ವೀರೇಶ ಕುರ್ತಕೋಟಿ
ಹುನಗುಂದ: ಗಬ್ಬೆದ್ದು ನಾರುವ ಬಸ್ ನಿಲ್ದಾಣದ ಶೌಚಾಲಯದ ಸೆಪ್ಟಿಕ್ ಟ್ಯಾಂಕ ಮತ್ತು ಸುತ್ತಲಿನ ಚರಂಡಿಗಳು ಒಡೆದು ಹೋಗಿ ಮೂತ್ರವೆಲ್ಲ ನಿಲ್ದಾಣದ ಆವರಣದಲ್ಲಿ ಹರಿಯುತ್ತಿದ್ದು ಪ್ರಯಾಣಿಕರು ದುನರ್ಾತ ತಾಳಲಾರದೆ ಮೂಗು ಮುಚ್ಚಿಕೊಂಡು ಕುಳಿತುಕೊಳ್ಳುವ ಪರಸ್ಥಿತಿ ಬಸ್ ನಿಲ್ದಾಣದಲ್ಲಿ ಕಾಣಬಹುದು.
ಹೌದು ಇದು ಹುನಗುಂದ ಪಟ್ಟಣದ ಬಸ್ ನಿಲ್ದಾಣದಲ್ಲಿಯ ಕಥೆ. ಬಸ್ ನಿಲ್ದಾಣ ನಿಮರ್ಾಣವಾಗಿ 6ವರ್ಷ ಹಾಗೂ ನೂತನ ಬಸ್ ಘಟಕ ಪ್ರಾರಂಭಗೊಂಡು ಒಂದು ವರ್ಷ ಕಳೆದರೂ ಸಾರಿಗೆ ಇಲಾಖೆ ಮೇಲಾಧಿಕಾರಿಗಳ ನಿರ್ಲಕ್ಷದಿಂದ ಪ್ರಯಾಣಿಕರಿಗೆ ಮೂಲಭೂತ ಸೌಲಭ್ಯಗಳಾದ ಮಹಿಳಾ ವಿಶ್ರಾಂತಿ ಗೃಹ, ಕುಡಿಯುವ ನೀರಿನ ಅವ್ಯವಸ್ಥೆ ಸುತ್ತಲೂ ವಿದ್ಯುತ್ ಬೆಳಗದೆ ಇರುವದರ ಜೊತೆಗೆ ಸೌಲಭ್ಯಕ್ಕಾಗಿ ಪ್ರಯಾಣಿಕರು ಪರದಾಡುವ ಸ್ಥಿತಿ ನಿಮರ್ಾಣವಾಗಿದೆ. ನಿಲ್ದಾಣದಿಂದ ಹೊರಡುವ ಮತ್ತು ಬರುವ ಬಸ್ಗಳಿಗೆ ಧ್ವನಿವರ್ಧಕ ಸಂಬಂಧವಿಲ್ಲದಂತೆ ಒದರುತ್ತಿದೆ. ಹೋಗು ಬರುವ ಬಸ್ಸಿಗೆ ಸಂಬಂಧವಿಲ್ಲದಂತೆ ಸೂಚನೆ ನೀಡುವದರಿಂದ ಬರುಹೋಗುವ ಪ್ರಯಾಣಿಕರು ಗಭರ್ಿಣಿಯರು, ವಯೋವೃದ್ಧರು ಅತ್ತ-ಇತ್ತ ತಿರುಗಾಡುವ ಸ್ಥಿತಿ ನಿಮರ್ಾಣವಾಗಿದೆ. ನಿಲ್ದಾಣದ ತುಂಬೆಲ್ಲ ಬ್ಲೀಚಿಂಗ್ ಹಾಕದೆ ಶೌಚಾಲಯದ ದುವರ್ಾಸನೆ ತುಂಬಾ ಹರಡುವದರಿಂದ ದಿನವಿಡಿ ಶಾಲಾ ಮಕ್ಕಳು ಕಾಲೇಜ ವಿದ್ಯಾಥರ್ಿಗಳು ಮತ್ತು ಪ್ರಯಾಣಿಕರು ಮೂಗು ಮುಚ್ಚಿಕೊಂಡೆ ರೋಗ-ರುಜಿನಗಳು ಹರಡುವ ಅಂಜಿಕೆಯಲ್ಲಿ ಕುಳಿತುಕೊಳ್ಳುವದು ಅನಿವಾರ್ಯವಾಗಿದೆ. ನಿಲ್ದಾಣದ ಇಳಗೆ ಖಾಸಗಿ ವಾಹನ ಭರಾಟೆ ಹೇಳತೀರದು. ಮತ್ತು ನಿಲ್ದಾಣ ಮುಖ್ಯ ದ್ವಾರದಲ್ಲಿ ಎರ್ರಾ-ಬಿರ್ರಿಯಾಗಿ ನಿಲ್ಲಿಸುತ್ತಿರುವ ದ್ವಿಚಕ್ರಗಳ ನಿಲುಗಡೆಯಿಂದ ರಸ್ತೆ ತೆರವಿಲ್ಲದೆ ಎಷ್ಟೊ ಮಹಿಳೆಯರು, ವೃದ್ಧ ಪ್ರಯಾಣಿಕರು ಬಿದ್ದಿರುವ ಸಂಗತಿಗಳ ಜೊತೆಗೆ ನಿಲ್ದಾಣದ ಒಳ-ಹೊರಗೆ ಸ್ವಚ್ಚತೆ ಕಣ್ಣು ಮುಚ್ಚಾಲೆಯಾಗಿದೆ.
ಪ್ರಯಾಣಿಕರಿಗೆ ಸಂಪೂರ್ಣ ಸೌಲಭ್ಯ ಒದಗಿಸುವಲ್ಲಿ ಅಧಿಕಾರಿ ವರ್ಗ ಶ್ರಮಿಸುವರೆ ಕಾಯ್ದು ನೋಡೋಣ.