ಮೈಸೂರು: ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಾಗುವ ಪ್ರಗತಿಪರ ಚಿಂತಕ ಕೆಎಸ್ ಭಗವಾನ್ ಇದೀಗ ಕಾಯಕ ಯೋಗಿ ಬಸವಣ್ಣ ಮತ್ತು ಸ್ವಾಮಿ ವಿವೇಕಾನಂದರನ್ನು ಪಿತೂರಿ ಮಾಡಿ ಕೊಲೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಜಗಜ್ಯೋತಿ ಬಸವೇಶ್ವರ ಅವರು ಸಾಯುವ ಹಿಂದಿನ ದಿನ ತುಂಬಾ ಆರೋಗ್ಯಕರವಾಗಿದ್ದರು. ಹಾಗಾಗಿ ಬಸವಣ್ಣರನ್ನು ಕೊಲೆ ಮಾಡಲಾಗಿದೆ ಎಂಬುದು ನನ್ನ ಅಭಿಪ್ರಾಯ. ಬಸವಣ್ಣನವರು ಹಿಂದೂ ಧರ್ಮವನ್ನು ಕಟುವಾಗಿ ಟೀಕಿಸಿದ್ದು ಬೌದ್ಧ ಧರ್ಮದ ಪರ ಒಲುವಿತ್ತು. ಬಸವಣ್ಣರ ಚಳುವಳಿಯನ್ನು ಸಹಿಸದವರೇ ಅವರನ್ನು ಕೊಲೆ ಮಾಡಿದ್ದಾರೆ. ಇನ್ನು ಐಕ್ಯರಾಗಿದ್ದಾರೆ ಎಂಬುವುದು ಶುದ್ಧ ಸುಳ್ಳ ಎಂದು ವಾದಿಸಿದ್ದಾರೆ.
ಇನ್ನು ಪಿತೂರಿ ಮಾಡಿ ಸ್ವಾಮಿ ವಿವೇಕನಂದರನ್ನು ಕೊಲೆ ಮಾಡಲಾಗಿದೆ. ಸ್ವಾಮಿ ವಿವೇಕನಂದರು ನಿಜವಾದ ಸನ್ಯಾಸಿಗಳು. ಅವರು ಎರಡನೇ ಗೌತಮ ಬುದ್ಧ. ರಾತ್ರಿ ಎಲ್ಲ ಚೆನ್ನಾಗಿದ್ದ ವಿವೇಕಾನಂದರು ಬೆಳಗ್ಗೆ ನೋಡುವಾಗ ಕುಳಿತಲ್ಲೇ ಪ್ರಾಣ ಬಿಟ್ಟರು ಅಂದರೆ ನಂಬೋದಕ್ಕೆ ಆಗುತ್ತಾ? ಬಡವರಿಗಾಗಿ ಕೆಲಸ ಮಾಡಬೇಕು ಎಂದು ಚಿಂತಿಸುತ್ತಿದ್ದ ವಿವೇಕಾನಂದರನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಭಗವಾನ್ ಸಂಶಯ ವ್ಯಕ್ತಪಡಿಸಿದ್ದಾರೆ.
ಬಸವಣ್ಣ ಮತ್ತು ವಿವೇಕಾನಂದರನ್ನು ಪಿತೂರಿ ಮಾಡಿ ಕೊಲೆ ಮಾಡಲಾಗಿದೆ ಎಂಬ ಭಗವಾನ್ ರ ಹೇಳಿಕೆ ಇದೀಗ ತೀವ್ರ ಚಚರ್ೆಗೆ ಗ್ರಾಸವಾಗಿದೆ.