ಬ್ಯಾಂಕ್ ಕಂಪೌಂಡ್ ಗೋಡೆ ಕುಸಿದು ಗ್ರಾಹಕರಿಗೆ ಗಾಯ

ಲೋಕದರ್ಶನ ವರದಿ

ಖಾನಾಪುರ, 24: ಸಿಂಡಿಕೇಟ್ ಬ್ಯಾಂಕ್ ಖಾನಾಪುರ ಶಾಖೆಯ ಕಂಪೌಂಡ್ ಗೋಡೆ ಕುಸಿದು ಬ್ಯಾಂಕ್ ಗ್ರಾಹಕರಿಗೆ ಗಾಯವಾದ ಘಟನೆ ಸೋಮವಾರ ಮುಂಜಾನೆ ನಡೆದಿದೆ.  

ಚಾಪಗಾವಿ ಗ್ರಾಮದ ಐವರಿಗೆ ಗಾಯಗಳಾಗಿದ್ದು, ಅವರ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.  

ಘಟನೆ ಬಳಿಕ ಬ್ಯಾಂಕ್ ಮುಂದೆ ಉದ್ವಿಗ್ನ ಪರಿಸ್ಥಿತಿ ನಿಮರ್ಾಣವಾಗಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಜನರನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ.  

ಬ್ಯಾಂಕ್ ಮಾಕರ್ೆಟ್ ಮಧ್ಯದಲ್ಲಿದ್ದರಿಂದ ಜನದಟ್ಟಣೆ ಉಂಟಾಗಿ ಟ್ರಾಫಿಕ್ ಸಮಸ್ಯೆ ಯಾಗಿದೆ.  ಗಾಯಾಳುಗಳನ್ನು ಆಸ್ಪತ್ರಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.