ಬಿಜೆಪಿ ಸೇರಿದ ಬ್ಯಾಡ್ಮಿಂಟನ್ ಚಾಂಪಿಯನ್ ಸೈನಾ ನೆಹ್ವಾಲ್

ನವದೆಹಲಿ, ಜ ೨೯,  ಬ್ಯಾಡ್ಮಿಂಟನ್ ಚಾಂಪಿಯನ್ಸೈನಾ ನೆಹ್ವಾಲ್ ಬುಧವಾರ ಅಧಿಕೃತವಾಗಿಭಾರತೀಯ ಜನತಾ ಪಕ್ಷ ಸೇರ್ಪಡೆಗೊಂಡಿದ್ದಾರೆ.ಬಿಜೆಪಿ  ಕೇಂದ್ರ ಕಚೇರಿಯಲ್ಲಿ  ನಡೆದ  ಸರಳ ಸಮಾರಂಭದಲ್ಲಿ  ಸೈನಾ ನೆಹವಾಲ್ ಅವರನ್ನು  ಬಿಜೆಪಿ ಪಕ್ಷಕ್ಕೆ   ಬರಮಾಡಿಕೊಳ್ಳಲಾಯಿತು.  ಪ್ರತಿಭಾವಂತ  ಬ್ಯಾಡ್ಮಿಂಟನ್  ಕ್ರೀಡಾಪಟು   ಸೈನಾ  ನೆಹ್ವಾಲ್ ಪದಕಗಳನ್ನು  ದೇಶಕ್ಕೆ  ತಂದು ಕೊಟ್ಟಿದ್ದಾರೆ.   ಈಗ  ಬ್ಯಾಡ್ಮಿಂಟನ್ ಅಂಗಳದಿಂದ  ನೇರವಾಗಿ ರಾಜಕೀಯಕ್ಕೆ ಬಂದಿದ್ದಾರೆ. 

 ಸೈನಾ ನೆಹವಾಲ್ ಬಿಜೆಪಿಗೆ ಸೇರ್ಪಡೆಗೊಂಡಿರುವ  ಸುದ್ದಿ ಕ್ರೀಡಾ ಜಗತ್ತಿನಲ್ಲಿ  ಸಂಚಲನ ಮೂಡಿಸಿದೆ. ಸೈನಾ ನೆಹವಾಲ್ ಅವರು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಯಾಗಿದ್ದರು    ಆಗ  ಅವರು ಪ್ರಧಾನಿ  ನರೇಂದ್ರ ಮೋದಿ ಅವರಿಗೆ  ಬ್ಯಾಡ್ಮಿಂಟನ್   ಬ್ಯಾಟ್ ಅನ್ನು ಉಡುಗೊರೆಯಾಗಿ  ನೀಡಿದ್ದರು. ದೆಹಲಿಯಲ್ಲಿ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಸೈನಾ ನೆಹವಾಲ್ ಬಿಜೆಪಿ  ಸೇರ್ಪಡೆ ಮಹತ್ವ ಪಡೆದುಕೊಂಡಿದೆ.

 ಹರಿಯಾಣ ರಾಜ್ಯದಲ್ಲಿ ಜನಿಸಿದ ಸೈನಾ ದೇಶದ ಅತ್ಯಂತ ಯಶಸ್ವಿ ಕ್ರೀಡಾಪಟುಗಳಲ್ಲಿ ಒಬ್ಬರು. ಸೈನಾ ಹೈದರಾಬಾದ್‌ನಲ್ಲಿ ನೆಲೆಸಿ,  ಗೋಪಿಚಂದ್ ಅಕಾಡೆಮಿಯಲ್ಲಿ ತರಬೇತಿ ಪಡೆದುಕೊಂಡಿದ್ದರು. ಸೈನಾ ಒಲಿಂಪಿಕ್ಸ್ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಮುಡಿಗೇರಿಸಿಕೊಂಡಿದ್ದರು.  ೨೦೧೫ ರಲ್ಲಿ ಅವರು ವಿಶ್ವದ ನಂಬರ್ ಒನ್ ಶ್ರೇಯಾಂಕಿತ ಮಹಿಳಾ ಶಟ್ಲರ್ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದರು. ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ ಸೈನಾ ೯ ನೇ ಸ್ಥಾನದಲ್ಲಿದ್ದಾರೆ. ಸೈನಾ ೨೪ ಪ್ರಮುಖ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ೨೦೧೮ ರಲ್ಲಿ ನೆಹವಾಲ್ ಸಹ ಕ್ರೀಡಾ ಪಟು ಹೈದರಾಬಾದ್ ಮೂಲದ ಪರುಪಲ್ಲಿ ಕಶ್ಯಪ್ ಅವರನ್ನು ವಿವಾಹವಾಗಿದ್ದರು.