ನಾಗವೇಣಿ ಗರೂರ ರಿಂದ ಬೇಬಿ ಸ್ಟ್ರ್ಯಾಲರ್ ಕೊಡುಗೆಯಾಗಿ ವಿತರಣೆ : ಹಲವರಿಂದ ಮೆಚ್ಚುಗೆ
ಕೊಪ್ಪಳ 18; ನಗರದ ಸಮೂಹ ಸಾಮರ್ಥ್ಯ ಪ್ರತಿಷ್ಠಾನ ಸಂಸ್ಥೆಯಲ್ಲಿ ಆರೈಕೆಯಲ್ಲಿರುವ ಬಡ ನಿರ್ಗತಿಕ ಶಿಶುಗಳಿಗೆ ಅವರ ಪಾಲನೆ ಪೋಷಣೆಗಳಿಗೆ ಅವಶ್ಯಕತೆ ಇರುವ ಬೇಬಿ ಸ್ತ್ರ್ಯಾಲರ್ (ಚೇರ್ ಗಳನ್ನು) ಕೊಪ್ಪಳ ಇನ್ನರ್ ವೀಲ್ ಕ್ಲಬ್ಬಿನ ಸಂಪಾದಕರಾದ ನಾಗವೇಣಿ ಗರುರ ರವರು ಕೊಡುಗೆಯಾಗಿ ನೀಡಿ ಬಡ ಶಿಶುಗಳ ಪಾಲನೆ ಪೋಷಣೆ ಗಳಿಗೆ ಸಂಜೀವಿನಿಯಾಗಿ ಬೆಂಬಲಿಸಿ ಶಿಶುಗಳ ಚಲನಶೀಲತೆಗೆ ಶ್ರಮಿಸಿದ್ದಾರೆ. ಇದರಲ್ಲಿ ಶ್ರವಣ ಮತ್ತು ಮಾತಿನ ದೌರ್ಬಲ್ಯ ಗಳ ಕಡಿವಾಣಕ್ಕೆ ಶ್ರಮಿಸಿದ ಇವರು ಇಂತಹ ಮಕ್ಕಳ ಅಭಿವೃದ್ಧಿ ಮತ್ತು ಯೋಗಕ್ಷೇಮ ವನ್ನು ಬೆಂಬಲಿಸುವಂತಹ ಕಾರ್ಯ ನಾಗವೇಣಿ ಗರೂರ್ ರವರು ಮಾಡಿದ್ದಾರೆ ಎಂದು ಸಂಸ್ಥೆಯ ಸಂಯೋಜಕರು ಅವರ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿ ಸಂಸ್ಥೆಯ ಪರವಾಗಿ ಅವರಿಗೆ ಅಭಿನಂದಿಸಿದ್ದಾರೆ, ಈ ಸಂದರ್ಭದಲ್ಲಿ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ ಕಾರ್ಯಕಾರಣಿ ಸಮಿತಿ ಹಿರಿಯ ಸದಸ್ಯರಾದ ಡಾ, ರಾಧಾ ಕುಲಕರ್ಣಿ ಸದಸ್ಯರಾದ ಅನಿತಾ ಬಜಾರ್ ಮಠ ಸಮೂಹ ಸಾಮರ್ಥ್ಯ ಸಂಸ್ಥೆಯ ನಿರ್ದೇಶಕ ಹಂಪಣ್ಣ ಮತ್ತು ಯೋಜನಾ ವ್ಯವಸ್ಥಾಪಕ ಹೆಚ್ ಎನ್ ಬಸಪ್ಪ, ಸಹ ಪಾಲ್ಗೊಂಡಿದ್ದು ಬೇಬಿ ಸ್ಟ್ರ್ಯಾಲೆರ್ ಕೊಡುಗೆಯಾಗಿ ನೀಡಿದ ನಾಗವೇಣಿ ಗರುರ ಮತ್ತು ಕೊಪ್ಪಳ ಇನ್ನರ್ ವೀಲ್ ಕ್ಲಬ್ ಪದಾಧಿಕಾರಿಗಳ ಸಮಾಜ ಸೇವ ಕಾರ್ಯಗಳಿಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು,