ಬಾಗಲಕೋಟ: ಶಿಕ್ಷಕರ ಕೆಲಸಗಳಿಗೆ ಆನ್ ಲ್ಯೆನ್ ಮೂಲಕ ಸೇವೆ: ಡಿಡಿಪಿಐ ಗೋನಾಳ

ಲೋಕದರ್ಶನ ವರದಿ

ಬಾಗಲಕೋಟ 20: ಶಿಕ್ಷಣ ಇಲಾಖೆಯಲ್ಲಿ ಪಾರದರ್ಶಕತೆಯನ್ನು ಹೊಂದಬೇಕು, ಪ್ರತಿನಿತ್ಯ ಶಿಕ್ಷಕರು ಕಛೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ಹಿನ್ನೆಲೆಯಲ್ಲಿ ಜೂನ್ ತಿಂಗಳಿನಲ್ಲಿಯೇ ಆನ್ಲೈನ್ ಸೇವೆಯನ್ನು ಒದಗಿಸಲಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಬಿ.ಹೆಚ್. ಗೋನಾಳ ಹೇಳಿದರು.

ನಗರದ ವಿಜ್ಞಾನ ಕೇಂದ್ರದಲ್ಲಿ ಏರ್ಪಡಿಸಿದ್ದ ಆನ್ಲೈನ್ ಸೇವೆಯ ಕುರಿತು ಲಿಪಿ ನೌಕರರ ತರಬೇತಿ ಕಾಯರ್ಾಗಾರವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಆನ್ಲೈನ್ ಸೇವೆಯನ್ನು ಒದಗಿಸಲು ಶಿಕ್ಷಣ ಇಲಾಖೆಯ ಮೂಲಕ ಆಯ್ಕೆ ಮಾಡಿಕೊಂಡು ಒಟ್ಟು 12 ಸೇವೆಗಳನ್ನು ಪ್ರಾರಂಭಿಕ ಹಂತದಲ್ಲಿ ಆಯೋಜಿಸಿಕೊಂಡು ಜಾರಿಗೆ ತರಲಾಗುತ್ತಿದೆ. ಈ ಸೇವೆಗಳನ್ನು ಆನ್ಲೈನ್ ತತ್ರಾಂಶದ ಮೂಲಕ ಒದಗಿಸಲು ಇಲಾಖೆಯು ನಿರ್ಧರಿಸಿದ್ದು, ಸೇವೆಗಳ ಕುರಿತು ಹೊಸ ವಿಧಾನವಾಗಿದ್ದರಿಂದ, ಈಗಾಗಲೇ ಅಧಿಕಾರಿಗಳು, ಸಿಬ್ಬಂದಿಗಳು ರಾಜ್ಯ ಮಟ್ಟದಲ್ಲಿ ತರಬೇತಿಯನ್ನು ಪಡೆದುಕೊಂಡು ಬಂದಿರುತ್ತಾರೆ.

ಇಲಾಖೆಯ ಬೋಧಕ, ಬೋಧಕೇತರ ನೌಕರರ ರಜೆ ಸೌಲಭ್ಯಗಳು, ವಿದೇಶ ಪ್ರಯಾಣ, ಅಧಿಕಾರಿಗಳ ದಿನಚರಿ, ಕಾಲಮಿತಿ ವೇತನ ಬಡ್ತಿಗಳು ಸೇರಿದಂತೆ ಒಟ್ಟು ಹನ್ನೆರಡು ಸೇವೆಗಳನ್ನು ಪಡೆಯಬೇಕಾದಲ್ಲಿ ಸಂಬಂಧಿಸಿದವರು ಆನ್ಲೈನ್ದಲ್ಲಿಯೇ ಅಜರ್ಿ ಸಲ್ಲಿಸಬೇಕು. ನಿಗದಿತ ಅವಧಿಯಲ್ಲಿ ಇವುಗಳನ್ನು ಮಂಜೂರಿಸಲಾಗುವುದೆಂದು ಗೋನಾಳ ಹೇಳಿದರು.

ಇದರಿಂದ ಪಾರದರ್ಶಕವಾಗಿ ಆಡಳಿತ ನೀಡಿದಂತಾಗುತ್ತದೆ. ಇನ್ನು ಮುಂದೆ ಶಿಕ್ಷಕರು ತಮ್ಮ ಅರ್ಜಿ  ಕಡತದ ಹಂತವನ್ನು ಮೊಬೈಲ್ ಮೂಲಕವೇ ಪರಿಶೀಲಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತದೆ ಎಂದೂ ಉಪನಿರ್ದೇಶಕರು ಬಿ.ಹೆಚ್. ಗೋನಾಳ ತಿಳಿಸಿದರು.

ಸಂಪನ್ಮೂಲ ವ್ಯಕ್ತಿಗಳೂ ಆಗಿರುವ ಬೀಳಗಿ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಜಿ.ಮಿರ್ಜಾ  ತರಬೇತಿಯನ್ನು ನೀಡಿ ವಿವರಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎನ್.ವೈ. ಕುಂದರಗಿ, ದೊಡ್ಡಬಸಪ್ಪ ನೀರಲಕೇರಿ, ವ್ಹಿ.ವೈ. ದೇವಣಗಾವಿ, ಎಂ.ಬಿ. ಮೊರಟಗಿ, ಉಪನಿದರ್ೇಶಕರ ಕಛೇರಿಯ ಪತ್ರಾಂಕಿತ ವ್ಯವಸ್ಥಾಪಕ ಎಸ್.ವೈ. ಗೌಡರ, ಪಿ.ಹೆಚ್. ಭಜಂತ್ರಿ, ಕಳಾವಂತ, ಸಿ.ಎಂ. ಕುಲಕಣರ್ಿ, ಎನ್.ಎ. ಖತೀಬ, ಶಿವರಾಜ, ಸಿ.ಟಿ.ಇ ಇಲಾಖೆಯ ಪಂಚಣ್ಣವರ, ಡಯಟ್ನ ಬಿ.ಎಸ್. ಕಾಟಾಪೂರಮಠ ಸೇರಿದಂತೆ ಮತ್ತಿತರರು ತರಬೇತಿ ಕಾಯರ್ಾಗಾರದಲ್ಲಿ ಪಾಲ್ಗೊಂಡಿದ್ದರು. ಅಧೀಕ್ಷಕ ವೆಂಕಟೇಶ ಇನಾಮದಾರ ಸ್ವಾಗತಿಸಿದರು.