ಭಾರತ ಮಣಿಸಲು ಬಾಂಗ್ಲಾಗೆ ಉತ್ತಮ ಅವಕಾಶ: ವಿವಿಎಸ್ ಲಕ್ಷ್ಮಣ್

ನವದೆಹಲಿ, ಅ 31: ಮುಂಬರುವ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಟಿ-20 ಸರಣಿಯಲ್ಲಿ ಪ್ರವಾಸಿ ತಂಡದ ಮಧ್ಯಮ ಕ್ರಮಾಂಕ ಬಲಿಷ್ಟವಾಗಿದ್ದು, ಭಾರತಕ್ಕೆ ಕಠಿಣ ಸವಾಲು ಎದುರಾಗಲಿದೆ ಎಂದು ಟೀಮ್ ಇಂಡಿಯಾ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಅಭಿಪ್ರಾಯ ಪಟ್ಟಿದ್ದಾರೆ. ನವೆಂಬರ್ ಮೂರರಂದು ದೆಹಲಿಯ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ನಡೆಯುವ ಮೊದಲನೇ ಟಿ-20 ಪಂದ್ಯದಲ್ಲಿ ನಿಯಮಿತ ನಾಯಕ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದಿರುವ ಹಿನ್ನೆಲೆಯಲ್ಲಿ ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ.

 ಟಿ-20 ಸರಣಿಯಲ್ಲಿ ಬಾಂಗ್ಲಾದೇಶ ತಂಡವನ್ನು ಮಣಿಸುವುದು ಭಾರತಕ್ಕೆ ಕಷ್ಟವಾಗಲಿದೆ. ಏಕೆಂದರೆ, ಬಾಂಗ್ಲಾ ಚುಟುಕು ಸರಣಿಯಲ್ಲಿ ಅತ್ಯಂತ ಬಲಿಷ್ಟವಾದ ತಂಡವಾಗಿದೆ. ಆದಾಗ್ಯೂ 2-1 ಅಂತರದಲ್ಲಿ ಟೀಮ್ ಇಂಡಿಯಾ ಸರಣಿ ಗೆಲ್ಲುವ ಫೇವರಿಟ್ ಆಗಿದೆ ಎಂದು ಲಕ್ಷ್ಮಣ್ ಸ್ಟಾರ್ ಸ್ಪೋಟ್ರ್ಸ್ ಚಾನೆಲ್ ನ ಗೇಮ್ ಪ್ಲ್ಯಾನ್ ಶೋದಲ್ಲಿ ತಿಳಿಸಿದ್ದಾರೆ. ನಾಯಕ ರೋಹಿತ್ ಶರ್ಮಾ ಹಾಗೂ ಕೆ.ಎಲ್ ರಾಹುಲ್ ಅದ್ಭುತ ಲಯದಲ್ಲಿದ್ದಾರೆ. ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್ ಕೂಡ ಲಯದ ಹಾದಿಯಲ್ಲಿ ಇದ್ದಾರೆ. ಇವರ ಬ್ಯಾಟಿಂಗ್ ಬಲದಿಂದ ಭಾರತ ಸರಣಿ ಗೆಲ್ಲಲಿದೆ ಎಂದರು.

ಆದಾಗ್ಯ ಬಾಂಗ್ಲಾದೇಶ ತಂಡದ ಬಲಿಷ್ಟ ಬ್ಯಾಟಿಂಗ್ ಲೈನ್ ಅಪ್ ನೆರವಿನೊಂದಿಗೆ ಭಾರತವನ್ನು ಅವರದೇ ನೆಲದಲಿ ಸೋಲಿಸಲು ಇದೊಂದು ಅತ್ಯತ್ತಮ ಅವಕಾಶ ಎನ್ನುವುದನ್ನೂ ತಳ್ಳಿ ಹಾಕುವಂತಿಲ್ಲ. ಅಲ್ಲದೇ, ಬಾಂಗ್ಲಾದ ಮುಷ್ತಾಪಿಜೂರ್ ಅವರ ಮಾರಕ ದಾಳಿ ಕೂಡ ಭಾರತದ ಮೇಲೆ ಒತ್ತಡ ಹೇರಬಲ್ಲದು ಎಂದು ಅಭಿಪ್ರಾಯಪಟ್ಟರು.