ಜಮಖಂಡಿ 21: ತಾಲ್ಲೂಕಿನ ಆಲಗೂರ ಪುನರ್ವಸತಿ ಕೇಂದ್ರದ ಹೊಸ ಬಬಲಾದಿ ಸದಾಶಿವ ಮುತ್ಯಾನ ಮಠದ ಜಾತ್ರೆಯು ಫೆ, 27 ರಿಂದ ಮಾರ್ಚ್ 1 ರವರೆಗೆ ಜಾತ್ರೆಯು ಅದ್ದೂರಿಯಾಗಿ ಜರುಗಲಿದೆ ಎಂದು ಮಠ ಪೂಜ್ಯರಾದ ಶಿವರುದ್ರಯ್ಯ ಅಜ್ಜನವರು ತಿಳಿಸಿದರು.
ಹೊಸ ಬಬಲಾದಿ ಸದಾಶಿವ ಮುತ್ಯಾನ ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆ, 27 ರಂದು ಸಾಯಂಕಾಲ 4 ಗಂಟೆಗೆ ಸದಾಶಿವ ಮುತ್ಯಾರ ಭಾವಚಿತ್ರ ಬನಶಂಕರಿ ತೋಟದ ವಿಠ್ಠಲ ಮಂದಿರದಿಂದ ಜಮಖಂಡಿ ನಗರದ ಪ್ರಮುಖ ರಸ್ತೆಯ ಮೂಲಕ ಕುಂಭಮೇಳ, ಆರತಿ ಹಾಗೂ ಸಕಲ ವಾದ್ಯಮೇಳದೊಂದಿಗೆ ಭವ್ಯ ಮೆರವಣಿಗೆ ನಡೆಯುವುದು. ನಂತರ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಮಹಾ ಶಿವರಾತ್ರಿ ಉಸಾಸನೆ, ರಾತ್ರಿ ಶಿವಭಜನೆ ಜರುಗುಲಾಗುವದು. 28 ರಂದು ಮುಂಜಾನೆ 8 ಗಂಟೆಗೆ ಮಠದಲ್ಲಿ ಮಹಾ ರುದ್ರಾಭಿಷೇಕ, ಸಿವಧಿಕ್ಷೇ, ರಾತ್ರಿ 8 ಗಂಟೆಗೆ ರಥೋತ್ಸವ ಹಾಗೂ ತುಲಾಭಾರ ನಡೆಯುತ್ತದೆ. ಮಾರ್ಚ್ 1 ರಂದು ಮುಂಜಾನೆ 10 ಗಂಟೆಗೆ ಮಹಾಪ್ರಸಾದ, ತ್ರಿಕಾಲ ಜ್ಞಾನದ ಕಾಲಜ್ಞಾನ ನುಡಿ ಸಾರುವುದು. ತೆರೆಬಂಡಿ ಸ್ಪರ್ಧೆ ಜರುಗುತ್ತದೆ. ಹಾಗೂ ದನಗಳ ಜಾತ್ರೆಯು ಸಹ ನಡೆಯುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಾತ್ರೆಯ ಬೀತಿಪತ್ರಗಳನ್ನು ಬಿಡುಗೊಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಠದ ಪೂಜ್ಯರಾದ ಸದಾಶಿವ ಅಜ್ಜನವರು ಹಾಗೂ ಮಠದ ಭಕ್ತರು ಇದ್ದರು.