ಬೆಂಗಳೂರು 24: ಇಲಾಖಾ ಪರೀಕ್ಷೆಗೆ ಮೇಲಾಧಿಕಾರಿಯಿಂದ ಅನುಮತಿ ಪತ್ರ ಬೇಡ: ಕೆಪಿಎಸ್ ಸಿ ಆದೇಶ

ಬೆಂಗಳೂರು 24: ಲೋಕಸೇವಾ ಆಯೋಗ 2020ನೇ ಸಾಲಿನ ಪ್ರಥಮ ಇಲಾಖಾ ಪರೀಕ್ಷೆಗೆ ಮೇಲಾಧಿಕಾರಿಯಿಂದ ಅನುಮತಿ ಪತ್ರ (ಎನ್ ಒಸಿ) ಪಡೆಯುವ ಪ್ರಕ್ರಿಯೆಯನ್ನು ರದ್ದುಗೊಳಿಸಿದೆ.

 2020ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಡಿಸೆಂಬರ್ 2019ರ ಅಧಿಸೂಚನೆಯಲ್ಲಿ ನೌಕರರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ತಮ್ಮ ಕಚೇರಿಯ ಮೇಲಾಧಿಕಾರಿಯಿಂದ ಎನ್ ಒಸಿ ಪಡೆಯುವುದು,ಮೇಲಾಧಿ ಕಾರಿ ಯಿಂದ ಲಿಖಿತ ಅನುಮತಿ ಪಡೆದು, ಆನ್‌ಲೈನ್ ಅರ್ಜಿಯೊಂದಿಗೆ ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿತ್ತು.

 ಇದೀಗ ಲೋಕಸೇವಾ ಆಯೋಗ ಈ ನಿಯಮವನ್ನು ಸಡಿಲಗೊಳಿಸಿದೆ.ಇಲಾಖಾ ಪರೀಕ್ಷಾ ರ್ಥಿ ನೌಕರರು ಮೇಲಾಧಿಕಾರಿಯಿಂದ ಎನ್ ಒಸಿ ಹಾಗೂ ಲಿಖಿತ ಅನುಮತಿ ಪತ್ರ ಪಡೆ ಯುವುದನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.ಹೀಗಾಗಿ ಪರೀಕ್ಷಾರ್ಥಿಗಳು ಅರ್ಜಿ ಸಲ್ಲಿಸುವಾಗ ತಮ್ಮ ಇಲಾಖೆಯ ಮೇಲಾಧಿಕಾರಿಗಳ ಅನುಮತಿ ಪಡೆಯುವ ಅಗತ್ಯ ಇಲ್ಲ.