ರಾಜ್ಯದ ನಾಲ್ಕು ವಿಧಾನ ಪರಿಷತ ಸದಸ್ಯ ಸ್ಥಾನಕ್ಕೆ ಬಾಗಲಕೋಟ. ವಿಜಯಪೂರ

Bagalkot for four Legislative Council seats in the state. Vijayapur

  ರಾಜ್ಯದ ನಾಲ್ಕು ವಿಧಾನ ಪರಿಷತ ಸದಸ್ಯ ಸ್ಥಾನಕ್ಕೆ ಬಾಗಲಕೋಟ. ವಿಜಯಪೂರ 

ಜಮಖಂಡಿ, 27; ರಾಜ್ಯದ ನಾಲ್ಕು ವಿಧಾನ ಪರಿಷತ ಸದಸ್ಯ ಸ್ಥಾನಕ್ಕೆ ಬಾಗಲಕೋಟ. ವಿಜಯಪೂರ ಅವಳಿ ಜಿಲ್ಲೆಯಿಂದ ಜಮಖಂಡಿಯ ನಿಷ್ಠಾವಂತ ಕಾರ್ಯಕರ್ತ ನಜೀರಹ್ಮದ ಅಬ್ಬಾಸಲಿ ಕಂಗನೋಳ್ಳಿ ಅವರಿಗೆ ನೀಡಬೇಕೆಂದು ಅಲ್ಪಸಂಖ್ಯಾತರರು ಹಾಗೂ ಮುಸ್ಲಿಂ ಸಮಾಜದವರು, ಅಭಿಮಾನಿಗಳು ರಾಜ್ಯ ಸರಕಾರವನ್ನು ಒತ್ತಾಯಿಸಿದರು. 

ನಗರದ ರಮಾ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 30 ವರ್ಷದಿಂದ ಪಕ್ಷಕ್ಜಾಗಿ ರಾಜ್ಯಾದ್ಯಂತ ಕೆಲಸ ಮಾಡಿದ ನಜೀರಅಹ್ಮದ ಅಬ್ಬಾಸಅಲಿ ಕಂಗನೊಳ್ಳಿಯವರು ದುಡಿದಿದ್ದಾರೆ. ಸರ್ವ ಸಮಾಜ ಬಳಗದ ಜೊತೆ ಸೇರಿಕೊಂಡು ಪಕ್ಷಕ್ಕಾಗಿ ಅನೇಕ ಕೆಲಸಗಳನ್ನು ಮಾಡಿದ್ದಾರೆ. ರಾಜ್ಯ ಜವಳಿ ನಿಗಮದ ಉಪಾದ್ಯಕ್ಷರಾಗಿ ಕೆಲಸ ಮಾಡಿದ್ದಾರೆ ಇಂತಹ ನಾಯಕನಿಗೆ ಒಂದು ಸ್ಥಾನ ನೀಡಬೇಕು ಎಂದು ಸರ್ವ ಸಮಾಜದಿಂದ ಸರಕಾರಕ್ಕೆ ವಿನಂತಿಸುತ್ತೇವೆ. ಅಲ್ಪಸಂಖ್ಯಾತರಲ್ಲಿ ಉತ್ತರ ಕರ್ನಾಟಕದ ಜನತೆಗೆ ಮಲತಾಯಿ ಧೋರಣೆಯಾಗಿದೆ. ಅದಕ್ಕಾಗಿ ಪಕ್ಷದ ಸರ್ವ ಮುಖಂಡರಿಗೆ ನಜೀರ ಕಂಗನೊಳ್ಳಿಯವರಿಗೆ ವಿಧಾನ ಪರಿಷತ ಸದಸ್ಯ ಸ್ಥಾನವನ್ನು ನೀಡಬೇಕು.ಇದರಿಂದ ಒಂದು ಸಮಾಜವನ್ನು ಮೇಲಕ್ಕೆ ಎತ್ತಿದಂತಾಗುತ್ತದೆ. ಇವರಿಗೆ ಈ ಸ್ಥಾನ ಮಾನ ನೀಡಿದರೆ ಮುಂಬರುವ ದಿನಗಳಲ್ಲಿ ಮತ್ತೇ ಪಕ್ಚ ಸಂಘಟನೆಯು ಹೆಚ್ಚಾಗುತ್ತದೆ. ಎಂದರು. 

ನಗರ ಪ್ರಾಧಿಕಾರ ಅಧ್ಯಕ್ಷ ಅನ್ವರ ಮೋಮಿನ, ಮೈಬೂಬ ಉಮರಾಣಿ, ನಾನಾ ಮೋರೆ, ನಗರಸಭೆ ಸದಸ್ಯ ಈಶ್ವರ ವಾಳೆಣ್ಣವರ, ಮಕಬುಲ ಅಥಣೀಕರ,  ಶಶಿಧರ ಮೀಸಿ, ರಮೇಶ ಮೋರೆ, ಮುಸ್ತಫಾ ಕರಜಗಿ ಮಾತನಾಡಿದರು. 

ಮುಬಾರಕ ಅಪರಾದ,  ಮುರೆಪ್ಪಾ ಸಿದ್ದರಡ್ಡಿ, ಸಾದಿಕ ಬಂಟನೂರ, ಶಫೀಕ ಮುಲ್ಲಾ, ಗಫೂರ ಮುಲ್ಲಾ, ಜಕ್ಕಪ್ಪ ಗೌಡಪ್ಪನವರ,ರವೀಂದ್ರ ಶಿರಹಟ್ಟಿ, ಸುನೀಲ ಶಿಂಧೆ, ರಿಯಾಜ ಮಹಾಲಿಂಗಪೂರ, ಮೆಹಬೂಬ ವಿಜಾಪೂರ, ಅಬೂಬಕರ ನದಾಪ, ಬಾಷಾ ಕಂಗನೊಳ್ಳು, ಶಫೀಕ ಪಠಾಣ ಮುಬಾರಾಕ ಸಾರವಾನ, ಮುಸ್ತಾಕ ಝೆಂಡೆ, ವಾಸೀಮ ಕೊಕಟನೂರ, ಇಮ್ರಾನ ಬೀಳಗಿ, ತೌಶೀಪ ಬೇಪಾರಿ,  ಬಸೀರ ಕಂಗನೊಳ್ಳಿ, ಅಬುಬಕರ ಕುಡಚಿ ಅನೇಕರು ಇದ್ದರು.