ಚೆನ್ನೈ, ಜೂನ್ ೩೦ : ಟಿಕ್ ಟಾಕ್ , ಯುಸಿ ಬ್ರೌಸರ್ ಸೇರಿ ಚೈನಾದ ೫೯ ಆ?ಯಪ್‌ಗಳನ್ನು ನಿಷೇಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿಸಿರುವ ಕಾಂಗ್ರೆಸ್ ನಾಯಕ, ತಮಿಳುನಾಡು ಸಂಸದ ಮಾಣಿಕ್ಯಂ ಠಾಗೋರ್. ಇದೇ ಮಾದರಿಯಲ್ಲಿ ಇ-ಕಾಮರ್ಸ್ ಅಪ್ಲಿಕೇಷನ್ ಪೇಟಿಎಂ ಅನ್ನು ದೇಶದಲ್ಲಿ ನಿಷೇಧಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದ್ದಾರೆ. ಚೀನಾದ ಪ್ರಮುಖ ಹೂಡಿಕೆಯನ್ನು ಒಳಗೊಂಡಿರುವ ಪೇಟಿಯಂ ಅನ್ನು ನಿಷೇಧಿಸಬೇಕು ಎಂದು ಮಾಣಿಕಮ್ ಟ್ಯಾಗೋರ್ ಟ್ವೀಟ್ ಮಾಡಿದ್ದಾರೆ.ಚೈನಾದ ಕಂಪನಿಗಳಾದ ಅಂಟ್ ಫೈನಾನ್ಷಿಯಲ್ಸ್, ಅಲಿಬಾಬಾ ಗುಂಪಿನಿಂದ ಪೇಟಿಯಂನಲ್ಲಿ ಶೇ ೨೯.೧೭, ಶೇ ೭.೧೮ ಬಂಡವಾಳ ಹೂಡಿವೆ ಎಂಬುದನ್ನು ವಿವರಿಸುವ ವಿಕಿಪಿಡಿಯಾ ಪುಟದ ಸ್ಕ್ರೀನ್ ಶಾಟ್ ಗಳನ್ನು ತಮ್ಮ ಟ್ವೀಟ್ ಗೆ ಟ್ಯಾಗ್ ಮಾಡಿರುವ ಮಾಣಿಕಮ್, ಚೈನಾದ ಬೃಹತ್ ಹೂಡಿಕೆಹೊಂಡಿರುವ ಪೇಟಿಎಂ ಅನ್ನು ಕೂಡಲೇ ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ. ಅಲಿಬಾಬಾ ಗುಂಪು ಹಾಗೂ ಆಂಟ್ ಫೈನಾನ್ಷಿಯಲ್ಸ್ ಕೂಡಾ ಚೀನಾದ ಬಹುರಾಷ್ಟ್ರೀಯ ಕಂಪನಿಗಳೆಂದು ಅವರು ಹೇಳಿದ್ದಾರೆ. ದೇಶದಲ್ಲಿ ಸ್ಥಳೀಯ ಉತ್ಪನ್ನಗಳ ಬಳಕೆ ಹೆಚ್ಚಿಸಿ, ವಿದೇಶಿ ಉತ್ಪನ್ನಗಳನ್ನು ಕಡಿಮೆ ಮಾಡುವಂತೆ ಕರೆ ನೀಡಿರುವ ಮೋದಿ ಅವರು ಪೇಟಿಎಂ ಅನ್ನು ನಿಷೇಧಿಸಬೇಕು ಎಂದು ಕೋರಿದ್ದಾರೆ.