ಬೆಳಗಾವಿ: ಕೃಷಿ ಕೃತ್ಯವ ಮಾಡುವವರ ಪಾದವ ತೋರಿಸಿ ಬದುಕಿಸಯ್ಯ ಎಂದು ಹೇಳುವ ಮೂಲಕ ಕೃಷಿ ಕಾಯಕಕ್ಕೆ ಹಾಗೂ ರೈತರಿಗೆ ಅತ್ಯಂತ ಗೌರವಯುತ ಸ್ಥಾನ ನೀಡಿರುವ ಬಸವಣ್ಣನವರು ವಿಶ್ವದ ಪ್ರಪ್ರಥಮ ರೈತ ನಾಯಕ ಎಂದು ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದಗರ್ೆ ಹೇಳಿದ್ದಾರೆ.
ಬಸವ ಪಂಚಮಿಯ ಅಂಗವಾಗಿ ಬಸವ ಭೀಮ ಸೇನೆಯ ವತಿಯಿಂದ ಜುಲೈ 27 ರವರೆಗೆ ಹಮ್ಮಿಕೊಂಡಿರುವ ನಮ್ಮ ನಡೆ ನಮ್ಮ ಸಮುದಾಯಗಳ ಕಡೆ ಎಂಬ ಅಭಿಯಾನದ ಅಂಗವಾಗಿ ರೈತ ನಾಯಕ ಅಪ್ಪಾಸಾಹೇಬ ದೇಸಾಯಿ ಅವರನ್ನು ಅವರ ಕಡೋಲಿ ಗ್ರಾಮದ ಮನೆಯಲ್ಲಿ ಗೌರವಿಸಿ ಅವರು ಮಾತನಾಡಿದರು.
ಬಸವಣ್ಣನವರು ಕೃಷಿಕರು ಹಾಗೂ ಕೃಷಿ ಕಾಮರ್ಿಕರನ್ನು ಸಮೀಕರಿಸುವ ಮೂಲಕ ಕಾಯಕ ದಾಸೋಹದ ಲಿಂಗಾಯತ ಎಂಬ ವಿನೂತನ ಧರ್ಮ ನೀಡಿದರು. ಲಿಂಗಾಯತವೆಂದರೆ ಅದು ರೈತ ಮತ್ತು ಕಾಯಕ ಜೀವಿಗಳ ಧರ್ಮ. ಬಸವಣ್ಣನವರ ವಿನೂತನ ಸಮೀಕರಣದಿಂದಾಗಿ ಕಲ್ಯಾಣ ರಾಜ್ಯವು ಬೇಡುವ ಬಡವರಿಲ್ಲದ ಹಸಿವು ಮತ್ತು ಬಡತನ ಮುಕ್ತ ಸಮೃದ್ದ ರಾಜ್ಯವಾಗಿ ಉದಯಿಸಿತ್ತು. ಬಸವಣ್ಣನವರ ಆ ವಿನೂತನ ಹೋರಾಟದ ಮಾದರಿಯನ್ನೆ ಇಂದು ರೈತ ಹಾಗೂ ಕಾಮರ್ಿಕ ಸಂಘಟನೆಗಳು ಅಳವಡಿಸಿಕೊಳ್ಳಬೇಕು ಎಂದರು.
ಕೃಷಿಕರ ಮತ್ತು ಕೃಷಿ ಕಾಮರ್ಿಕರ ಸಮೀಕರಣದ ಕೊರತೆಯಿಂದ ರೈತರ ಹಾಗೂ ಕಾಮರ್ಿಕ ಸಂಘಟನೆಗಳ ಹೋರಾಟವು ನಿರೀಕ್ಷಿತ ಫಲ ನೀಡುತ್ತಿಲ್ಲ. ಕೃಷಿಕರು ಹಾಗೂ ಕಾಮರ್ಿಕರು ಬಸವ ಮಾರ್ಗವನ್ನು ಅನುಸರಿಸುವ ಚಿಂತನೆ ನಡೆಸಬೇಕು. ಹೋರಾಟಕ್ಕೆ ಹೊಸ ಆಯಮ ನೀಡಬೇಕು ಎಂದು ಮನವಿ ಮಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಪ್ಪಾಸಾಹೇಬ ದೇಸಾಯಿ ಅವರು, ಆಳುವ ವರ್ಗಗಳ ತಪ್ಪು ಹಾಗೂ ವಿವೇಚನಾ ರಹಿತ ನೀತಿಗಳಿಂದಾಗಿ ಇಂದು ಸಣ್ಣ ಹಿಡುವಳಿ ರೈತರು ಸಂಕಷ್ಟಗಳಿಗೆ ಸಿಲುಕಿ ನರಳುವಂತಾಗಿದೆ. ಸರಕಾರ ಘೋಷಿಸುತ್ತಿರುವ ಪರಿಹಾರಗಳು ಈ ವರ್ಗದ ರೈತರಿಗೆ ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಸಮಾಜದ ಅನೇಕ ಅನುಕೂಲಸ್ಥರು ಹಾಗೂ ಮಠಾಧೀಶರುಗಳು ಧರ್ಮದ ಕಾರ್ಯವನ್ನು ಮರೆತು ಕುಳಿತಿರುವ ಈ ಸಮಯದಲ್ಲಿ ಬಸವ ಭೀಮ ಸೇನೆಯು ಬಸವ ಮಾರ್ಗದಲ್ಲಿ ಕೃಷಿಕರು, ಕೃಷಿ ಕಾಮರ್ಿಕರು ಹಾಗೂ ವಿವಿಧ ಸಮುದಾಯಗಳಲ್ಲಿ ಸಮನ್ವಯತೆ ಮೂಡಿಸುವ ವಿನೂತನ ಚಳುವಳಿ ಆರಂಭಿಸಿರುವದು ಸಮಾಜ ಸಂಘಟನೆಯಲ್ಲಿ ಕ್ರಾಂತಿಕಾರಿ ಹೆಜ್ಜೆಯಾಗಿದೆ. ಈ ಕ್ರಾಂತಿಕಾರಿ ಚಳುವಳಿಯಲ್ಲಿ ರೈತ ಸಮುದಾಯವನ್ನು ಗೌರವಿಸುತ್ತಿರುವದು ನನಗೆ ಸಂತಸ ತಂದಿದೆ ಎಂದರು.
ರೈತರ ಪರವಾಗಿ ಇಂದು ಈ ಸನ್ಮಾನ ಸ್ವೀಕರಿಸಿದ್ದೇನೆ. ಬಸವ ಭೀಮ ಸೇನೆಯ ಈ ಹೋರಾಟಕ್ಕೆ ರೈತ ಸಮುದಾಯದ ಸಂಪೂರ್ಣ ಬೆಂಬಲ ಇದೆ ಎಂದರು.
ರೈತ ಮಹಿಳೆಯರಾದ ಸುಮಿತ್ರಾ ದೇಸಾಯಿ, ಸುಮನ ಕಡೆಮನಿ, ಶಾಂತಾ ಕಡೆಮನಿ, ಸುಮಿತ್ರ ಕಲ್ಲಪ್ಪ ದೇಸಾಯಿ, ಶೈಲಾ ದೇಸಾಯಿ ಮುಂತಾದವರು ಉಪಸ್ಥಿತರಿದ್ದರು.