ಲೋಕದರ್ಶನ ವರದಿ
ಬಾಗಲಕೋಟೆ 20: ಜಿಲ್ಲೆಯಲ್ಲಿ ಮೇ 25 ಮತ್ತು 26 ರಂದು ಪದವೀದರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ ಎಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಶಾಲಾ ಶಿಕ್ಷಕರ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆ ಕುರಿತು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪರೀಕ್ಷೆಗಳು ಸುಸೂತ್ರವಾಗಿ ಮತ್ತು ದೋಷರಹಿತವಾಗಿ ನಡೆಸಲು ಎಲ್ಲ ರೀತಿಯ ಕ್ರಮಕೈಗೊಳ್ಳಬೇಕು. ನಕಲು ರಹಿತವಾಗಿ ಪರೀಕ್ಷೆ ನಡೆಸಬೇಕು. ಕಷ್ಟಪಟ್ಟು ಅಭ್ಯಾಸ ಮಾಡಿದ ಅಭ್ಯಥರ್ಿಗಳಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ಕ್ರಮವಹಿಸಬೇಕು ಎಂದರು.
ಬಾಗಲಕೋಟೆ ನಗರದಲ್ಲಿ ನವನಗರದ ಎಸ್.ಬಿ.ಪಾಟೀಲ ಪ್ರೌಢಶಾಲೆ, ವಿದ್ಯಾಗಿರಿಯ ಬಿವಿವಿ ಸಂಘದ ಇಂಗ್ಲೀಷ ಮೀಡಿಯಂ ಪ್ರಾಢಶಾಲೆ, ಬಿವಿವ ಸಂಘದ ಕಲಾ ಮತ್ತು ವಿಜ್ಞಾನ ಸ್ವತಂತ್ರ ಪದವಿ ಪೂರ್ವ ಕಾಲೇಜು ಹಾಗೂ ವಿದ್ಯಾಗಿರಿಯ ಬಸವೇಶ್ವರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜುಗಳು ಸೇರಿ ಒಟ್ಟು 4 ಕೇಂದ್ರಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳು ಎರಡು ಅಧಿವೇಶನಗಳಲ್ಲಿ ನಡೆಯಲಿವೆ ಎಂದು ತಿಳಿಸಿದರು.
ಮೇ 25 ರಂದು ಪ್ರಥಮ ಅಧಿವೇಶನದಲ್ಲಿ ಒಟ್ಟು 1135 ಅಭ್ಯಥರ್ಿಗಳು ಪರೀಕ್ಷೆ ಬರೆದರೆ, ಎರಡನೇ ಅಧಿವೇಶನದಲ್ಲಿ 304 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅದೇ ರೀತಿ ಮೇ 26 ರಂದು ಪ್ರಥಮ ಹಾಗೂ ದ್ವಿತೀಯ ಅಧಿವೇಶನಕ್ಕೆ ಒಟ್ಟು 912 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆ ಸುಸೂತ್ರವಾಗಿ ನಡೆಯಲು ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲೂ 200 ಮೀಟರ್ ನಿಷೇಧಿತ ಪ್ರದೇಶವೆಂದು ಘೋಷಿಸಲಾಗುತ್ತಿದೆ. ಅಲ್ಲದೇ ಪರೀಕ್ಷೆ ಸಮಯದಲ್ಲಿ ಝರಾಕ್ಸ ಅಂಗಡಿಗಳನ್ನು ಮುಚ್ಚಿಸುವಂತೆ 144 ಕಲಂ ಆದೇಶ ಹೊರಡಲಿಸಾಗುವುದೆಂದು ತಿಳಿಸಿದರು.
ಪರೀಕ್ಷಾ ಕೊಠಡಿಯಲ್ಲಿ ಬೆಳಕಿನ ವ್ಯವಸ್ಥೆ ಮಾಡಬೇಕು. ಪ್ರತಿ ಕೊಠಡಿಯಲ್ಲಿ 20 ವಿದ್ಯಾಥರ್ಿಗಳಿಗೆ ನಾಮಿನಲ್ರೋಲ್ ಪ್ರಕಾರ ಆಸನಗಳ ವ್ಯವಸ್ಥೆ ಮಾಡಬೇಕು.ಅಭ್ಯರ್ಥಿಗಳು ಪ್ರವೇಶ ಪತ್ರದೊಂದಿಗೆ ನೀಲಿ ಅಥವಾ ಕಪ್ಪು ಬಾಲ್ ಪಾಯಿಂಟ್ ಪೆನ್ನನ್ನು ಮಾತ್ರ ತರಲು ಅವಕಾಶ ನೀಡಬೇಕು. ಅವ್ಯವಹಾರಕ್ಕೆ ಕಾರಣವಾಗುವಂತಹ ವಸ್ತುಗಳನ್ನು ಪರೀಕ್ಷಾ ಕೊಠಡಿಯ ಒಳಗೆ ತರುವುದನ್ನು ನಿರ್ಭಂದಿಸಲಾಗಿದೆ. ಅಲ್ಲದೇ ಆಸನ ವ್ಯವಸ್ಥೆಯ ಕೊಠಡಿವಾರು ವಿವರವನ್ನು ಅಭ್ಯರ್ಥಿಗಳು ಮಾಹಿತಿಗಾಗಿ ಪರೀಕ್ಷಾ ಕೇಂದ್ರಗಳ ಮುಂಬಾಗದಲ್ಲಿ ಪ್ರಕಟಿಸಲು ತಿಳಿಸಿದರು.
ಮಾರ್ಗದಿಗಾಧಿಕಾರಿಗಳು ಸಮಯಕ್ಕೆ ಸರಿಯಾಗಿ ಪ್ರಶ್ನೆಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ತಲುಪಿಸುವ ಕಾರ್ಯ ಮಾಡಬೇಕು ಎಂದರು. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬರಂತೆ ಸ್ಥಾನಿಕ ಜಾಗೃತ ದಳದವರನ್ನು ಹಾಗೂ ಜಿಲ್ಲಾ ಮಟ್ಟದಲ್ಲಿ ಪರೀಕ್ಷಾ ವೀಕ್ಷಕರನ್ನು ಸಹ ನೇಮಿಸಲಾಗುತ್ತಿದೆ ಎಂದು ತಿಳಿಸಿದರು. ವೀಕ್ಷಕರು ಪ್ರತಿಯೊಂದು ಅಧಿವೇನದ ಪರೀಕ್ಷೆಗಳು ಸರಿಯಾಗಿ ನಡೆಯುತ್ತಿರುವ ಬಗ್ಗೆ ಗಮನಹರಿಸಲು ತಿಳಿಸಿದರು.
ಸ್ಪರ್ಧಾತ್ಮಕ ಪರೀಕ್ಷಾ ನೋಡಲ್ ಅಧಿಕಾರಿ ಎ.ಕೆ.ಬಸಣ್ಣವರ ಪರೀಕ್ಷಾ ಸಿದ್ದತೆ, ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರ ಹಾಗೂ ಮಾಗರ್ಾಧಿಕಾರಿಗಳ ಕರ್ತವ್ಯಗಳು ಕುರಿತು ವಿವರವಾಗಿ ಸಭೆಯಲ್ಲಿ ತಿಳಿಸಿಕೊಟ್ಟರು. ಸಭೆಯಲ್ಲಿ ಜಿಲ್ಲಾ ಪಂಚಾಯತಉಪಕಾರ್ಯದರ್ಶಿ ದುಗರ್ೇಶ ರುದ್ರಾಕ್ಷಿ, ಉಪವಿಭಗಾಧಿಕಾರಿಗಳಾದ ಎಚ್.ಜಯಾ ಮತ್ತು ಇಕ್ರಮ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಎಚ್.ಗೋನಾಳ ಸೇರಿದಂತೆ ಪರೀಕ್ಷಾ ಕೇಂದ್ರಕ್ಕೆ ನೇಮಕವಾದ ಮುಖ್ಯ ಅಧಿಕ್ಷಕರು ಉಪಸ್ಥಿತರಿದ್ದರು.