನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಮಾತನಾಡಿದ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ವೈದ್ಯರಾಗಬೇಕು ಎನ್ನುವ ಕನಸಿನೊಂದಿಗೆ ಹಗಲು ರಾತ್ರಿಗಳ ಪರಿವೆಇಲ್ಲದೆ ಶ್ರಮವಹಿಸಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯನ್ನು ಎದುರಿಸಲು ಸಿದ್ಧವಾಗಿದ್ದು ಅವರ ಕನಸು ನನಸಾಗಲಿ. ಪರೀಕ್ಷೆಎಂದ ಮೇಲೆ ಏಳು ಬೀಳುಗಳು ಇದ್ದೇಇರುತ್ತವೆ. ಅಂದುಕೊಂಡಂತೆ ಅಥವಾ ನೀರೀಕ್ಷೆಗೆ ತಕ್ಕಂತೆ ಪ್ರಶ್ನೆ ಬಾರದೇಇದ್ದ ಪಕ್ಷದಲ್ಲಿ ಯಾವ ವಿದ್ಯಾರ್ಥಿಯೂ ಸಹ ಧೃತಿಗೆಡದೇ ಏಕಾಗ್ರತೆವಹಿಸಿ ಪ್ರಯತ್ನಿಸಿದರೆ ಖಂಡಿತವಾಗಿಯೂ ಯಶಸ್ಸು ದೊರೆಯುತ್ತದೆ. ಒಂದು ವೇಳೆ ಅಂದುಕೊಂಡಂತೆ ಪರೀಕ್ಷೆಯನು ದುರಿಸುವುದಕ್ಕೆ ಸಾಧ್ಯವಾಗದೇ ಇದ್ದ ಪಕ್ಷದಲ್ಲಿಯಾವ ವಿದ್ಯಾರ್ಥಿಯೂ ಸಹ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳಬಾರದು. ಪರೀಕ್ಷೆಗಳು ಎಷ್ಟು ಮುಖ್ಯವೋ ಬದುಕುಅದಕ್ಕಿಂತ ಮುಖ್ಯವಾಗಿದ್ದು ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಬದುಕಿನಲ್ಲಿ ಯಶಸ್ಸಿನ ಹಾದಿಯಲ್ಲಿ ಸಾಗಿದ್ದಕ್ಕೆ ಸಾಕಷ್ಟು ಉದಾಹರಣೆಗಳನ್ನು ನಾವು ನೋಡುತ್ತೇವೆ. ಆ ನಿಟ್ಟಿನಲ್ಲಿ ಯಾವುದೇ ನಕಾರಾತ್ಮಕ ವಿಚಾರಗಳ ಕಡೆಗೆ ಗಮನ ಕೊಡದೇದೃಢ ಮನಸ್ಸಿನಿಂದ ಪರೀಕ್ಷೆಯನ್ನು ಎದುರಿಸಬೇಕುಎಂದು ತಿಳಿಸಿದರು.