ನವದೆಹಲಿ, ನ 2: ಕೆಲ ಹಿರಿಯ ಆಟಗಾರರ ಜತೆಗೆ ಬಹುತೇಕ ಯುವ ಆಟಗಾರರನ್ನು ಒಳಗೊಂಡಿರುವ ಟೀಮ್ ಇಂಡಿಯಾ ಮೂರು ಪಂದ್ಯಗಳ
ಟಿ-20 ಸರಣಿಯ ಮೊದಲನೇ ಹಣಾಹಣಿಯಲ್ಲಿ ನಾಳೆ ಬಾಂಗ್ಲಾದೇಶ ತಂಡವನ್ನು ಇಲ್ಲಿನ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ
ಎದುರಿಸಲು ಸಿದ್ಧವಾಗಿದೆ.
ಕಳೆದ ಎರಡು ದಿನಗಳ ಹಿಂದೆ ಇಲ್ಲಿಗೆ ಉಭಯ ತಂಡಗಳು ಆಗಮಿಸಿದ್ದವು. ದೀಪಾವಳಿ ಹಬ್ಬದ ಪ್ರಯುಕ್ತ ದೆಹಲಿಯ ವಾತವರಣ ಸಂಪೂರ್ಣ ಹದಗೆಟ್ಟಿದ್ದು, ಪಂದ್ಯವನ್ನು ಬೇರೆಡೆ ಸ್ಥಳಾಂತರ ಮಾಡಬೇಕೆಂದು ಒತ್ತಡ ಕೇಳಿ ಬಂದಿತ್ತು. ಆದರೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕೆಲ ಸಮಸ್ಯೆಗಳಿಂದ ಪಂದ್ಯವನ್ನು ಸ್ಥಳಾಂತರ ಮಾಡುವ ನಿರ್ಧಾರವನ್ನು ಕೊನೆಯ ಕ್ಷಣದಲ್ಲಿ ಕೈ ಬಿಟ್ಟಿತ್ತು.
ರಾಜಧಾನಿಯ ವಾಯು ಗುಣಮಟ್ಟ ಕಲುಷಿತಗೊಂಡಿರುವ ಕಾರಣ ಬಾಂಗ್ಲಾ ಆಟಗಾರರು ಮಾಸ್ಕ್ ಗಳನ್ನು ಹಾಕಿಕೊಂಡು ಅಭ್ಯಾಸ ನಡೆಸಿದ್ದರು. ಬಾಂಗ್ಲಾ ತಂಡ ಈ ಸರಣಿ ಆರಂಭ ಮುನ್ನವೇ ಶಕೀಬ್ ಅಲ್ ಹಸನ್ ಅವರನ್ನು ಎರಡು ವರ್ಷಗಳ ಕಾಲ ಅಮಾನತುಗೊಳಿಸಲಾಗಿದೆ. ಇದು ತಂಡದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಭಾರತ ತಂಡ ಮೊದಲನೇ ಹಣಾಹಣಿಗೆ ಸಿದ್ಧವಾಗಿದ್ದು, ಬೌಲಿಂಗ್ ವಿಭಾಗದಲ್ಲಿ ಯಾರಿಗೆ ಅವಕಾಶ ನೀಡಬಹುದು ಎಂಬ ಬಗ್ಗೆೆ ಇನ್ನೂ ಬಹಿರಂಗ ಪಡಿಸಿಲ್ಲ. ಆದರೆ, ಮುಂಬೈ ಆಲ್‌ರೌಂಡರ್ ಶಿವಂ ದುಬೆ, ಶಾರ್ದೂಲ್ ಠಾಕೂರ್, ಹಾಗೂ ರಾಜಸ್ಥಾನದ ದೀಪಕ್ ಚಾಹರ್ ಅವರಿಗೆ ವೇದಿಕೆ ಕಲ್ಪಿಸಬಹುದು.
ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ-20 ವಿಶ್ವಕಪ್ ಗೆ ಭಾರತಕ್ಕೆೆ ಇನ್ನೂ 20 ಪಂದ್ಯಗಳು ಬಾಕಿ ಇವೆ. ಹಾಗಾಗಿ, ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಕೋರ್ ಆಟಗಾರರನ್ನು ಗುರುತಿಸಿಕೊಳ್ಳುವ ಸಾಧ್ಯತೆ ಇದೆ. ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿರುವ ನಾಯಕ ರೋಹಿತ್ ಶರ್ಮಾ ಅದೇ ಲಯವನ್ನು ಚುಟುಕು ಕ್ರಿಕೆಟ್ ನಲ್ಲಿ ಮುಂದುವರಿಸುವ ತುಡಿತದಲ್ಲಿದ್ದಾರೆ. ಆದರೆ, ಇವರ ಆರಂಭಿಕ ಜತೆಗಾರ ಶಿಖರ್ ಧವನ್ ಅವರ ಮೇಲೆ ದೊಡ್ಡ ಇನಿಂಗ್ಸ್ ನಿರೀಕ್ಷೆೆ ಇದೆ. ಇವರು ಹೆಬ್ಬೆೆರಳು ಗಾಯದಿಂದ ಚೇತರಿಸಿಕೊಂಡು ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗೆ ಮರಳಿದ್ದರು. ಈ ಸರಣಿಯಲ್ಲಿ 36 ಮತ್ತು 40 ರನ್ ಎರಡು ಪಂದ್ಯಗಳಿಂದ ಗಳಿಸಿದ್ದರು. ವಿಜಯ್ ಹಜಾರೆ ಟ್ರೋಫಿಯಲ್ಲೂ ಏಳು ಪಂದ್ಯಗಳಿಂದ ಕೇವಲ ಒಂದು ಅರ್ಧ ಶತಕ ಗಳಿಸಿದ್ದರು.
ಮಧ್ಯಮ ಕ್ರಮಾಂಕದಲ್ಲಿ ಕೆ.ಎಲ್ ರಾಹುಲ್, ಶ್ರೇಯಸ್ ಅಯ್ಯರ್, ಕೃನಾಲ್ ಪಾಂಡ್ಯ, ಹಾಗೂ ಸ್ಥಳೀಯ ಹುಡುಗ ರಿಷಭ್ ಪಂತ್ ಆಡಲಿದ್ದಾರೆ. ಶಿವಂ ದುಬೆ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವಾಡುವ ತುಡಿತದಲ್ಲಿದ್ದಾರೆ. ಒಂದು ವೇಳೆ ಶಿವಂ ದುಬೆಗೆ ಅವಕಾಶ ನೀಡಿದ್ದೇ ಆದಲ್ಲಿ ಮನೀಶ್ ಪಾಂಡೆ ಅವಕಾಶ ಕಳೆದುಕೊಳ್ಳಲಿದ್ದಾರೆ. ಇನ್ನುಳಿದ ಸ್ಥಾನಗಳಲ್ಲಿ ಯಜುವೇಂದ್ರ ಚಾಹಲ್, ಖಲೀಲ್ ಅಹಮದ್, ದೀಪಕ್ ಚಾಹರ್ ಹಾಗೂ ವಾಷಿಂಗ್ಟನ್ ಸುಂದರ್ ಕಾಣಿಸಿಕೊಳ್ಳಲಿದ್ದಾರೆ.
ಧವನ್ ರೀತಿ ಯಜುವೇಂದ್ರ ಚಾಹಲ್ ಅವರೂ ತಂಡಕ್ಕೆೆ ಮರಳಿದ್ದು, ಇಲ್ಲಿನ ಅಂಗಳ ನಿಧಾನಗತಿಯಿಂದ ಕೂಡಿದೆ. ಹಾಗಾಗಿ, ಚಾಹಲ್ ಹಾಗೂ ವಾಷಿಂಗ್ಟನ್ ಸುಂದರ್ ಅವರ ಬೌಲಿಂಗ್‌ಗೆ ಹೊಂದಾಣಿಕೆ ಆಗುವ ಸಾಧ್ಯತೆ ಇದೆ. ಇವರ ಜತೆ ರಾಹುಲ್ ಚಾಹರ್ ಅವರ ಆಯ್ಕೆಯೂ ಉತ್ತಮವಾಗಿದೆ. ಇನ್ನೂ ಎದುರಾಳಿ ಬಾಂಗ್ಲಾದೇಶ ತಂಡ, ಅಫ್ಘಾನಿಸ್ತಾನ ವಿರುದ್ಧ ಕಳೆದ ಟೆಸ್ಟ್ ಸರಣಿಯಲ್ಲಿ ಸೋತು ಮುಖಭಂಗ ಅನುಭವಿಸಿತ್ತು. ನಂತರ, ಟಿ-20 ಸರಣಿಯಲ್ಲಿ ಹೇಳಿಕೊಳ್ಳುವಂಥ ಪ್ರದರ್ಶನ ತೋರಿರಲಿಲ್ಲ. ಆಡಿದ ನಾಲ್ಕು ಪಂದ್ಯಗಳಿಂದ ಮೂರರಲ್ಲಿ ಜಯ ಸಾಧಿಸಿತ್ತು.
ಪ್ರಸ್ತುತ ಬಾಂಗ್ಲಾದೇಶ ಉತ್ತಮ ಸವಾಲು ನೀಡುವಲ್ಲಿ ಯಶಸ್ವಿಯಾಗಿದೆ. ಮಹ್ಮುದುಲ್ಹಾ ರಿಯಾದ್ ಅವರ ನೇತೃತ್ವದ ಬ್ಯಾಟಿಂಗ್ ಲೈನ್ ಅಪ್ ಬಲಿಷ್ಟವಾಗಿದೆ. ಆದರೆ, ಶಕೀಬ್ ಅಲ್ ಹಸನ್ ಅವರ ಸೇವೆಯನ್ನು ಕಳೆದುಕೊಂಡಿರುವುದು ತಂಡಕ್ಕೆೆ ದೊಡ್ಡ ನಷ್ಟವಾಗಿದೆ. ಅವರ ಅನುಪಸ್ಥಿಯಲ್ಲಿ ಲಿಟಾನ್ ದಾಸ್, ಮುಷ್ತಿಕ್ಯೂರ್ ರಹೀಮ್ ಹಾಗೂ ಸೌಮ್ಯಾ ಸರ್ಕಾರ್ ಅವರ ಮೇಲೆ ಹೆಚ್ಚು ಜವಾಬ್ದಾರಿ ಇದೆ.
ಸಂಭಾವ್ಯ ಆಟಗಾರರು
ಸ್ಥಳ: ಅರುಣ್ ಜೇಟ್ಲಿ
ಕ್ರಿಕೆಟ್ ಕ್ರೀಡಾಂಗಣ, ದೆಹಲಿ