ಬಿಜೆಪಿ ಸೇರ್ಪಡೆಗೊಂಡ ಖ್ಯಾತ ಕುಸ್ತಿ ಪಟು ಬಬಿತಾ ಪೋಗಟ್

ನವದೆಹಲಿ  ಆಗಸ್ಟ್ 12    ಅಂತರಾಷ್ಟ್ರೀಯ ಪ್ರಸಿದ್ಧ  ಕುಸ್ತಿಪಟು ಬಬಿತಾ ಫೋಗಟ್  ಹಾಗೂ  ಅವರ ತಂದೆ ಮಹಾವೀರ್ ಸಿಂಗ್ ಫೋಗಟ್  ಸೋಮವಾರ  ದೆಹಲಿಯಲ್ಲಿ  ಬಿಜೆಪಿಗೆ ಸೇರಿದರು.  

ಪಕ್ಷದ ಕೇಂದ್ರ ಕಚೇರಿಯಲ್ಲಿ ಕೇಂದ್ರ ಕ್ರೀಡಾ ಸಚಿವ ಕಿರಣ್  ರಿಜಿಜು ಅವರ ಸಮ್ಮುಖದಲ್ಲಿ   ತಂದೆ- ಮಗಳಿಗೆ  ಕೇಸರಿ  ವಸ್ತ್ರ ಹಾಕಿ ಅವರನ್ನು  ಬಿಜೆಪಿಗೆ  ಬರಮಾಡಿಕೊಳ್ಳಲಾಯಿತು.  

ಈ ವರ್ಷತ್ಯದಲ್ಲಿ   ಹರಿಯಾಣ ರಾಜ್ಯ ವಿಧಾನಸಭೆ ಚುನಾವಣೆ ನಡೆಯುವ  ಹಿನ್ನೆಲೆಯಲ್ಲಿ,  ಆ ರಾಜ್ಯದ  ಪ್ರಮುಖ ಕ್ರೀಡಾಪಟುಗಳಾದ  ಬಬಿತಾ ಮತ್ತು ಮಹಾವೀರ್  ಬಿಜೆಪಿಗೆ ಸೇರಿದ್ದಾರೆ. 

370 ನೇ ವಿಧಿಯನ್ನು ರದ್ದುಪಡಿಸಿದ ಹಿನ್ನೆಲೆಯಲ್ಲಿ ಹರಿಯಾಣ  ಮುಖ್ಯಮಂತ್ರಿ  ಮನೋಹರ್ ಲಾಲ್ ಖಟ್ಟರ್,  ಕಾಶ್ಮೀರದಿಂದ ಸುಂದರವಾದ ವಧುಗಳನ್ನು ಹರಿಯಾಣಕ್ಕೂ ಕರೆತರಬಹುದು  ಎಂಬ ವಿವಾದಾತ್ಮಕ ಹೇಳಿಕೆಯನ್ನು  ಬಬಿತ ಪೋಗಟ್  ಎರಡು ದಿನಗಳ ಹಿಂದೆ ಸಮರ್ಥಿಸಿಕೊಂಡಿದ್ದರು. ಅಷ್ಟೇ ಅಲ್ಲದೆ  370 ನೇ ವಿಧಿಯನ್ನು ರದ್ದುಪಡಿಸುವ  ಕೇಂದ್ರ ಸರ್ಕಾರದ ಕ್ರಮವನ್ನೂ ಬೆಂಬಲಿಸಿದ್ದರು.  ದೇಶದ ಸ್ವಾತಂತ್ರ್ಯ ಬಂದಿದ್ದನ್ನು  ನೋಡುವ ಅದೃಷ್ಟ ನನಗಿರಲಿಲ್ಲ ಆದರೆ,  ಸಂವಿಧಾನ ವಿಧಿ 370 ಮತ್ತು 35 ಎ ನೇ ವಿಧಿಯನ್ನು ರದ್ದುಪಡಿಸಿ, ಆ ಮೂಲಕ   ಕಾಶ್ಮೀರ ಸ್ವಾತಂತ್ರ್ಯ ಗಳಿಸುವುದನ್ನು ನೋಡಿ ಸಂತೋಷವಾಗಿದೆ ಎಂದು ಬಬಿತಾ ಟ್ವೀಟ್ ಮಾಡಿದ್ದರು.   

ಹರಿಯಾಣ ಬಿಜೆಪಿ ಸರ್ಕಾರ    ಆಟಗಾರರಿಗೆ    ಕಲ್ಪಿಸುವ ನಗದು ಪ್ರೋತ್ಸಾಹ  ಸೂಕ್ತವಾಗಿಲ್ಲ  ಎಂದು ಬಬಿತ  ರಾಜ್ಯ ಸರ್ಕಾರವನ್ನು ಕೆಲವು ಸಮಯದ ಹಿಂದೆ ಟೀಕಿಸಿದ್ದರು 2014 ಮತ್ತು 2018 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತ ಬಬಿತಾ ಪ್ರಸ್ತುತ "ನಾಚ್ ಬಲಿಯಾ"  ಟಿವಿ  ಡ್ಯಾನ್ಸ್  ಷೋ  ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.  ಸದ್ಯದಲ್ಲೇ  ಅವರನ್ನು ವಿವಾಹವಾಗಲಿರುವ  ಸಹ-ಕುಸ್ತಿಪಟು ವಿವೇಕ್ ಸುಹಾಗ್  ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮಹಾವೀರ್ ಸಿಂಗ್ ಫೋಗಟ್  ಅವರ ಹೆಣ್ಣು ಮಕ್ಕಳ ಜೀವನ  ಆಧರಿಸಿ  ಬಾಲಿವುಡ್  ನಟ  ಅಮೀರ್ ಖಾನ್, 2016 ರಲ್ಲಿ ದಂಗಲ್   ಎಂಬ  ಹೆಸರಿನ ಚಿತ್ರವನ್ನು ನಿರ್ಮಿಸಿದ್ದರು.