ಬಳ್ಳಾರಿ: ನಗರ ಸಂಸ್ಥೆಗಳ ಚುನಾವಣೆ ಅಧಿಸೂಚನೆ ಪ್ರಕಟ

ಬಳ್ಳಾರಿ 09: ಬಳ್ಳಾರಿ ಜಿಲ್ಲೆ-ನಗರ, ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ-2019ರ ಪುರಸಭೆ, ಸಂಡೂರು, ಹಡಗಲಿ, ಹರಪನಹಳ್ಳಿ ಹಾಗೂ ಕಮಲಾಪುರ ಪಟ್ಟಣ ಪಂಚಾಯಿತಿಯ ಸದಸ್ಯರುಗಳ ಸ್ಥಾನಗಳಿಗೆ ಮೇ 29ರಂದು ಸಾರ್ವತ್ರಿಕ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗವು ಅಧಿಸೂಚನೆ ಹೊರಡಿಸಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೂವಿನ ಹಡಗಲಿ ಒಟ್ಟು 23 ವಾಡರ್್ಗಳಲ್ಲಿ, ಹರಪನಹಳ್ಳಿಯ ಒಟ್ಟು 27 ವಾಡರ್್ಗಳಲ್ಲಿ, ಸಂಡೂರು ಒಟ್ಟು 23 ವಾರ್ಡ್ಗಳಲ್ಲಿ  ಹಾಗೂ ಕಮಲಾಪುರದ 20 ವಾಡರ್್ಗಳಿಗೆ ಚುನಾವಣಾ ಪ್ರಕ್ರಿಯೆ ನಡೆಯಲಿದೆ. ಅಭ್ಯರ್ಥಿಗಳ ಕೊಳ್ಳಲು ಮೇ 20ರಂದು ಕೊನೆಯ ದಿನವಾಗಿರುತ್ತದೆ. ಮತದಾನ ಅವಶ್ಯವಿದ್ದಲ್ಲಿ ಮೇ 29 ರಂದು ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.