ಹೈದರಾಬಾದ್,
ಡಿಸೆಂಬರ್ 20 ಕೇಂದ್ರ ಸರ್ಕಾರದ 'ಕಾರ್ಮಿಕ ವಿರೋಧಿ ನೀತಿಯ ವಿರುದ್ದ ಬರುವ ಜನವರಿ 8, ರಂದು
ದೇಶಾದ್ಯಂತ ನಡೆಯಲಿರುವ ಸಾರ್ವತ್ರಿಕ ಮುಷ್ಕರಕ್ಕೆ ಬ್ಯಾಂಕ್ ಕಾರ್ಮಿಕರ ಸಂಘಟನೆಗಳು ಬೆಂಬಲ ನೀಡಿವೆ. ಈ ಮುಷ್ಕರದಲ್ಲಿ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳು ಭಾಗವಹಿಸಲಿದ್ದಾರೆ. ನೀತಿಗಳು
ಮತ್ತು ಜನರ ವಿರೋಧಿ ಬ್ಯಾಂಕಿಂಗ್ ಸುಧಾರಣೆಗಳ ವಿರೋಧಿಸಿ
ಸಾರ್ವತ್ರಿಕ ಮುಷ್ಕರದಲ್ಲಿ ಭಾಗವಹಿಸುತ್ತಿರುವುದಾಗಿ ಎಐಬಿಇಎ, ಎಐಬಿಒಎ, ಬಿಇಎಫ್ಐ, ಐಎನ್ಬಿಇಎಫ್
ಮತ್ತು ಐಎನ್ಬಿಒಸಿ ಸಂಘಟನೆಗಳ ಮುಖಂಡರು ಹೇಳಿದ್ದಾರೆ.
ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ) ಪ್ರಧಾನ ಕಾರ್ಯದರ್ಶಿ ಚ.ವೆಂಕಟಾಚಲಂ ಅವರು
, ಆರ್ಬಿಐ, ಸಹಕಾರಿ ಬ್ಯಾಂಕುಗಳು, ಆರ್ಆರ್ಬಿಗಳು,
ಎಲ್ಐಸಿ ಮತ್ತು ಸಾಮಾನ್ಯ ವಿಮಾ ಕ್ಷೇತ್ರದ ನೌಕರರು ಸಹ ಮುಷ್ಕರದಲ್ಲೀ ಭಾಗಿಯಾಗಲಿದ್ದಾರೆ ಎಂದು ಸ್ಪಷ್ಟಪಡಿಸಿದರು. ರಕ್ಷಣಾ ಉತ್ಪಾದನೆ,
ಉಕ್ಕು, ತೈಲ ಕಲ್ಲಿದ್ದಲು, ರೈಲ್ವೆ, ಬಂದರುಗಳು, ರಸ್ತೆ ಸಾರಿಗೆ, ಶಿಕ್ಷಕರು, ಸರ್ಕಾರಿ ನೌಕರರು
ಸಹ ಮುಷ್ಕರಕ್ಕೆ ಬೆಂಬಲ ಕೊಡಲು ನಿರ್ಧರಿಸಿದ್ದಾರೆ
ಎಂದು ಅವರು ಹೇಳಿದರು.ಕೇಂದ್ರ ಕಾರ್ಮಿಕ ಸಂಘಗಲಾದ ಐಎನ್ಟಿಯುಸಿ, ಎಐಟಿಯುಸಿ, ಎಚ್ಎಂಎಸ್, ಸಿಐಟಿಯು,
ಎಐಯುಟಿಯುಸಿ, ಟಿಯುಸಿಸಿ, ಸೇವಾ , ಎಐಸಿಸಿಟಿಯು, ಎಲ್ಪಿಎಫ್ ಮತ್ತು ಯುಟಿಯುಸಿ ಜೊತೆಗೆ ವಿವಿಧ ಸ್ವತಂತ್ರ
ಕಾರ್ಮಿಕ ಒಕ್ಕೂಟಗಳು ಮುಷ್ಕರಕ್ಕೆ ಕರೆ ಕೊಟ್ಟಿವೆ
.ಹೆಚ್ಚುತ್ತಿರುವ ಬೆಲೆ ಏರಿಕೆ ಮತ್ತು ನಿರುದ್ಯೋದ ಪ್ರಮಾಣ, ಉದ್ಯೋಗದ ಹಕ್ಕು ಮತ್ತು ವೇತನದ ಹಕ್ಕನ್ನು ಖಾತರಿಪಡಿಸುವುದು,
ಉದ್ಯೋಗ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದು, ಶಾಶ್ವತ ಉದ್ಯೋಗಸೃಷ್ಟಿ ಮತ್ತು ಹೊರಗುತ್ತಿಗೆ ಪದ್ದತಿಗೆ ಕೊನೆ ಹಾಡುವುದು ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರಕ್ಕೆ ಕರೆ ಕೊಡಲಾಗಿದೆ.
ಕನಿಷ್ಠ ವೇತನವನ್ನು ರೂ. 21,ಸಾವಿರರ ರೂಗಳಿಗೆ ನಿಗದಿ ಮಾಡಬೇಕು, ಹೊಸ ಪಿಂಚಣಿ ಯೋಜನೆಯನ್ನು ರದ್ದುಪಡಿಸಬೇಕು. ಸಾರ್ವಜನಿಕ ಉದ್ಯಮಗಳನ್ನು ಖಾಸಗೀಕರಣಗೊಳಿಸಬಾರದು ಎಂದೂ ಆಗ್ರಹಪಡಿಸಲಾಗಿದೆ.