ನಿಸರ್ಗ ಚಿಕಿತ್ಸಾ ಕ್ರಮದಿಂದ ದೇಹದ ಸಮತೋಲನ

ಲೋಕದರ್ಶನವರದಿ

ಶಿಗ್ಗಾವಿ : ನಿಸ್ವಾರ್ಥತತೆಯ, ನಿರರ್ಗಳತೆಯ ತಾಣ ಮತ್ತು ಲೌಕಿಕ, ಅಲೌಕಿಕ, ಆಧ್ಯಾತ್ಮಿಕ ಮತ್ತು ಪಾರಮಾಥರ್ಿಕಥೆಗಳ ಅಪೂರ್ವ ಸಂಗಮವೇ ಪ್ರಕೃತಿ ಚಿಕಿತ್ಸೆಯಾಗಿದೆ, ಯೋಗ ಮತ್ತು ನೈತಿಕ ಶಿಕ್ಷಣ ಪ್ರಕೃತಿ ಚಿಕಿತ್ಸೆಗೆ ಹೊಂದಿಕೊಂಡಿವೆ ಎಂದು ಹಾವೇರಿ ಜಿಲ್ಲೆಯ ಜಿಲ್ಲಾ ಆಯುಷ ಅಧಿಕಾರಿಗಳಾದ ಡಾ ಎ ಎಸ್ ಶೀರೊಳ ಹೇಳಿದರು.

ಪಟ್ಟಣದ ಸಂಗನಬಸವ ಮಂಗಲ ಭವನದಲ್ಲಿ ನಡೆದ ರಾಷ್ಟ್ರೀಯ ಪ್ರಾಕೃತಿಕ ಚಿಕಿತ್ಸಾ ಸಂಸ್ಥೆ-2019ರ ವತಿಯಿಂದ ಹಮ್ಮಿಕೊಂಡ ಪ್ರಕೃತಿ ಚಿಕಿತ್ಸಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿ ಅವರು, ಪ್ರಕೃತಿಗೆ ನಮಗೆ ಶ್ರೀರಕ್ಷೆ ಈ ಪುಣ್ಯ ಪ್ರಕೃತಿಯ ರಮ್ಯ ತಾಣದ ಮಧ್ಯದಲ್ಲಿ ಸಿಗುವ ಚಿಕಿತ್ಸೆಯೇ ಪ್ರಕೃತಿ ಚಿಕಿತ್ಸೆ, ಯಾವುದೇ ಕಾಯಿಲೆಗಳಿರಲಿ ಚುಚ್ಚು ಮದ್ದುಗಳಿಲ್ಲದೆ, ಗುಳಿಗೆಗಳಿಲ್ಲದೆ ಜೊತೆಗೆ ಯಾವುದೇ ಟಾನಿಕ್ ಇಲ್ಲದೆ ಆಧುನಿಕ ವೈಜ್ಞಾನಿಕತೆಯ ಸೊಂಕು ಇಲ್ಲದೆ ಪ್ರಾಚೀನ ದೈವದತ್ತ ಪಂಚ ಭೂತಗಳಿಂದ ನಿಮರ್ಿತವಾದ ಈ ಶರೀರಕ್ಕೆ ಪಂಚ ಭೂತಗಳನ್ನೆ ಮಾಧ್ಯವನ್ನಾಗಿ ಬಳಸಿ ರೋಗವನ್ನು ದೂರ ಮಾಡುವ ನಿಸರ್ಗ ಚಿಕಿತ್ಸಾ ಕ್ರಮ ದೇಹದ ಸಮತೋಲವನ್ನು ಸಾಧಿಸುವ ಚಿಕಿತ್ಸೆಯಾಗಿದೆ  ಎಂದರು.

ಭಾರತ್ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ ದೇವರ ದಯೇಯಾದ ನಿಸರ್ಗವೇ ನಮ್ಮೆಲ್ಲರ ಚಟುವಟಿಕೆಗಳಿಗೆ ಮೂಲ, ಯಾವುದೇ ದುಷ್ಪರಿಣಾಮವಿಲ್ಲದೆ ಕಡಿಮೆ ಖಚರ್ಿನಲ್ಲಿ ಚಿಕಿತ್ಸೆಗಳು ದೊರೆಯುವದು ವಿರಳ, ಮಣ್ಣಿನ ಹಾಗೂ ಆಹಾರ ಉಪಚಾರಗಳನ್ನು ಬಳಸಿ ಅಲ್ಲದೆ ಆಧುನಿಕ ಪರಿಕರಗಳನ್ನು ಬಳಸದೇ ನೀಡುವ ಚಿಕಿತ್ಸೆ ಬಹಳ ಪರಿಣಾಮಕಾರಿಯಾಗಿದೆ, ಇಂದು ಯೋಗ ಪ್ರಚಾರ ಅನುಸರಣೆಯಲ್ಲಿದ್ದರು ಅದು ಒಂದು ದಿನಕ್ಕೆ ಸಿಮೀತವಾಗುತ್ತಿದೆ ಆ ರೀತಿಯಾಗದೆ ಯೋಗಕ್ಕೆ ಇನ್ನೂ ಹೆಚ್ಚಿನ ಪ್ರಾಧ್ಯಾನ್ಯತೆ ಸಿಗುವಂತಾಗಬೇಕು ಎಂದರು.

ಹಾವೇರಿ ಸುಮುಕಾ ಆಸ್ಪತ್ರೆಯ ವೈದ್ಯ ಡಾ. ಗುಹೆಶ್ವರ ಪಾಟೀಲ್ ಮಾತನಾಡಿದರು. ಹಾವೇರಿ ಹುಕ್ಕೆರಿ ಮಠದ ಸದಾಶಿವ ಮಹಾಸ್ವಾಮಿಗಳು ಹಾಗೂ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಕಾರ್ಯಕ್ರಮದ ಭಾಗವಹಿಸಿ ಆಶಿರ್ವಚಿಸಿದರು.

ಕಾರ್ಯಕ್ರಮದಲ್ಲಿ ವಿವಿದ ಶಾಲೆಗಳಲ್ಲಿ ಏರ್ಪಡಿಸಿದ್ದ ಚಿತ್ರಕಲೆ ಮತ್ತು ಯೋಗ ಸ್ಪಧರ್ಾಳುಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. 

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಯೋಗಾ ಅಸೋಷಿಯೆಶನ್ನ ಆಡಾಳಿತಾಧಿಕಾರಿ ಪ್ರೇಮಕುಮಾರ ಮುದ್ದಿ, ವಿನಾಯಕ ಯಲಿಗಾರ, ಪ್ರಕಾಶ ಬೆಂಡಿಗೇರಿ ಸೇರಿದಂತೆ ಯೋಗಾ ಶಿಭಿರಾಥರ್ಿಗಳು, ವಿವಿದ ಶಾಲೆಗಳಿಂದ ಆಗಮಿಸಿದ ವಿದ್ಯಾಥರ್ಿಗಳು ಇದ್ದರು.