ಲೋಕದರ್ಶನ ವರದಿ
ಕೊಪ್ಪಳ 12: ಮುಸ್ಲಿಂ ಸಮುದಾಯದ ಪವಿತ್ರ ಹಾಗೂ ತ್ಯಾಗ ಬಲಿದಾನದ ಪ್ರತೀಕ ಈದ್ದುದುಹಾ ಬಕ್ರೀದ್ ಹಬ್ಬ ಸಂಭ್ರಮದಿಂದ ಶಾಂತಿಯುತವಾಗಿ ಆಚರಿಸಲಾಯಿತು. ನಗರದ ಎರಡು ಈದ್ಗಾ ಮೈದಾನದಲ್ಲಿ ಸಹಸ್ರಾರು ಸಂಖ್ಯೆಯ ಮುಸ್ಲಿಂಮರು ಸಾಮೂಹಿಕ ಪ್ರಾರ್ಥನೆ ನಡೆಸಿ ಪರಸ್ಪರ ಹಬ್ಬದ ಶುಭಾಷಯಗಳನ್ನು ವಿನಿಮಯ ಮಾಡಿಕೊಂಡರು. ಅದರಂತೆ ಜಿಲ್ಲಾದ್ಯಂತ ಸಂಭ್ರಮದಿಂದ ಮತ್ತು ಶಾಂತಿಯುತವಾಗಿ ಸೋಮವಾರದಂದು ಹಬ್ಬ ಆಚರಿಸಲಾಯಿತು.ಉತ್ತರ ಕನರ್ಾಟಕ ಸೇರಿದಂತೆ ನಾಡಿನ ಬಹುತೇಕ ಜಿಲ್ಲೆಗಳಲ್ಲಿ ನೆರೆಹಾವಳಿಯಿಂದ ಮನೆ ಕಳೆದುಕೊಂಡು ನಿರಾಶ್ರಿತರಾದ ಸಾರ್ವಜನಿಕರ ಪರವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಅವರಿಗೆ ಪರಿಹಾರ ಧನ ಒದಗಿಸಲು ವಿವಿಧ ಯುವ ಸಂಘಟನೆಗಳು ಮನವಿ ಮಾಡಿಕೊಂಡರು.
ಹಳೆ ಈದ್ಗಾ ಮೈದಾನದಲ್ಲಿ ಶಾಸಕ ಕೆ. ರಾಘವೆಂದ್ರ ಹಿಟ್ನಾಳ, ಜಿ.ಪಂ. ಮಾಜಿ ಅಧ್ಯಕ್ಷ ಕೆ. ರಾಜಶೇಖರ್ ಹಿಟ್ನಾಳ, ನಗರಸಭೆಯ ಮಾಜಿ ಅಧ್ಯಕ್ಷ ಗವಿಸಿದ್ದಪ್ಪ ಕಂದಾರಿ, ಶ್ರೀಗವಿಸಿದ್ದೇಶ್ವರ ಅರ್ಬನ್ ಬ್ಯಾಂಕಿನ ಅಧ್ಯಕ್ಷ ಹಾಗೂ ನಗರಸಭೆಯ ಸದಸ್ಯ ಗುರುರಾಜ ಹಲಿಗೇರಿ ಹಾಗೂ ತಾಲೂಕಾ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭೂಮರೆಡ್ಡಿ ಪಾಲ್ಗೊಂಡು ಪರಸ್ಪರ ಹಬ್ಬದ ಶುಭಾಷಯ ವಿನಿಮಯ ಮಾಡಿಕೊಂಡರು ಸಾಮೂಹಿಕ ಪ್ರಾರ್ಥನೆಯಲ್ಲಿ ಜೆ.ಡಿ.ಎಸ್ ಮುಖಂಡ ಕೆ.ಎಂ ಸೈಯದ್, ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಅಮ್ಜದ್ ಪಟೇಲ್, ನಗರ ಕಾಂಗ್ರೆಸ ಅಧ್ಯಕ್ಷ ಎಂ. ಪಾಷಾ ಕಾಟಾನ್, ಅಂಜುಮನ್ ಅಧ್ಯಕ್ಷ ಹುಸೇನ್ ಪೀರಾ ಚಿಕನ್, ಹಿರಿಯ ನ್ಯಾಯವಾದ ಎಸ್. ಆಸಿಪ್ ಅಲಿ, ಮಹೇಮುದ್ ಹುಸೇನಿ, ಜಾಕಿರ ಕಿಲೇದಾರ, ಮಾನವಿ ಪಾಷಾ ಸೇರಿದಂತೆ ಈದ್ಗಾ ಕಮಿಟಿ ಆಡಳಿತಾದಿಕಾರಿ ಖಾದರ್ಸಾಬ್ ಮತ್ತು ಖಾಜಿ ಅಬ್ಬಸ ಅಲಿ ಪಾಲ್ಗೊಂಡಿದ್ದರು. ಹಾಗೂ ಹುಲಿಕೆರೆ ಬಳಿ ಇರುವ ಈದ್ಗಾ ಮೈದಾನದಲ್ಲಿ ಮುಕ್ತಿ ಮೌಲಾನಾ ಮಹಮದ ನಜೀರ ಅಹಮದ್ ಖಾದ್ರಿ ಸಾಮೂಹಿಕ ಪ್ರಾರ್ಥನೆ ಮಾಡಿಸಿದರು. ಈ ಸಂದರ್ಭದಲ್ಲಿ ಬಿ.ಜೆ.ಪಿ ರಾಷ್ಟ್ರೀಯ ಸದಸ್ಯ ಸಿ.ವಿ. ಚಂದ್ರಶೇಖರ ಮತ್ತು ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ, ಭಾಶುಸಾಬ್ ಕತಿಬ ಹಾಲೇಶ ಕಂದಾರಿ, ದೇವರಾಜ ಹಾಲ ಸಮುದ್ರ ಮತ್ತಿತರರು ಪಾಲ್ಗೊಂಡಿದ್ದರು.