ಇ-ಕೆವೈಸಿ ನಿಯಮಗಳನ್ನು ಸರಳಗೊಳಿಸಿದೆ : ಶರತಬಾಬು
E-KYC rules have been simplified: Sharat Babu
ಲೋಕದರ್ಶನ ವರದಿ
ಶಿಗ್ಗಾವಿ 18 : ಇ-ಕೆವೈಸಿ ನಿಯಮಗಳನ್ನು ಸರಳಗೊಳಿಸಿ ಬ್ಯಾಂಕ್ ವಹಿವಾಟು ಮತ್ತು ಖಾತೆ ತೆರೆಯುವ ಪ್ರಕ್ರಿಯೆ ಸುಲಭವಾಗಿ ಬಳಕೆಗೆ ಅವಕಾಶ ನೀಡಲಾಗಿದೆ ಎಂದು ಹಾವೇರಿ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಅಧಿಕಾರಿ ಶರತ್ ಬಾಬು ಹೇಳಿದರು. ತಾಲೂಕಿನ ಮುಗಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಹಾವೇರಿ ಕೆನರಾ ಬ್ಯಾಂಕಿನ ಪ್ರಾದೇಶಿಕ ಕಚೇರಿ ವತಿಯಿಂದ ಹಮ್ಮಿಕೊಂಡ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ' ಮತ್ತು ಆರ್ಥಿಕ ಸಾಕ್ಷರತೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾರತದ ಸೈಬರ್ಸ್ಪೇಸ್ ಹಿಂದೆಂದಿಗಿಂತಲೂ ಹೆಚ್ಚು ಚಟುವಟಿಕೆಯಿಂದ ಕೂಡಿದ್ದು, ಪ್ರತಿದಿನ ಕೋಟ್ಯಂತರ ವ್ಯವಹಾರ ಮತ್ತು ಸಂವಹನಗಳನ್ನು ನಿರ್ವಹಿಸುತ್ತಿದೆ. ಸೈಬರ್ ವಂಚನೆಗಳು ಎಂದರೆ ಅನಧಿಕೃತ ಪ್ರವೇಶ, ದತ್ತಾಂಶ ಕಳ್ಳತನ ಅಥವಾ ಆನ್ಲೈನ್ ವಂಚನೆಗಳಂತಹ ಡಿಜಿಟಲ್ ವೇದಿಕೆಗಳ ಮೂಲಕ ನಡೆಸಲಾಗುವ ವಂಚನೆ ಚಟುವಟಿಕೆಗಳು.
ಇವು ಸಾಮಾನ್ಯವಾಗಿ ಸಂತ್ರಸ್ಥರಿಗೆ ಆರ್ಥಿಕ ನಷ್ಟ ಉಂಟು ಮಾಡುವ ಉದ್ದೇಶ ಹೊಂದಿರುತ್ತದೆ ಎಂದರು. ಕೆನರಾ ಬ್ಯಾಂಕಿನ ಶಾಖಾಧಿಕಾರಿ ಲಲಿತಾ ಅವರು ಮಾತನಾಡಿ ಬ್ಯಾಂಕಿನ ಮಹಿಳೆಯರ ಸಂಬಂಧಪಟ್ಟಂತ ಕೆನರಾ ಎಂಜಿಲ್ ಅಕೌಂಟ್, ಆರ್ಡಿ ಖಾತೆ, ವಿದ್ಯಾರ್ಥಿಗಳ ಕಾಲರ್ ಶಿಪ್ ಖಾತೆಗಳ ಕುರಿತು ಹಾಗೂ ಇತ್ತೀಚಿನ ಡಿಜಿಟಲ್ ಪೇಂಟಿನ ಬಗ್ಗೆ ಪ್ರಾತ್ಯೇಕ್ಷಿಕ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿ ಎನ್.ಎನ್. ಸಕ್ರಿಯವರು ಮಹಿಳಾ ಸಬಲೀಕರಣ ವಿಷಯ ಕುರಿತು ಮಾತನಾಡಿದರು. ಸೊಸೈಟಿ ಕಾರ್ಯದರ್ಶಿ ಸುಮಾ ಬೆಂಗೇರಿ ಅಧ್ಯಕ್ಷತೆ ವಹಿಸಿದ್ದರು. ಅಮೂಲ್ಯ ಸಾಕ್ಷರತಾ ಕೇಂದ್ರದ ಅಧಿಕಾರಿ ರಾಜು ಕೆಂಭಾವಿ, ಈರಮ್ಮ ಮತ್ತೂರುಮಠ, ಮಹದೇವಕ್ಕ ಬದ್ರಶೆಟ್ಟಿ, ವಿಜಯಲಕ್ಷ್ಮೀ ಅರಳಿಕಟ್ಟಿ ಸೇರಿದಂತೆ ಇತರರು ಇದ್ದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 