ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಬಸವಣ್ಣನವರ ವಚನ ಸ್ಪರ್ಧೆ ಏರಿ್ಡಸಲಾಗಿದೆ
ವಿಜಯಪುರ 28: ಮಹಾಮಾನವತಾವಾದಿ ಬಸವೇಶ್ವರ ಜಯಂತಿ ಅಂಗವಾಗಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಬಸವ ಅಧ್ಯಯನ ಪೀಠದ ವತಿಯಿಂದ ಸೋಮವಾರ ಬಸವಣ್ಣನವರ ವಚನ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸ್ಪರ್ಧೆಯಲ್ಲಿ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ 25 ಕ್ಕೂ ಹೆಚ್ಚು ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು. ಈ ಸ್ಫರ್ಧೆಯಲ್ಲಿ ವಿಜೇತರ ವಿವರ ಪ್ರಥಮ ಬಹುಮಾನ ಸವಿತಾ ಚಿಗುರಿ ಶಿಕ್ಷಣ ಅಧ್ಯಯನ ವಿಭಾಗ ದ್ವಿತೀಯ ಬಹುಮಾನ ಲಕ್ಷ್ಮಿ ಕಾತ್ರಾಳ ಇಂಗ್ಲಿಷ್ ಅಧ್ಯಯನ ವಿಭಾಗ ತೃತೀಯ ಬಹುಮಾನ ಭವಾನಿ ಅಂಗಡಿ ಸ್ನಾತಕ ವಿಭಾಗ, ಚತುರ್ಥಿ ಬಹುಮಾನ ಐಶ್ವರ್ಯ ಬಿರಾದಾರ ಸ್ನಾತಕ ವಿಭಾಗ ಇವರು ಪಡೆದುಕೊಂಡರು.
ಸ್ಪರ್ಧೆಯ ತೀರ್ುಗಾರರಾಗಿ ಡಾ.ಮಲ್ಲಿಕಾರ್ಜುನ ಮೇತ್ರಿ ಡಾ. ರಾಜಶೇಖರ ಬೆನಕಹಳ್ಳಿ ಹಾಗೂ ಡಾ.ವಿಷ್ಣು ಎಂ ಶಿಂದೆ ಅವರು ಕಾರ್ಯನಿರ್ವಹಿಸಿದರು. ಬಸವ ಪೀಠದ ಸಂಯೋಜಕ ಡಾ.ರಾಜಕುಮಾರ ಮಾಲಿಪಾಟೀಲ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ವಿವಿಧ ವಿಭಾಗದ ಅಧ್ಯಾಪಕರು ಹಾಗೂ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.