ಸಹಕಾರಿ ನಿಯಮಗಳನ್ನು ಪಾಲಿಸಿ, ಬ್ಯಾಂಕ್ ಗಳು ಆರ್ಥಿಕ ಬೆಳವಣಿಗೆಯಾತ್ತವೆ- ಶಾಸಕ ಸಿದ್ದು ಸವದಿ

ಸಹಕಾರಿ ನಿಯಮಗಳನ್ನು ಪಾಲಿಸಿ, ಬ್ಯಾಂಕ್ ಗಳು ಆರ್ಥಿಕ ಬೆಳವಣಿಗೆಯಾತ್ತವೆ- ಶಾಸಕ ಸಿದ್ದು ಸವದಿ  Banks will grow the economy by following cooperative rules - MLA Siddu Savadi

ಮಹಾಲಿಂಗಪುರ  08:  ಪ್ರಾಮಾಣಿಕವಾಗಿ ಸಹಕಾರಿ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಿಕ್ಕೊಂಡು ಬಂದರೆ ಸಹಕಾರಿ ಬ್ಯಾಂಕ್ ಗಳು ಆರ್ಥಿಕ ಬೆಳವಣಿಗೆಯಾಗುತ್ತವೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು. ರಬಕವಿ /ಬನಹಟ್ಟಿ ಹಾಗೂ ತೇರದಾಳ ತಾಲೂಕಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ನೌಕರದಾರರ ಕ್ಷೇಮಾಭಿವೃದ್ಧಿ ಸಂಘದ 2024-25 ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೊದಲಿಗೆ ಕನಕದಾಸರ ಜಯಂತಿ ಪ್ರಯುಕ್ತ ನಾಡಿನ ಎಲ್ಲ ಜನತೆಗೆ ಶುಭಾಶಯ ತಿಳಿಸಿ, ಸಂಘಟಕ ಶಕ್ತಿಯಿಂದ ಸಂಘ ಸಂಸ್ಥೆಗಳು ಅಭಿವೃದ್ಧಿ ಹೊಂದುವುದರೊಂದಿಗೆ ಸಾಮಾಜಿಕ ಕಾಳಜಿಯನ್ನು ಮೆರೆಯುವ ಮೂಲಕ ನಾಡು ಕಟ್ಟುವ ಕೆಲಸ ಮಾಡುತ್ತಿವೆ ಎಂದು ಸಹಕಾರಿ ಬ್ಯಾಂಕ್ ಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. 

ಯಾವುದೇ ರಂಗವಿರಲಿ ಶ್ರಮ ವಹಿಸಿ ದುಡಿಯುವ ಮತ್ತು ಮತ್ತೊಬ್ಬರ ಕಾಳಜಿ ಬಯಸುವ ತಮ್ಮ ವರ್ಗಕ್ಕೂ ಸಹ ಆರ್ಥಿಕ ಭದ್ರತೆ ಬೇಕೆ ಬೇಕು. ಈ ಸದ್ವಿಚಾರ ಇಟ್ಟುಕೊಂಡು ಹುಟ್ಟು ಹಾಕಿರುವ ತಮ್ಮ ಸಹಕಾರಿ ಬ್ಯಾಂಕ್ ಉತ್ತರೋತ್ತರವಾಗಿ ಬೆಳೆಯಲು ಯಾವುದೇ ಅಡೆ ತಡೆ ಬಾರದಿರಲಿ ಎಂದು ಹಾರೈಸಿದರು. ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಸುರೇಶ್ ಹಾದಿಮನಿ, ಅಭಿವೃದ್ಧಿ ಅಧಿಕಾರಿ ಎಸ್ ಆರ್‌.ನ್ಯಾಮಗೌಡ, ಮುಧೋಳ ಒಕ್ಕೂಟ ಅಧ್ಯಕ್ಷ ನಿಂಗರಾಜ ಗುಡಿ, ಜನತಾ ಬಾಜಾರ ನಿರ್ದೇಶಕ ರಾಮಣ್ಣ ಹಿಡಕಲ್ ಮಾತನಾಡಿದರು. 

ತೇರದಾಳ ಶಾಸಕ ಸಿದ್ದು ಸವದಿ ಮತ್ತು ಮುಖ್ಯ ಅತಿಥಿಗಳು ರಬಕವಿ/ ಬನಹಟ್ಟಿ ಮತ್ತು ತೇರದಾಳ ತಾಲೂಕಿನ ಸಹಕಾರಿ ರಂಗದ ನೌಕರರು ಉಪಸ್ಥಿತರಿದ್ದರು. ಸಹಕಾರಿ ರಂಗದ ಪಿತಾಮಹ ಸಿದ್ಧನಗೌಡ ಪಾಟೀಲ್ ಮತ್ತು ಭಕ್ತ ಕನಕದಾಸ ಅವರ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿದರು. ಇದೆ ಸಂದರ್ಭದಲ್ಲಿ ಹೆಚ್ಚು ಅಂಕ ಗಳಿಸಿದ ನೌಕರ ಸಂಘದ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು. 

 ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಗುರುಶಾಂತಯ್ಯ ಹಿರೇಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕೆಎಂಎಫ್ ಚಂದ್ರಶೇಖರ ಆದಬಸಪ್ಪಗೋಳ, ಭರತೇಶ ಶಿರಹಟ್ಟಿ, ವರ್ಧಮಾನ ಕಡಪಟ್ಟಿ, ಅಶೋಕ ಬಾಡಗಿ ಮತ್ತು ಉಪಾಧ್ಯಕ್ಷ ಈರಣ್ಣ ಬೆಟಗೇರಿ,ಸಂಗಪ್ಪ ಹೊಸಮನಿ, ಲಕ್ಷ್ಮಣ ದಳವಾಯಿ, ಆನಂದ ಕಂಪು, ಸಂಜೀವ ಅಥಣಿ, ಮಹಾಂತೇಶ ಬಿದರಿ, ಸದಾಶಿವ ಹುಲಗಬಾಳಿ, ಲಕ್ಕಪ್ಪ ಆಲಗೂರ, ಭೀಮಪ್ಪ ಹುನ್ನೂರ, ದುಂಡಪ್ಪ ಪಟ್ಟಣಶೆಟ್ಟಿ, ಬಸಪ್ಪ ಗೌರವಗೋಳ ಮುಂತಾದವರಿದ್ದರು.ಕುಲಹಳ್ಳಿಯ ಅಲ್ತಾಫ್ ಪೂಜಾರಿ ನಿರೂಪಿಸಿ, ಕೃಷ್ಣಪ್ಪ ಯರಕದ್ ವಾರ್ಷಿಕ ವರದಿ ವಾಚಿಸಿ, ಕಾರ್ಯಕ್ರಮಕ್ಕೆ ವಂದಿಸಿದರು.