ಬೆಂಗಳೂರು - ನಲ್ಲೂರು, ಮಂತ್ರಾಲಯ ಮೂಲಕ ಬೆಂಗಳೂರು ರಾಯಚೂರು ಹೊಸ ಬಸ್ ಸಂಚಾರ

ಬೆಂಗಳೂರು, ಜ 10:     ಬೆಂಗಳೂರು-ನೆಲ್ಲೂರು, ಮಂತ್ರಾಲಯ ಮೂಲಕ ಬೆಂಗಳೂರು-ರಾಯಚೂರು ಮಾರ್ಗಗಳಲ್ಲಿ ಹೊಸದಾಗಿ ಸಾರಿಗೆ ಬಸ್ ಗಳನ್ನು ಕೆ.ಎಸ್.ಆರ್ಟಿ.ಸಿ. ಆರಂಭಿಸಿದೆ.   

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ, ಬೆಂಗಳೂರು ಕೇಂದ್ರೀಯ ವಿಭಾಗದಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು-ರಾಯಚೂರು ವಯಾ ಮಂತ್ರಾಲಯ, ಬೆಂಗಳೂರು-ನೆಲ್ಲೂರು ಮಾರ್ಗಗಳಲ್ಲ್ಲಿ ಅಂಬಾರಿ ಡ್ಡಿರೀಮ್ ಕ್ಲಾಸ್ (ಎ.ಸಿ ಸ್ಲೀಪರ್) ಸಾರಿಗೆ ವ್ಯವಸ್ಥೆಯನ್ನು ಇದೇ 13 ರಿಂದ ಪ್ರಾರಂಭಿಸಲಾಗುತ್ತಿದೆ.

ಬೆಂಗಳೂರು- ನೆಲ್ಲೂರು ವಯಾ ತಿರುಪತಿ, ಶ್ರೀಕಾಳಹಸ್ತಿ,  ಅಂಬಾರಿ ಡ್ರೀಮ್ ಕ್ಲಾಸ್ (ಎ.ಸಿ ಸ್ಲೀಪರ್), ಬೆಂಗಳೂರು-ರಾಯಚೂರು ವಯಾ ಚಿಕ್ಕಬಳ್ಳಾಪುರ, ಅನಂತಪುರ, ಮಂತ್ರಾಲಯ, ಅಂಬಾರಿ ಡ್ರೀಮ್ ಕ್ಲಾಸ್ (ಎ.ಸಿ ಸ್ಲೀಪರ್) ವಾಹನಗಳನ್ನು ಆರಂಭಿಲಾಗುತ್ತಿದೆ ಎಂದು ಕೆ.ಎಸ್.ಅರ್ಟಿ.ಸಿ ಪ್ರಕಟಣೆ ತಿಳಿಸಿದೆ.