ನೆಲಕ್ಕುರುಳಿದ ಬಾಳೆ: ಲಕ್ಷಾಂತರ ರೂ.ಬೆಳೆ ಹಾನಿ

ಲೋಕದರ್ಶನ ವರದಿ

ಹೂವಿನಹಡಗಲಿ:ಏ.10-ತಾಲೂಕಿನ ಇಟ್ಟಿಗಿ, ಹೂವಿನಹಡಗಲಿ,ಹಿರೇಹಡಗಲಿ, ಹೋಬಳಿಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಹಾಗೂ ನದಿ ತೀರದ ಪ್ರದೇಶದಲ್ಲಿ ಸೋಮವಾರ ಸಂಜೆ ಅತಿ ವೇಗವಾಗಿ ಬಂದ ಗಾಳಿ,ಗುಡುಗು ,ಅಕಾಲಿಕ ಆಲಿಕಲ್ಲು ಮಳೆಯಿಂದ ಲಕ್ಷಾಂತರ ರೂ.ತೋಟಗಾರಿಕೆ ಬೆಳೆ ಸೇರಿದಂತೆ ಕೆಲವೆಡೆ ಆಸ್ತಿಪಾಸ್ತಿಗೆ ಹಾನಿಯಾಗಿದೆ.

 ತಾಲೂಕಿನ ನದಿ ತೀರದ ಹಳ್ಳಿಗಳಲ್ಲಿ ಆಲಿಕಲ್ಲು ಮಳೆ ಸುರಿದಿದ್ದು, ಮಳೆ ಗಾಳಿ ರಭಸಕ್ಕೆ ತೋಟದಲ್ಲಿ ಕಾಯಿ ಕಟ್ಟುವ ಹಂತದಲ್ಲಿದ್ದ ಬಾಳೆ ಬೆಳೆ ಪೂರ್ಣ ನೆಲಕ್ಕುರುಳಿದ್ದು ಸುಮಾರು ಲಕ್ಷಾಂತರ ರೂ.ನಷ್ಟ ಸಂಭವಿಸಿದೆ.

ಅಕಾಲಿಕ ಬೆಳೆಯಿಂದ ಮಾಗಳದ ರೈತ ಹೆಚ್.ಬಸವರಾಜ ಸೇರಿದ 2.50 ಎಕರೆ ಬಾಳೆ  ಬೆಳೆ ಹಾನಿಗೀಡಾಗಿದ್ದು,3 ಲಕ್ಷ ರೂ. ಹೆಚ್ಚು ಬೆಳೆ ಹಾನಿ ಸಂಭವಿಸಿದೆ.ಗಾಳಿ ಮಳೆಗೆ ಭತ್ತ ಬೆಳೆ ಸಂಪೂರ್ಣ ಹಾನಿಯಾಗಿದೆ.ಬೆಳೆ ಕೈಗೆ ಬಂದರೂ ಬಾಯಿಗೆ ಬರಲಿಲ್ಲ ಎಂಬಂತಾಗಿದೆ.ಮನೆಯ ಸಿಮೇಟ್ ತಗಡುಗಳು ಹಾರಿ ಹೋಗಿವೆ.

  ಸಾಲ ಮಾಡಿ ರೈತರು ಬೇಸಿಗೆಯಲ್ಲಿ ತೋಟಅಗರಿಕೆ ಬೆಳೆಗೆ ಮುಂದಾಗಿದ್ದಾರೆ.ವಿದ್ಯತ್ ಸಮಸ್ಯೆ ಒಂದೆಡೆ ಕಾಡುತ್ತಿದ್ದರೆ,ಇದೀಗ ಅಕಾಲಿಕ ಮೆಳೆ-ಗಾಳಿಯಿಂದ ಬಾಳೆ ಬೆಳೆ ನೆಲಕ್ಕುರುಳುವ ಮೂಲಕ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ತಂದಿದೆ. ಇದರಿಂದ ಹಾನಿಗೊಳಗಾದ ರೈತರಿಗೆ ದಿಕ್ಕು ತಪ್ಪಿದಂತಾಗಿದೆ.ಸಂಬಂಧಿಸಿದ ಅಧಿಕಾರಿಗಳು ಈ ತಕ್ಷಣವೇ ಹಾನಿಯನ್ನು ಪರಿಶೀಲಿಸಿ ಸಕರ್ಾರದಿಂದ ಪ್ರಕೃತಿ ವಿಕೋಪದ ಪರಿಹಾರ ಕೊಡಿಸಬೇಕೆಂದು ಸಕರ್ಾರವನ್ನು ತಹಶೀಲ್ದಾರರ ಮೂಲಕ ಬೆಳೆ ನಷ್ಟದ ಪರಿಹಾರ ಕೊಡಬೇಕೆಂದು ಒತ್ತಾಯಿಸಿದ್ದಾರೆ.

ಭೇಟಿ : ತಾಲೂಕಿನ ಮಾಗಳ ಗ್ರಾಮದ ಹಾನಿಗೀಡಾದ ಬಾಳೆ ಬೆಳೆ ಮತ್ತು ಭತ್ತ ಬೆಳೆಯನ್ನು ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಮಾಗಳ ಗ್ರಾಮದ ರೈತ ಹೆಚ್.ಬಸವರಾಜ 2.50ಎಕರೆ ಯಲ್ಲಿ ಬೆಳೆದ ಬಾಳೆ ಕಾಯಿ ಕಟ್ಟುವ ಹಂತದಲ್ಲಿದ್ದು, ಇದೀಗ ಸಂಪೂರ್ಣ ಬಾಳೆ ಬೆಳೆ ನೆಲಕ್ಕುರುಳಿ 3ಲಕ್ಷ ಕ್ಕೂ ಹೆಚ್ಚು ಬೆಳೆ ನಷ್ಟವಾಗಿದೆ.ತಾಲೂಕಿನ ನದಿ ತೀರದದಲ್ಲಿ ತೋಟಗಾರಿಕೆ ಬೆಳೆ ಬಾಳೆ, ಭತ್ತ, ಸೇರಿದಂತೆ ನಾನಾ ಬೆಳೆಗಳು ಹಾನಿಗೀಡಾಗಿವೆ.