ಸಕಾಲ ಸೇವೆಯಲ್ಲಿ ಬಾಗಲಕೋಟೆ ಜಿಲ್ಲೆ ಪ್ರಥಮ

Bagalkote district is first in timely service

 ಸಕಾಲ ಸೇವೆಯಲ್ಲಿ ಬಾಗಲಕೋಟೆ ಜಿಲ್ಲೆ ಪ್ರಥಮ 

ಬಾಗಲಕೋಟೆ, 01 : ಕರ್ನಾಟಕ ಸಕಾಲ ಸೇವೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಸಕಾಲ ಶ್ರೇಯಾಂಕದ ಪಟ್ಟಿಯಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದುಕೊಂಡಿದೆ. 

ಸಕಾಲ ಸೇವೆಗಳ ಅನುಷ್ಠಾನದ ಶ್ರೇಯಾಂಕದ ಪಟ್ಟಿಯಲ್ಲಿ ಶೇ.79.25 ರಷ್ಟು ಪಡೆಯುವ ಮೂಲಕ ಬಾಗಲಕೋಟೆ ಜಿಲ್ಲೆ ಪ್ರಥಮ ಸ್ಥಾನ ಪಡೆದರೆ, ಹಾಸನ ಜಿಲ್ಲೆ ಶೇ.78.81 ರಷ್ಟು ಅನುಷ್ಠಾನಗೊಳಿಸುವ ಮೂಲಕ ದ್ವಿತೀಯ ಸ್ಥಾನ, ಕೊಪ್ಪಳ ಜಿಲ್ಲೆ ಶೇ.78.77 ರಷ್ಟು ಪಡೆಯುವ ಮೂಲಕ ತೃತೀಯ ಸ್ಥಾನ ಪಡೆದುಕೊಂಡಿದೆ.  

ಸಕಾಲ ಸೇವೆಗಳ ಅಧಿನಿಯಮ 2011 ಹಾಗೂ (ತಿದ್ದುಪಡಿ) ಅಧಿನಿಯಮ, 2014 ಅನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹಾಗೂ ಸಕಾಲ ಅಧಿಸೂಚಿತ ಸೇವೆಗಳನ್ನು ಸಾರ್ವಜನಿಕರಿಗೆ ಹೆಚ್ಚು ಪರಿಣಾಮಕಾರಿಯಾಗಿ ತಲುಪಿಸು ನಿಟ್ಟಿನಲ್ಲಿ ಸಕಾಲ ಸಮನ್ವಯ ಸಮಿತಿ ಸಂಯೋಜನೆಯನ್ನು ಎಲ್ಲ ಜಿಲ್ಲೆಗಳಲ್ಲಿ ಏಕರೂಪತೆಯಿಂದ ರಚಿಸಲು ಸರಕಾರ ಆದೇಶಿಸಲಾಗಿತ್ತು. ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮೂರು ಜನ ಸದಸ್ಯರು ಹಾಗೂ ಓರ್ವ ಸದಸ್ಯ ಕಾರ್ಯದರ್ಶಿಯನ್ನು ಒಳಗೊಂಡ ಸಮನ್ವಯ ಸಮಿತಿ ರಚನೆ ಮಾಡಲಾಗಿತ್ತು. 

ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಜಿಲ್ಲೆಯಲ್ಲಿ ರಚನೆಗೊಂಡ ಸಕಾಲ ಸಮನ್ವಯ ಸಮಿತಿ ಸಭೆಯು ಪ್ರತಿವಾರ ಸಭೆ ಕರೆದು ಸಕಾಲದಡಿ ಬಂದ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ವಿಲೇ ಮಾಡುವ ಮೂಲಕ ಸಾರ್ವಜನಿಕರಿಗೆ ಸೇವೆ ನೀಡಲಾಗುತ್ತಿತ್ತು. ಈ ಸಕಾಲದಡಿ ಬಂದ ಒಟ್ಟು 86272 ಅರ್ಜಿಗಳ ಪೈಕಿ 84685 ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ ವಿಲೆ ಮಾಡುವ ಮೂಲಕ  ಸಕಾಲ ಶ್ರೇಯಾಂಕದಲ್ಲಿ ಪಟ್ಟಿ ಪ್ರಥಮ ರಾ​‍್ಯಂಕ್ ಪಡೆದುಕೊಳ್ಳುವಲ್ಲಿ ಬಾಗಲಕೋಟೆ ಜಿಲ್ಲೆಯ ಯಶಸ್ವಿಯಾಗಿದೆ. ಸಕಾಲ ಸೇವೆಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಪ್ರಥಮ ರಾ​‍್ಯಂಕ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅಭಿನಂದಿಸಿದ್ದಾರೆ.