ಬ್ಯಾಡಗಿ ಐದನೇ ದಿನಕ್ಕೆ ಕಾಲಿಟ್ಟ ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರ
ಬ್ಯಾಡಗಿ 14: ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳಿಂದ ಕೈಗೊಂಡ 2 ನೇ ಹಂತದ ಮುಷ್ಕರ ಶುಕ್ರವಾರ ಪಟ್ಟಣದಲ್ಲಿ ಐದನೇ ದಿನಕ್ಕೆ ಕಾಲಿಟ್ಟಿದೆ.ಮೂಲ ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆ ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಿ ಆದೇಶ ನೀಡುವ ಬಗ್ಗೆ ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಸೌಲಭ್ಯಗಳ ಕಲ್ಪಿಸುವ ಬಗ್ಗೆ ಅಂತರ ಜಿಲ್ಲಾ ವರ್ಗಾವಣೆಯ ಕೆಸಿಎಸ್‌ಆರ್ ನಿಯಮ 16 ಎ ಅನ್ನು ಮರುಸ್ಥಾಪಿಸುವ ಬಗ್ಗೆ ಕ್ರಮಕ್ಕೆ ಮುಷ್ಕರ ನಿರತರು ಒತ್ತಾಯಿಸಿ ಮುಷ್ಕರ ಪ್ರಾರಂಭವಾಗಿದೆ.ತಾಲೂಕಾ ಗ್ರಾಮಾಡಳಿತಗಾರರ ಮುಷ್ಕರದಲ್ಲಿ ತಾಲೂಕಾ ಗ್ರಾಮಾಡಳಿತಾಧಿಕಾರಿಗಳ ಸಂಘದ ಅಧ್ಯಕ್ಷ ಃ ಓ ಕವಾಸ್ಕ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಂಡಪ್ಪ ಹುಬ್ಬಳ್ಳಿ,ತಾಲೂಕಾ ಉಪಾಧ್ಯಕ್ಷ ಹೇಮಾ ಗಳಗನಾಥ ಖಜಾಂಚಿ ಸಂತೋಷ ವಿಭೂತಿ,ಗೌರವಾಧ್ಯಕ್ಷ ಶಬ್ಬೀರ ಬಾಗೇವಾಡಿ, ಜಿಲ್ಲಾ ಉಪಾಧ್ಯಕ್ಷ- ಪ್ರಭಾವತಿ ಬಡಿಗೇರ, ಶಶಿಧರ ಹಿರೇಮಠ, ಲಕ್ಷ್ಮಿ, ಶೋಭಾ, ರೇಖಾ, ಹೇಮಾ, ಸೇರಿದಂತೆ ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಎಲ್ಲ ಪದಾಧಿಕಾರಿಗಳು ಭಾಗವಹಿಸಿದ್ದರು.