ಲೋಕದರ್ಶನವರದಿ
ರಾಣೇಬೆನ್ನೂರು 2: ಸಾರ್ವಜನಿಕ ಸಕರ್ಾರಿ ಆಸ್ಪತ್ರೆಯಿಂದ ಅಕ್ರಮ ಗರ್ಭಪಾತಕ್ಕೊಳಗಾದ ಸಂತ್ರಸ್ಥ ಮಹಿಳೆಯರಿಗೆ ಶೀಘ್ರ ಪರಿಹಾರ ವಿತರಣೆಗೆ ಕ್ರಮಕೈಗೊಳ್ಳುವಲ್ಲಿ ನಿರ್ಲಕ್ಷ್ಯತನ ಧೋರಣೆ ಅನುಸರಿಸಿದ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ|| ಪರಮೇಶ್ವಪ್ಪ ಆರ್.ಸಿ. ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ಕನರ್ಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಅಖಂಡಾನಂದಸ್ವಾಮಿ ಬಣ) ಮುಖಂಡರು ಮತ್ತು ಕಾರ್ಯಕರ್ತರು ಸೋಮವಾರ ಆಸ್ಪತ್ರೆಯ ಸಭಾಂಗಣದಲ್ಲಿ ಧರಣಿ ನಡೆಸಿದರು.
ಧರಣಿ ನಿತರ ಮುಖಂಡ ಶಿವಪುತ್ರಪ್ಪ ಮಲ್ಲಾಡದ ಅವರು ಮಾತನಾಡಿ 1522ಮಹಿಳೆಯರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಉದ್ಯೋಗ ಸೃಷ್ಠಿ ಯೋಜನೆಯಲ್ಲಿ ಪರಿಹಾರ ಒದಗಿಸುವ ಸಲುವಾಗಿ ಸಂತ್ರಸ್ಥ ಮಹಿಳೆಯರಿಗಾಗಿ ಯೋಜನೆ ರೂಪಿಸಿತ್ತು. ಆದರೆ, ಸಂಬಂಧಿಸಿದಂತೆ ಅಜರ್ಿಗಳನ್ನು ಸರಿಯಾಗಿ ವಿತರಿಸಿದೇ ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದರಿಂದ ಪರಿಹಾರದಿಂದ ಸಂತ್ರಸ್ಥ ಮಹಿಳೆಯರು ವಂಚಿತರಾಗುತ್ತಿದ್ದಾರೆ. ಇದಕ್ಕೆ ಕಾರಣರಾದ ಡಾ|| ಪರಮೇಶ್ವರ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿದರು.
ಮುಂಜಾನೆಯಿಂದ ಆರಂಭಗೊಂಡ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಸಂಭಂದಿಸಿದ ಯಾವುದೇ ಅಧಿಕಾರಿಗಳು ಬಾರದೇ ಇದ್ದುದ್ದರಿಂದ ಆಕ್ರೋಶಗೊಂಡಿದ್ದ, ಧರಣಿ ನಿರತರು ನಿರಂತರ ಉಪವಾಸ ಸತ್ಯಾಗ್ರಹ ಆರಂಭಿಸಲು ಮುಂದಾಗಿದ್ದರು.
ಧರಣಿ ನಿರತರು ತಮ್ಮ ಬಿಗಿಪಟ್ಟು ಸಡಿಲಿಸದೇ ಮುಂದುವರೆದಿರುವ ಸುದ್ದಿ ತಿಳಿಯುತ್ತಿದ್ದಂತೆ ಸಂಜೆ ಸ್ಥಳಕ್ಕೆ ದೌಡಾಯಿಸಿದ ಬ್ಯಾಡಗಿ ಶಾಸಕ ವೀರೂಪಾಕ್ಷಪ್ಪ ಬಳ್ಳಾರಿ ಅವರು ಧರಣಿ ನಿರತರೊಂದಿಗೆ ಮಾತುಕತೆ ನಡೆಸಿ ಈ ಕುರಿತು ಇದೇ ಜುಲೈ 6ರಂದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸುವ ಮೂಲಕ ಶಾಶ್ವತ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು. ಇದರಿಂದ ತೃಪ್ತರಾಗದ ಧರಣಿ ನಿರತರು ಜಿಲ್ಲಾಧಿಕಾರಿಗಳು ಇಂದೇ ಸ್ಥಳಕ್ಕೆ ಧಾವಿಸಿ ಪರಿಹಾರ ನೀಡಬೇಕೆಂದು ಒಕ್ಕೂರಲ ಆಗ್ರಹಿಸಿದರು.
ದೂರವಾಣಿ ಮೂಲಕ ಧರಣಿ ನಿರತ ಮುಖಂಡ ಮಲ್ಲಾಡದ ಅವರೊಂದಿಗೆ ಸಮಾಲೋಚನೆ ನಡೆಸಿದ ಶಾಸಕ, ಪೌರಾಡಳಿತ ಸಚಿವ ಆರ್.ಶಂಕರ್ ಅವರು ತಾವು ಬೆಂಗಳೂರಿನಲ್ಲಿದ್ದು, ಇಂದೇ ಸೂಕ್ತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಾರದು ತಾವು 6ರಂದು ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚಿಸಿ ಖಂಡಿತ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಮುಂದಾಗುವುದಾಗಿ ಭರವಸೆ ನೀಡಿದ್ದರಿಂದ ಧರಣಿ ನಿರತರು ತಾತ್ಕಾಲಿಕವಾಗಿ ಧರಣಿಯನ್ನು ಹಿಂಪಡೆದರು.
ಧರಣಿ ಮುಂಚೂಣಿಯಲ್ಲಿ ರವಿಂದ್ರಗೌಡ ಪಾಟೀಲ, ಕುಮಾರ ಖಂಡೇಬಾಗೂರ, ಶಿವಾನಂದ ಹಿರಿಯಕ್ಕನವರ, ಜಗದೀಶ ಕೆರೋಡಿ, ರವಿ ಕೆರೋಡಿ, ರಾಜು ಓಲೇಕಾರ, ರಾಜು ದೊಡ್ಡಮನಿ, ಮಲ್ಲೇಶಪ್ಪ ಲಮಾಣಿ, ಪರಮೇಶಪ್ಪ ಲಮಾಣಿ, ಹರಿಹರಗೌಡ ಪಾಟೀಲ, ಶಕುಂತಲಮ್ಮ ಪತ್ರೆರ, ರಿಂದವ್ವ ಮಡಿವಾಳರ, ಮಂಜಮ್ಮ ಲಮಾಣಿ, ಚನ್ನಮ್ಮ ಲಮಾಣಿ, ಗಂಗಮ್ಮ ಕಟಗಿ, ಲಲಿತಮ್ಮ ಲಮಾಣಿ, ಈರವ್ವ ಲಮಾಣಿ, ಗಂಗಮ್ಮ ಎರೇಕೊಪ್ಪಿ ಸೇರಿದಂತೆ ವಿವಿಧ ತಾಂಡೆಗಳ ನೂರಾರು ಸಂತ್ರಸ್ಥ ಮಹಿಳೆಯರು ಪಾಲ್ಗೊಂಡಿದ್ದರು.