ತ್ರಿಕೋನ ಟಿ-20 ಸರಣಿ ವೇಳಾಪಟ್ಟಿ ಬಿಡುಗಡೆ ಮಾಡಿದ ಬಾಂಗ್ಲಾದೇಶ

ದುಬೈ, ಆ 8      ಮುಂಬರುವ ಅಫ್ಘಾನಿಸ್ತಾನ ಹಾಗೂ ಜಿಂಬಾಬ್ವೆ ವಿರುದ್ಧದ ಟಿ-20 ತ್ರಿಕೋನ ಸರಣಿ ವೇಳಾಪಟ್ಟಿಯನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಗುರುವಾರ ಪ್ರಕಟಿಸಿದೆ. ಜತೆಗೆ, ಅಫ್ಘಾನಿಸ್ತಾನ ವಿರುದ್ಧ ಏಕೈಕ ಟೆಸ್ಟ್ ಪಂದ್ಯದ ವೇಳಾಪಟ್ಟಿಯು ಇದೇ ವೇಳೆ ಪ್ರಕಟಿಸಿದ್ದು, ಸೆ. 5 ರಿಂದ 9ರವರೆಗೆ ಚಿತ್ತಗಾಂಗ್ನಲ್ಲಿ ನಡೆಯಲಿದೆ. ಅಫ್ಘಾನಿಸ್ತಾನ ತಂಡ ಆ. 30 ರಂದು ಬಾಂಗ್ಲಾದೇಶಕ್ಕೆ ಆಗಮಿಸಲಿದ್ದು, ಟೆಸ್ಟ್ ಪಂದ್ಯಕ್ಕೂ ಮುನ್ನ ಎರಡು ದಿನಗಳ ಅಭ್ಯಾಸ ಪಂದ್ಯವಾಡಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯಿಂದ ರದ್ದಾಗಿರುವ ಜಿಂಬಾಂಬ್ವೆ ತಂಡಕ್ಕೆ ತ್ರಿಕೋನ ಸರಣಿ ಆಡಲು ಅನುಮತಿ ನೀಡಲಾಗಿದೆ.  ತ್ರಿಕೋನ ಟಿ-20 ಸರಣಿಗೂ ಮುನ್ನ ಜಿಂಬಾಬ್ವೆ ತಂಡ ಅಭ್ಯಾಸ ಪಂದ್ಯವಾಡಲಿದೆ. ಆಗಸ್ಟ್ 30 ರಂದೇ ಜಿಂಬಾಬ್ವೆ ತಂಡ ಬಾಂಗ್ಲಾಗೆ ಆಗಮಿಸಲಿದೆ. ಸೆಪ್ಟಂಬರ್ 13 ರಿಂದ ಟಿ-20 ತ್ರಿಕೋನ ಸರಣಿ ಆರಂಭವಾಗಲಿದೆ.  ಸೆ.13ರಂದು ಬಾಂಗ್ಲಾದೇಶ-ಜಿಂಬಾಂಬ್ವೆ ಮೊದಲ ಟಿ-20 ಪಂದ್ಯದಲ್ಲಿ ಮೀಪುರ್ನಲ್ಲಿ ಸೆಣಸಲಿವೆ. ಅಫ್ಘಾನಿಸ್ತಾನ ಮತ್ತು ಜಿಂಬಾಂಬ್ವೆ ಇದೇ ಅಂಗಳದಲ್ಲಿ ಸೆ. 14 ರಂದು ಎರಡನೇ ಪಂದ್ಯವಾಡಲಿವೆ. ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಸೆ.15 ರಂದು ಮೂರನೇ ಟಿ-20 ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.  ಸೆ. 18 ರಂದು ಬಾಂಗ್ಲಾದೇಶ ಮತ್ತು ಜಿಂಬಾಂಬ್ವೆ ತಂಡಗಳು ಐದನೇ ಟಿ-20 ಪಂದ್ಯದಲ್ಲಿ ಚಿತ್ತಗಾಂಗ್ನಲ್ಲಿ ಮುಖಾಮುಖಿಯಾಗಲಿವೆ. ಸೆ.20 ರಂದು ಅಫ್ಘಾನಿಸ್ತಾನ ಮತ್ತು ಜಿಂಬಾಂಬ್ವೆ ತಂಡಗಳು ಐದನೇ ಪಂದ್ಯದಲ್ಲಿ ಸೆಣಸಲಿವೆ. 21 ರಂದು ಬಾಂಗ್ಲಾ ಮತ್ತು ಆಫ್ಘಾನ್ ತಂಡಗಳು ಕಾದಾಟ ನಡೆಸಲಿದ್ದು, ಸೆ. 24 ರಂದು ಫೈನಲ್ ಪಂದ್ಯ ಜರುಗಲಿದೆ.