ಹಾವೇರಿ೧೭: ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ವಿವಿಧ ಅಧಿಕಾರಿಗಳನ್ನೊಳಗೊಂಡ ತಂಡ ಬುಧವಾರ ಬಂಕಾಪೂರ ಪಟ್ಟಣದ ಆಯ್ದ 19 ಅಂಗಡಿಗಳ ಮೇಲೆ ದಾಳಿ ನಡೆಸಿ ರೂ.2750 ದಂಡ ವಸೂಲಿ ಮಾಡಿದೆ.
ತಂಬಾಕು ನಿಯಂತ್ರಣ ಕಾಯ್ದೆ-2003ರ ವಿರುದ್ಧವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವ ಮತ್ತು ನೇರ-ಪರೋಕ್ಷವಾಗಿ ತಂಬಾಕು ಜಾಹೀರಾತು ಪ್ರದರ್ಶನ, ಶಾಲಾ-ಕಾಲೇಜು ಆವರಣದ 100 ಮೀಟರ್ ಅಂತರದೊಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟಮಾಡುತ್ತಿರುವ ಅಂಗಡಿ ಮಾಲೀಕರಿಗೆ ನೋಟೀಸ್ ಜಾರಿ ಮಾಡಿ ತಂಬಾಕು ನಿಯಂತ್ರಣ ಕಾಯ್ದೆ-2003ರ ಅಡಿಯಲ್ಲಿ ಕಲಂ-4ರಡಿಯಲ್ಲಿ ಹಾಗೂ ಕಲಂ 6ಬಿ ಅಡಿಯಲ್ಲಿ ರೂ.2750 ದಂಡ ವಸೂಲಿ ಮಾಡಲಾಗಿದೆ.
ದಾಳಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಸಲಹೆಗಾರರಾದ ಡಾ.ಸಂತೋಷ ವಿ.ದಡ್ಡಿ ಹಾಗೂ ದಾದಾಪೀರ ಹುಲಿಕಟ್ಟಿ, ಆಹಾರ ಸುರಕ್ಷತಾ ಅಧಿಕಾರಿ ಜಿ.ವಿ.ಕುಂದಗೋಳ, ಪುರಸಭೆ ಸಿಬ್ಬಂದಿ ರೂಪಾ ನಾಯಕ, ಶಹರ ಪೊಲೀಸ್ ಠಾಣೆಯ ಎಂ.ಎಸ್.ಕುರಿಯವರ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಎಸ್.ಬಿ.ಸಜರ್ಾಪೂರ, ಮಹೇಶ ಕುಮ್ಮೂರ ಇತತರು ಉಪಸ್ಥಿತರಿದ್ದರು.