ಲೋಕದರ್ಶನ ವರದಿ
ರಾಮದುರ್ಗ, 1: ಅನುಭವ ಮಂಟಪ ಸ್ಥಾಪಿಸಿ 12 ನೇ ಶತಮಾನದಲ್ಲಿ ವ್ಯಕ್ತಿ ಹಾಗೂ ಸ್ತ್ರೀ ಸ್ವಾತಂತ್ರ್ಯ ಪ್ರತಿಪಾದಿಸಿದ ಮಹಾನ್ ಮಾನವತಾವಾದಿ ಬಸವಣ್ಣನವರು ಎಂದು ಬೆನನ್ ಸ್ಮಿತ್ ಪ.ಪೂ ಮಹಾವಿದ್ಯಾಲಯದ ಉಪನ್ಯಾಸಕ ಶ್ರೀಕಾಂತ ಶಾನವಾಡ ಹೇಳಿದರು.
ಪಟ್ಟಣದ ವಿದ್ಯಾ ಪ್ರಸಾರಕ ಸಮಿತಿಯ ಅಂಗ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ಏರ್ಪಡಿಸಿದ 'ವಚನ ಚಿಂತನ' ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಚಣ ಎಂದರೆ ಪ್ರಮಾಣ 12ನೇ ಶತಮಾನದಲ್ಲಿ ಶಿವ ಶರಣರು ರಚಿಸಿದ ವಚಣ ಸಾಹಿತ್ಯದ ಅಂಶಗಳನ್ನು ಅರಿತು ಜೀವನದಲ್ಲಿ ಅಳವಡಿಕೆ ಮಾಡಿಕೊಂಡರೆ ಜೀವನ ಸಾರ್ಥಕವಾಗುತ್ತದೆ ಎಂದು ಅಭಿಮತ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಪಿ. ಎಲ್ ದೊಡಮನಿ, ಟಿ. ದಾಮೋದರ, ಎಸ್.ಆಯ್ ಪುರಾಣಿಕ, ಪಿ. ಎಸ್ ಸೋಬರದ , ಎಸ್.ಎಸ್.ಸುಲ್ತಾನಪೂರ ಉಪಸ್ಥಿತರಿದ್ದರು.
ಪ.ಪೂ ಮಹಾವಿದ್ಯಾಲಯದ ಪ್ರಾಚಾರ್ಯ ಎಂ. ಬಿ ಪಾಟೀಲ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ವ್ಹಿ. ಎಸ್ ಜಂಬಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎಂ. ಕಲ್ಲೂರ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ .ಎ.ಎ. ಮಗದುಮ್ ವಂದಿಸಿದರು