ಬಾಗಲಕೋಟೆ ಲೋಕಸಭಾ ಚುನಾವಣೆ-2019 ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಿ: ರಾಮಚಂದ್ರನ್

ಬಾಗಲಕೋಟೆ 11: ಲೋಕಸಭಾ ಚುನಾವಣೆ-2019 ಸಂಬಂಧಿಸಿದಂತೆ ಜಾರಿಯಾದ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆರ್.ರಾಮಚಂದ್ರನ್ ವಿವಿಧ ರಾಜಕೀಯ ಪಕ್ಷದ ಮುಖಂಡರಿಗೆ ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ವಿವಿಧ ರಾಜಕೀಯ ಪಕ್ಷಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಭಾರತ ಚುನಾವಣಾ ಆಯೋಗ ಹಾಗೂ ವಿವಿಧ ರಾಜಕೀಯ ಪಕ್ಷಗಳು ಕೂಡಿ ರೂಪಿಸಲಾದ ಮಾದರಿ ನೀತಿ ಸಂಹಿತೆಯನ್ನು ಪಾಲಿಸುವ ಮೂಲಕ ಲೋಕಸಭಾ ಚುನಾವಣೆ-2019ನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಕಾನೂನಾತ್ಮಕವಾಗಿ ಚುನಾವಣೆ ನಡೆಸಲಾಗುತ್ತಿದ್ದು, ಸಂಹಿತೆಯ ಪ್ರಕಾರ ನಾವೆಲ್ಲರೂ ನಡೆದುಕೊಳ್ಳಬೇಕಾಗಿದೆ. ಅದಕ್ಕಾಗಿ ಎಲ್ಲ ರಾಜಕೀಯ ಪಕ್ಷಗಳು ಸಹಕರಿಸುವಂತೆ ತಿಳಿಸಿದರು.

ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಿನ ಪಾಲನೆಗಾಗಿ ಎಫ್ಎಸ್ಟಿ, ಎಸ್ಎಸ್ಸ್ಟಿ ಹಾಗೂ ವಿಎಸ್ಟಿ ತಂಡಗಳನ್ನು ರಚಿಸಲಾಗಿದೆ. ಅಲ್ಲದೇ ಮಾರ್ಚ 10 ಸಂಜೆ 5 ಗಂಟೆಯಿಂದಲೇ ಸದಾಚಾರ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣಾ ಆಯೋಗ ಈ ಬಾರಿ ಪ್ರತಿ ಅಭ್ಯಥರ್ಿಗೆ 70 ಲಕ್ಷ ರೂ. ಖಚರ್ು ಮಾಡಲು  ಅವಕಾಶ ಕಲ್ಪಿಸಲಾಗಿದೆ. ಪ್ರತಿಯೊಬ್ಬ ಅಭ್ಯಥರ್ಿಯು ನಾಮಪತ್ರ ಸಲ್ಲಿಸುವ ಪೂರ್ವ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಚಾಲ್ತಿ ಖಾತೆ ತರೆಯತಕ್ಕದ್ದು. ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯ ದೂರುಗಳಿದ್ದಲ್ಲಿ ಸಿ-ವಿಜಿಲ್ ಹಾಗೂ ದೂರು ನಿರ್ವಹಣಾ ಕೇಂದ್ರ 1950 ನಂಬರಿಗೆ ಕರೆ ಮಾಡಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.

ಜಿ.ಪಂ ಸಿಇಓ ಹಾಗೂ ಎಂಸಿಸಿ ನೋಡಲ್ ಅಧಿಕಾರಿ ಗಂಗೂಬಾಯಿ ಮಾನಕರ ಮಾತನಾಡಿ ಚುನಾವಣಾ ಪ್ರಚಾರಕ್ಕೆ ರಾಜಕೀಯ ಪಕ್ಷಗಳಿಗೆ ಮತ್ತು ಅಭ್ಯಥರ್ಿಗಳಿಗೆ ಏಕ ಗವಾಕ್ಷಿ ಪದ್ದತಿ ಮೂಲಕ ಅನುಮತಿ ನೀಡಲಾಗುತ್ತಿದೆ. ಸಭೆ, ಸಮಾರಂಭ ಮತ್ತು ರ್ಯಾಲಿಗಳ ಕುರಿತು ವಿವರಗಳೊಂದಿಗೆ ಅಜರ್ಿ ಸಲ್ಲಿಸಬೇಕು. ಅಲ್ಲದೇ ರಾಜಕೀಯ ಪಕ್ಷಗಳ ಅಭ್ಯಥರ್ಿಗಳು ಜಾಹೀರಾತು ಪ್ರಕಟಿಸುವ ಮೊದಲು ಮಾಧ್ಯಮ ದೃಢೀಕರಣ ಮತ್ತು ಮುನ್ನೆಚ್ಚರಿಕೆ ಸಮಿತಿ ಗಮನಕ್ಕೆ ತಂದು ಅನುಮತಿ ಪತ್ರ ಪಡೆಯಬೇಕು ಎಂದರು.

ಮುದ್ರಣ, ಇಲೇಕ್ಟ್ರಾನಿಕ್ಸ್ ಮಾಧ್ಯಮ, ಆಕಾಶವಾಣಿ, ಕೇಬಲ್, ಮೊಬೈಲ್ ಎಸ್ಎಂಎಸ್, ಅಂತಜರ್ಾಲ ತಾಣಗಳಲ್ಲಿ ಪ್ರಕಟವಾಗುವ ಜಾಹೀರಾತುಗಳ ಬಗ್ಗೆಯೂ ಎಂಸಿಎಂಸಿ ಸಮಿತಿ ಕಣ್ಣಿಡಲಿದೆ. ಚುನಾವಣಾ ಆಯೋಗ ಈ ಬಾರಿ ಪ್ರಚಾರ ಸಾಮಗ್ರಿಗಳು ಪರಿಸರ ಸ್ನೇಹಿಯಿಂದ ಕೂಡಿರಬೇಕು ಎಂದು ತಿಳಿಸಿದೆ. ಅಲ್ಲದೇ ಶೋಷಿಯಲ್ ಮೇಡಿಯಾಗಳಾದ ವಾಟ್ಸಪ್, ಟ್ವಿಟ್ಟರ್, ಫೇಸ್ಬುಕ್, ಇನ್ಸ್ಟಾಗ್ರಾಮ್ಗಳಲ್ಲಿ ಚುನಾವಣೆಗೆ ಸಂಬಂಧಿಸಿದ ಅಭ್ಯಥರ್ಿಗಳ ಪ್ರಚಾರ ಹಾಗೂ ಜಾಹೀರಾತುಗಳ ಮೇಲು ನಿಗಾ ಇಡಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ ಮಾತನಾಡಿ ರಾಜಕೀಯ ಪಕ್ಷಗಳಿಗೆ ಒಂದು ವಾಹನ ಮಾತ್ರ ಬಳಸಲು ಅವಕಾಶವಿದೆ. ದೂರುಗಳ ಬಂದಲ್ಲಿ ತಕ್ಷಣ ಕ್ರಮಕೈಗೊಳ್ಳಲಾಗುತ್ತಿದೆ. ಅಲ್ಲದೇ ಪೇಸ್ಬುಕ್ನಲ್ಲಿ ಚುನಾವಣಾ ಪ್ರಚಾರದ ಲೈವ್ ನೀಡುವಂತಿಲ್ಲ. ಸಾಮಾಜಿ ಜಾಲತಾಣದಲ್ಲಿ ಚುನಾವಣಾ ಪ್ರಚಾರದ ಬಗ್ಗೆ ದೂರುಗಳು ಬಂದಲ್ಲಿ ಕ್ರಮಕೈಗೊಳ್ಳಲಾಗುವುದೆಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಶಶೀಧರ ಕುರೇರ ಮಾತನಾಡಿ ರಾಜಕೀಯ ಪಕ್ಷದ ಅಭ್ಯಥರ್ಿಗಳು ಕ್ರಿಮಿನಲ್ ಮೊಕದ್ದಮೆಗೆ ಒಳಗಾಗಿದ್ದಲ್ಲಿ ಮೂರು ಸಾರಿ ಪತ್ರಿಕಾ ಪ್ರಕಟಣೆ ಹಾಗೂ ಟಿವಿ ಮಾಧ್ಯಮದಲ್ಲಿ ಪ್ರಕಟಿಸಬೇಕು. ಪಕ್ಷದವರಾದಲ್ಲಿ ಅಧಿಕೃತ ವೆಬ್ಸೈಟನಲ್ಲಿ ಮಾಹಿತಿಯನ್ನು ಪ್ರಚೂರಪಡಿಸತಕ್ಕದೆಂದು ತಿಳಿಸಿದರು.

ಸಭೆಯಲ್ಲಿ ಜಿ.ಪಂ ಉಪಕಾರ್ಯದಶರ್ಿ ದುಗರ್ೇಶ ರುದ್ರಾಕ್ಷಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.