ಲೋಕದರ್ಶನ ವರದಿ
ಬೆಳಗಾವಿ 07: ಕಾಯಕ ದಾಸೋಹ ಪರಿಕಲ್ಪನೆಗಳ ಮೂಲಕ ಮನುಕುಲಕ್ಕೆ ಬಹುಮೌಲಿಕ ಕೊಡುಗೆ ನೀಡಿದವರು ಬಸವಾದಿ ಶರಣರು. ಅವರ ಆಥರ್ಿಕ ಸಿದ್ಧಾಂತಗಳು ಇಂದಿಗೂ ದಾರಿದೀಪವೆನಿಸಿವೆ ಎಂದು ಲಿಂಗರಾಜ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಗುರಯ್ಯಾ ಮಠಪತಿ ನುಡಿದರು.
ಅಖಿಲ ಭಾರತ ವೀರಶೈವ ಮಹಾಸಭೆ ಬೆಳಗಾವಿ ಜಿಲ್ಲಾ ಘಟಕವು ಏರ್ಪಡಿಸಿದ್ದ ಅಮವಾಸೆ ಅನುಭಾವ ಗೋಷ್ಠಿಯಲ್ಲಿ 'ಬಸವಣ್ಣನವರು ಹಾಗೂ ಕಾಲರ್್ಮಾಕ್ಸ್' ವಿಷಯದ ಮೇಲೆ ಮಾತನಾಡಿದ ಅವರು ಹನ್ನೆರಡನೆಯ ಶತಮಾನದ ಬಸವಣ್ಣನವರು ವಿಸ್ತರಿಸಿದ ಕಾಯಕ-ದಾಸೋಹ ಸಿದ್ಧಾಂತಗಳು ಮನುಕುಲಕ್ಕೆ ಮುನ್ನಡಿಯನ್ನು ಬರೆದವು. ಪ್ರತಿಯೊಬ್ಬ ವ್ಯಕ್ತಿಯು ದುಡಿಯಬೇಕು ತಾನು ಗಳಿಸಿದ ಸಂಪತ್ತನ್ನು ಸಮಾಜಕ್ಕೂ ವಿನಿಯೋಗಿಸಬೇಕು. ಯಾರೂ ಮೇಲಲ್ಲ ಹಾಗೂ ಕೀಳಲ್ಲವೆಂಬ ಸಮತಾವಾದವನ್ನು ಅಭಿವ್ಯಕ್ತಿಪಡಿಸಿದರು. ಅಂತೆಯೆ ಹದಿನೆಂಟನೆಯ ಶತಮಾನದಲ್ಲಿ ಕಾಲರ್್ಮಾಕ್ರ್ಸನು ಕೂಡ ವರ್ಗತಾರತಮ್ಯತೆಗಳನ್ನು ತೊಡೆದುಹಾಕಲು ಹೋರಾಡಿದ. ಕಾಲರ್್ಮಾಕ್ರ್ಸನ ಸಮತಾವಾದವು ಅಂದು ರಶಿಯಾ ಮೊದಲ್ಗೊಂಡು ಹಲವಾರು ದೇಶಗಳಲ್ಲಿ ಕ್ರಾಂತಿಯನ್ನೇ ಉಂಟುಮಾಡಿತು. ಅಧಿಕಾರಶಾಹಿ, ವರ್ಗತಾರತಮ್ಯತೆ, ಉಳ್ಳವರು-ಇಲ್ಲದವರ ನಡುವಿನ ಹೋರಾಟ ಜಗತ್ತಿನಲ್ಲಿ ಹೊಸಸಂಚಲನವನ್ನುಂಟುಮಾಡಿತು. ಮಾಕ್ರ್ಸನ ಸಿದ್ಧಾಂತಗಳು ಬಹುಬೇಗನೆ ಜಗತ್ತನ್ನು ಆವರಿಸಿಕೊಂಡವು. ಇಂಗ್ಲೀಷ್ ಭಾಷೆ ಇದಕ್ಕೆ ಕಾರಣವಾಗಿತ್ತು. ಆದರೆ ಶರಣರು ಕಾರ್ಲಮಾಕ್ರ್ಸನ ಪೂರ್ವದಲ್ಲಿಯೇ ಸಮಾಜ ಹಾಗೂ ಅರ್ಥವ್ಯವಸ್ಥೆಯ ಮೇಲೆ ಬೆಳಕುಚೆಲ್ಲಿದ್ದನ್ನು ಅಲ್ಲಗಳೆಯುವಂತಿಲ್ಲ. ಹೀಗೆ ಸಮಾಜಮುಖಿಯಾದ ಶರಣರ ವಿಚಾರಗಳನ್ನು ನಾವಿಂದು ಜಗತ್ತಿಗೆ ಮುಟ್ಟಿಸುವ ಕಾರ್ಯಮಾಡಬೇಕಾಗಿದೆ ಎಂದು ಹೇಳಿದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಮಹಾಸಭೆ ಅಧ್ಯಕ್ಷ ವಾಯ್.ಎಸ್.ಪಾಟೀಲ ಅವರು ಹದಿನೆಂಟನೆಯ ಶತಮಾನದಲ್ಲಿ ಆದ ಔದ್ಯಮಿಕ ಕ್ರಾಂತಿ, ಸಾಮಾಜಿಕ ಕ್ರಾಂತಿಗಳಿಗೂ ಮುನ್ನ ನಮ್ಮ ಕನರ್ಾಟಕದಲ್ಲಿಯೇ ಶರಣರು ಸಾಮಾಜಿಕ ಧಾಮರ್ಿಕ ಕ್ರಾಂತಿಯನ್ನು ಎಸಗಿದರು. ಅವರ ವಿಚಾರಗಳು ಪ್ರಖರವಾಗಿದ್ದವು, ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ನ್ಯಾಯವನ್ನೊದಗಿಸಿದವು. ಸಾಮಾಜಿಕ ಮೌಲ್ಯಗಳನ್ನು ಎತ್ತಿಹಿಡಿದವು. ಅವರ ಸಾಮಾಜಿಕ ಸಮಾನತೆಯ ವಿಚಾರಗಳು ಇಂದಿಗೂ ಆದರ್ಶ ಹಾಗೂ ಅನುಕರಣೀಯವೆನಿಸಿವೆ. ಈ ನಿಟ್ಟಿನಲ್ಲಿ ಸಮಾಜವನ್ನು ದಾರ್ಶನಿಕ ಮೌಲ್ಯಗಳಿಂದ ಬಲಪಡಿಸುವುದು ಅಗತ್ಯವಾಗಿದೆ. ವೀರಶೈವ ಲಿಂಗಾಯತ ಸಮಾಜ ಅಂತಹ ಸಾಂಘಿಕ ವಿಚಾರಗಳನ್ನೇ ವ್ಯಕ್ತಪಡಿಸುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಸೋಸಿಯೆಷನ್ ಆಫ್ ಇಂಡಿಯಾ(ಎಪಿಐ) ಕೊಡಮಾಡುವ ಜೀವಮಾನ ಸಾಧನೆ ಪ್ರಶಸ್ತಿ ಪುರಸ್ಕತರಾದ ನಾಡಿನ ಖ್ಯಾತ ವೈದ್ಯರಾದ ಡಾ.ಎಚ್.ಬಿ.ರಾಜಶೇಖರ, ಎಪಿಟಿಐ ಪ್ರೊ.ಜಿ.ಪಿ.ಶ್ರೀವಾಸ್ತವ ಪ್ರಶಸ್ತಿ ಪುರಸ್ಕೃತರಾದ ಕೆಎಲ್ಇ ಸಂಸ್ಥೆಯ ನಿವೃತ್ತ ಕಾರ್ಯದಶರ್ಿಗಳಾದ ಡಾ.ಎಫ್.ವ್ಹಿ.ಮಾನ್ವಿ, ಕನರ್ಾಟಕ ಸರಕಾರ ರೈತ ಸಲಹಾ ಸಮಿತಿ ಸದಸ್ಯರಾದ ವಾಯ್.ಎಚ್.ಪಾಟೀಲ, ರಕ್ತದಾನಿ ಸುನೀಲ ಕಿತ್ತೂರ ಅವರನ್ನು ಮಹಾಸಭಾದ ವತಿಯಿಂದ ಸತ್ಕರಿಸಿ ಗೌರವಿಸಲಾಯಿತು.
ಡಾ.ಸಿದ್ದನಗೌಡ ಪಾಟೀಲ, ಕಲ್ಯಾಣರಾವ್ ಮುಚಳಂಬಿ, ರತ್ನಪ್ರಭಾ ಬೆಲ್ಲದ, ಉಪಸ್ಥಿತರಿದ್ದರು. ವೀಣಾ ಚಿಣ್ಣನವರ, ಸುಜಾತಾ ಮನವಾಡೆ, ಶಂಕರ ಚೊಣ್ಣದ ಪ್ರಾಥರ್ಿಸಿದರು. ಡಾ.ಗುರುದೇವಿ ಹುಲೆಪ್ಪನವರಮಠ ಹಾಗೂ ಗೀತಾ ಗುಂಡಕಲ್ಲೆ ಪರಿಚಯಿಸಿದರು. ನ್ಯಾಯವಾದಿ ವಿ.ಕೆ.ಪಾಟೀಲ ಸ್ವಾಗತಿಸಿದರು. ಡಾ.ಮಹೇಶ ಗುರನಗೌಡರ ನಿರೂಪಿಸಿದರು. ಜ್ಯೋತಿ ಭಾವಿಕಟ್ಟಿ ವಂದಿಸಿದರು.
***