ಬಾಗಲಕೋಟೆ: ಅಂಗವಿಕಲತೆ ತಡೆಗೆ ಪಾಲಕರ ಪಾತ್ರ ಪ್ರಮುಖ: ರಾಜು

ಲೋಕದರ್ಶನ ವರದಿ

ಬಾಗಲಕೋಟೆ 14: ಮಕ್ಕಳ ತಡವಾದ ಬೆಳವಣಿಗೆಯನ್ನು ಪ್ರಾರಂಭಿಕ ಹಂತದಲ್ಲಿ ಗುರುತಿಸಿ ಪರೀಕ್ಷಿಸಿ ಸಮಯಕ್ಕೆ ಸರಿಯಾಗಿ ಚಟುವಟಿಕೆ ಮಾಡಿದರೆ ಅಂಗವಿಕಲತೆಯನ್ನು ತಡೆಗಟ್ಟಬಹುದೆಂದು ಸಮಾಜ ಸೇವಕ ರಾಜು ನಾಯ್ಕರ ಹೇಳಿದರು.

ಬಿಜಾಪುರ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ಬಡ್ರ್ಸ) ಹುನಗುಂದ ಎಪಿಡಿ ಬೆಂಗಳೂರ ಹಾಗೂ ಲಡ್ಡು ಮುತ್ಯಾನ ಮಠ ಶಿಗಿಕೇರಿ ಇವುಗಳ ಸಂಯುಕ್ತಾಶ್ರಯದಲ್ಲಿ 0-6 ದೊಳಗಿನ ತಡವಾದ ಬೆಳವಣಿಗೆಯ ಮಕ್ಕಳ ಪಾಲಕರಿಗಾಗಿ ವಸತಿ ಸಹಿತ ತರಬೇತಿ ಶಿಬಿರವನ್ನು  ಉದ್ಘಾಟಿಸಿ ಅವರು ಮಾತನಾಡಿದರು. 

ಬಡ್ರ್ಸ ಸಂಸ್ಥೆಯು ಕಳೆದ ಮೂರು ವರ್ಷಗಳಿಂದ ಇಂತಹ ನಿರ್ವಹಿಸುತ್ತಿರುವುದು ಶ್ಲಾಘನೀಯವಾದ ಕೆಲಸ ಇಂಥಹ ಕಾರ್ಯಗಳಿಗೆ ನಮ್ಮ ಸಹಾಯ ಸಹಕಾರವಿದೆ ಎಂದರು ಮುಖ್ಯ ಅಥಿತಿಗಳಾಗಿ ನಗರಸಭೆ ಸದಸ್ಯರಾದ ಕವಿತಾ ಲಂಕೆನ್ನವರ ಮಾತನಾಡುತ್ತಾ ಅಂಗವಿಕಲರಿಗೋಸ್ಕರ ಸಂಸ್ಥೆಯು ಮಾಡುತ್ತಿರುವ ಕಾರ್ಯವನ್ನು ಸಮೀಪದಿಂದ ನೋಡಿದ್ದೇನೆ. ಇಂಥಹ ಕೆಲಸಗಳಿಗೆ ಪ್ರೋತ್ಸಾಹ ಸದಾ ಸಿದ್ದವಿದೆ ಎಂದರು.

ಅಥಿತಿ ಚಂದ್ರಶೇಕರ ಮಾನ್ವಿ ಮಾತನಾಡಿದರು. ಪ್ರಾಸ್ಥಾವಿಕವಾಗಿ ಮಹಾಂತೇಶ ಅಗಸಿಮುಂದಿನ ಸಂಸ್ಥೆ ನಡೆದು ಬಂದ ದಾರಿ ಬಾಗಲಕೋಟ ತಾಲೂಕಿನಲ್ಲಿ ಅಂಗವಿಕಲರ ಕಲ್ಯಾಣಕ್ಕೋಸ್ಕರ ಮಾಡುತ್ತಿರುವ ಕೆಲಸದ ಕುರಿತು ವಿವರ ನೀಡಿದರು. ಸಂಸ್ಥೆಯ ಉಪಾಧ್ಯಕ್ಷರಾದ ರಂಗನಗೌಡ ದಂಡನ್ನವರ ಮಾತನಾಡುತ್ತಾ ಇದು ನಾಲ್ಕನೇ ತರಬೇತಿ ಶಿಬಿರ ಇಂತಹ ಶಿಬಿರವನ್ನು ಪುಣ್ಯ ಕ್ಷೇತ್ರದಲ್ಲಿ ನಡೆಸುತ್ತಿರುವುದು ಅಭಿನಂದನಾರ್ಹವೆಂದರು. 

ಎಪಿಡಿ ಸಂಸ್ಥೆಯ ತರಬೇತಿ ಸಂಪನ್ಮೂಲ ವ್ಯಕ್ತಿಗಳಾದ ನಿರಾಕಾರ & ನಿರಂತರ ಉಪಸ್ಥಿತರಿದ್ದರು. ಒಟ್ಟು ಶಿಬಿರದಲ್ಲಿ 50 ತಾಯಂದಿರು & ಮಕ್ಕಳು ಭಾಗವಹಿಸಿದ್ದಾರೆ. ಸ್ವಾಗತವನ್ನು ದೀಪಾ ಹುಣಸಿಗಿಡದ ಮಾಡಿದರೆ ವಂದನಾರ್ಪಣೆಯನ್ನು ಸುಮಿತ್ರಾ .ಜಿ ಮಾಡಿದರು ಕಾರ್ಯಕ್ರಮ ನಿರ್ವಹಣೆಯನ್ನು ದೀಪಾ ಬಂಕಾಪೂರ ಮಾಡಿದರು ಮಲ್ಲು.ಕೆ.ಬಿ ಶಿಬಿರದ ದಿನನಿತ್ಯದ ಚಟುವಟಿಕೆಗಳ ವೇಳಾಪಟ್ಟಿ ವಿವರಿಸಿದರು.