ಬಾಗಲಕೋಟೆ: ಕಳ್ಳತನ ಪ್ರಕರಣ: ಆರೋಪಿ ಬಂಧನ

ಲೋಕದರ್ಶನ ವರದಿ

ಬಾಗಲಕೋಟೆ 10: ಜಿಲ್ಲೆಯ ಕೊಣ್ಣೂರ ಮತ್ತು ಮುಧೋಳ ಶಹರದಲ್ಲಿ ನಡೆದ ಕಳ್ಳತನ ಆರೋಪದಡಿ ಲೋಕೇಶ ರಾವಸಾಬ ಸುತಾರ ಎಂಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ತಿಳಿಸಿದ್ದಾರೆ.

ಡಿ.10 ರಂದು ಮಿರಜ ತಾಲೂಕಿನ ಲಿಂಗನೂರು ಗ್ರಾಮದ ಲೋಕೇಶ ಸುತಾರ ಮೇಲೆ ದಸ್ತಗಿರಿ ಮಾಡಿ ಆರೋಪಿಯಿಂದ ಒಟ್ಟು 10 ಪ್ರಕರಣಗಳಲ್ಲಿ ಕಳ್ಳತನ ಮಾಡಿದ ಸುಮಾರು 501.5 ಗ್ರಾಂ ಬಂಗಾರದ ಆಭರಣಗಳು ಹಾಗೂ 690 ಗ್ರಾಂ ಬೆಳ್ಳಿಯ ಆಭರಣಗಳು ಹಾಗೂ ಕಳ್ಳತನ ಮಾಡಲು ಉಪಯೋಗಿಸಿದ ಒಂದು ಹೋಂಡಾ ಆಕರ್ಡ ಕಾರ ಹಾಗೂ ರಾಯಲ್ ಎನ್ಫೀಲ್ಡ ಬುಲೋಟ್ ವಶಪಡಿಸಿಕೊಂಡು ತನಿಖೆ ಕೈಗೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕಳ್ಳತನ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಚಾಣಾಕ್ಷತನದಿಂದ ಕರ್ತವ್ಯ ನಿರ್ವಹಿಸಿದ ಜಮಖಂಡಿ ಸಿಪಿಐ ಡಿ.ಕೆ.ಪಾಟೀಲ, ಪಿಎಸ್ಐ ಅನೀಲಕುಮಾರ ರಾಠೋಡ, ಎ.ಎಸ್.ಐ ಬಿ.ಎಂ.ಕುಂಬಾರ ಹಾಗೂ ಸಿಬ್ಬಂದಿಗಳಾದ ಬಾಹುಬಲಿ ಕುಸನಾಳೆ, ಗಣಪತಿ ಮೊಕಾಶಿ, ವಿ.ವಿ.ಕೋಲಂಬಿ, ಪಿ.ಐ.ಕಾಜಗಾರ, ಎಂ.ಎಸ್.ಶೇಗುಣಸಿ, ಸಿದ್ದು ಹನಗಂಡಿ, ಉಮೇಶ ಚಲವಾದಿ, ಸಂಗಮೇಶ ತುಪ್ಪದ, ಐ.ಜಿ.ದಾಶ್ಯಾಳ, ಎಂ.ಡಿ.ಕೊಡೊಳ್ಳಿ ಹಾಗೂ ಜೀಪ ಚಾಲಕ ಶಂಕರ ಮೂಲಿಮನಿ, ಮುತ್ತು ಚಿಪ್ಪಲಕಟ್ಟಿ ಅವರನ್ನು ಪ್ರಶಂಶಿಸಿ ಸೂಕ್ತ ಬಹುಮಾನ ಘೋಷಿಸಿದ್ದಾರೆ.