ನ್ಯಾಯ ಸಮ್ಮತ, ನಿಷ್ಪಕ್ಷಪಾತ ಚುನಾವಣೆಗೆ ಜಿಲ್ಲಾಧಿಕಾರಿ ಕರೆ

ಬಾಗಲಕೋಟೆ: ಚುನಾವಣೆಯಲ್ಲಿ ಹಣಬಲ ಹಾಗೂ ಇನ್ನೀತರೇ ಆಮಿಷಗಳಿಗೆ ಒಳಗಾಗದಂತೆ ನಿಷ್ಪಕ್ಷಪಾತವಾಗಿ, ಪಾರದರ್ಶಕವಾಗಿ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆರ್.ರಾಮಚಂದ್ರನ್ ತಿಳಿಸಿದರು.

   ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ವಿವಿಧ ಸಮಿತಿಯ ನೋಡಲ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಚುನಾವಣಾ ಆಯೋಗದ ಸ್ಪಷ್ಟ ನಿದರ್ೇಶನಗಳನ್ನು ಕಟ್ಟಿನಿಟ್ಟಾಗಿ ಪಾಲಿಸುವದರ ಜೊತೆಗೆ ಚುನಾವಣೆಗೆ ಸಂಬಂದಿಸಿದಂತೆ ವಿವಿಧ ಸಮಿತಿಯ ನೋಡಲ್ ಅಧಿಕಾರಿಗಳಿಗೆ ಅವರ ಸಮಿತಿಯ ಕಾರ್ಯವೈಖರಿ ಅರಿವಿಲ್ಲದೇ ಸಾಲದು, ಆ ಸಮಿತಿಯಲ್ಲಿನ ಎಲ್ಲ ಸದಸ್ಯರಿಗೆ ಸಮಿತಿಯ ಹೊಣೆಗಾರಿಕೆ ಮತ್ತು ತಮ್ಮ ಜವಾಬ್ದಾರಿಗಳ ಕುರಿತು ಸಂಪೂರ್ಣ ಅರಿವಿರಬೇಕು. ಅಂದಾಗ ಮಾತ್ರ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು.

ಬ್ಯಾಂಕ್ಗಳಲ್ಲಿ ಹಣ ಡ್ರಾ, ವಗರ್ಾವಣೆ ಹಾಗೂ ಸಾಗಾಟದಂತ ಪ್ರಕರಣಗಳ ಮೇಲೆ ಹೆಚ್ಚಿನ ನಿಗಾವಹಿಸಿ, ಲಕ್ಷಗಿಂತ ಹೆಚ್ಚಿನ ಹಣದ ಚಟುವಟಿಕೆಗಳು ನಡೆದಲ್ಲಿ ತಕ್ಷಣ ಮಾಹಿತಿ ನೀಡುವಂತೆ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚಿಸಿದರು. ಹೆಚ್ಚಿನ ಹಣ ವಗರ್ಾವಣೆಯ ಸಂದೇಹಾಸ್ಪದ ಬ್ಯಾಂಕ್ ಖಾತೆಗಳಿದ್ದಲ್ಲಿ ಅವುಗಳ ಮಾಹಿತಿಯನ್ನು ಐಟಿ ಇಲಾಖೆಗೆ ತಿಳಿಸಬೇಕು. ಹತ್ತು ಲಕ್ಷದ ಹೆಚ್ಚಿನ ಮೊತ್ತದ ಹಣದ ಪ್ರಕರಣಗಳು ದಾಖಲಾದಲ್ಲಿ ಐಟಿ ಅಧಿಕಾರಿಗಳು ತುತರ್ಾಗಿ ಕ್ರಮ ಜರುಗಿಸಲು ಸೂಚಿಸಿದರು. 

ಮಧ್ಯದ ವಹಿವಾಟಿನ ಮೇಲೆ ತೀವ್ರ ನಿಗಾವಹಿಸುವಂತೆ ಸೂಚಿಸಿದ ಜಿಲ್ಲಾ ಚುನಾವಣಾಧಿಕಾರಿಗಳು ಹೋಲ್ಸೆಲ್ ಮತ್ತು ರಿಟೆಲ್ ಮದ್ಯ ಮಾರಾಟದ ಪ್ರತಿನಿತ್ಯ ಮಾನಿಟರ್ ಮಾಡಿ, ಮದ್ಯ ಅಕ್ರಮ ಸಾಗಾಣೆ ಮತ್ತು ಬಳಕೆ ಕಂಡುಬಂದಲ್ಲಿ ಸೀಜ್ ಮಾಡಿ ಪ್ರಕಟಣ ದಾಖಲಿಸಲು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು. 

ದಕ್ಷತೆ ಹಾಗೂ ಚುರುಕಿನಿಂದ ಕಾರ್ಯನಿರ್ವಹಿಸಲು ಎಸ್ಎಸ್ಟಿ ಮತ್ತು ಎಫ್ಎಸ್ಟಿ ತಂಡಗಳ ಕಾರ್ಯನಿರ್ವಹಣೆ ತಿಳಿಸಿದ ಚುನಾವಣಾಧಿಕಾರಿಗಳು ಚುನಾವಣಾ ಪ್ರಚಾರಕ್ಕಾಗಿ ಅಕ್ರಮ ಹಣ, ಸಾಮಗ್ರಿ ಸರಬರಾಜು ಮಾಡುವುದನ್ನು ತಡೆಗಟ್ಟಲು ಪ್ರತಿ ಚೆಕ್ಪೋಸ್ಟ್ನಲ್ಲಿ ಶೋಧ ಕಾರ್ಯ ನಡೆಯುತ್ತಿದ್ದು, ಚೆಕ್ಪೋಸ್ಟನಲ್ಲಿ ಬರುವ ವಾಹನವನ್ನು ತಪಾಸಣೆ ಮಾಡಿ ಚುನಾವಣೆ ಕುರಿತು ಅಕೆಮ ವಸ್ತು, ಹಣ ಇದ್ದರೆ ವಶಕ್ಕೆ ತೆಗೆದುಕೊಳ್ಳಬೇಕು. ಹಾಗೂ ಇಡೀ ಸಂಗತಿಯಯನ್ನು ವಿಡಿಯೋ ರೆಕಾರ್ಡ ಮಾಡಿ ವರದಿಯನ್ನು ಸಲ್ಲಿಸುವಂತೆ ತಿಳಿಸಿದರು.

ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ದೂರುಗಳನ್ನು ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಪ್ಲಾಯಿಂಗ್ ಸ್ಕ್ವಾಡ್ಟೀಲ್ ಸದಾ ಕಾಲ ಕಾರ್ಯನಿರ್ವಹಿಸಬೇಕಾಗುತ್ತದೆ. ದೂರುಗಳನ್ನು ಸ್ವೀಕರಿಸಿದ ನಂತರ ಸಂಬಂಧಿಸಿದ ವರದಿಯನ್ನು ಸಹಾಯಕ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು. ಸೆಕ್ಟರ್ ಅಧಿಕಾರಿಗಳು ಮತದಾನಕ್ಕಿಂತ ಮುಂಚಿತವಾಗಿ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯ, ವಿವಿಪ್ಯಾಟ್ ಯಂತ್ರದ ಕಾರ್ಯನಿರ್ವಹಣೆ, ಮತಗಟ್ಟೆಯಲ್ಲಿನ ಸಿಬ್ಬಂದಿಗಳ ನಿರ್ವಹಣೆ, ತರಬೇತಿ ಮುಂತಾದವುಗಳನ್ನು ಪರಿಶೀಲಿಸುವುದು ಸೆಕ್ಟರ ಅಧಿಕಾರಿಗಳ ಮುಖ್ಯ ಕೆಲಸವಾಗಿರುತ್ತದೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಶಶೀಧರ ಕುರೇರ, ವಿವಿಧ ಸಮಿತಿಯ ನೋಡಲ್ ಅಧಿಕಾರಿಗಳಾದ ಕೃಷಿ ಇಲಾಖೆಯ ಉಪನಿದರ್ೇಶಕ ಕೊಂಗವಾಡ, ಪ್ರಾದೇಶಿಕ ಸಾರಿಗೆ ಅಧಿಕಾರಿ ಅಯ್ಯಪ್ಪ ನಾಲತ್ವಾಡಮಠ, ತೋಟಗಾರಿಕೆ ಉಪನಿದರ್ೇಶಕ ಪ್ರಭುರಾಜ ಹಿರೇಮಠ, ಜಿಲ್ಲಾ ಸಾಕ್ಷರತಾ ಅಧಿಕಾರಿ ಬಸವರಾಜ ಶಿರೂರ, ಆಹಾರ ಇಲಾಖೆಯ ಉಪನಿದರ್ೇಶಕ ಶ್ರೀಶೈಲ ಕಂಕಣವಾಡಿ, ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ಶಾಂತಾ ಕಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.