ಜಮ್ಮು, ಜನವರಿ 28 ಭಾರತದ ಗಡಿಯಲ್ಲಿ ಹಾರಾಟ ನಡೆಸುತ್ತಿದ್ದ ಪಾಕ್ ಡ್ರೋನ್ಅನ್ನು ಗಡಿ ರಕ್ಷಣಾ ಪಡೆ ಹೊಡೆದುರುಳಿಸಿದೆ ಎನ್ನಲಾಗಿದೆ. ಭಾರತ ಹಾಗೂ ಪಾಕಿಸ್ತಾನ ನಡುವಣ ಸಂಬಂಧ ತೀವ್ರ ಹದಗೆಟ್ಟಿತ್ತು. ಈಗ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ ಎನ್ನುವಾಗಲೆ ಈ ಘಟನೆ ಜರುಗಿದೆ. ಅರ್ನಿಯಾ ಭಾಗದಲ್ಲಿ ಸೋಮವಾರ ತಡರಾತ್ರಿ ಡ್ರೋನ್ ಒಂದು ಹಾರಾಟ ನಡೆಸುತ್ತಿತ್ತು. ತಕ್ಷಣ ಜಾಗರೂಕರಾದ ಬಿಎಸ್ಎಫ್ ಪಡೆ ಅದನ್ನು ನೆಲಕ್ಕುರುಳಿಸಿದೆ ಎಂದು ಬಿಎಸ್ಎಫ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎಂದೂ ಹೇಳಲಾಗಿದೆ.ಆದರೆ, ಡ್ರೋನ್ನಲ್ಲಿ ಯಾವುದೆ ಕ್ಯಾಮೆರಾ ಪತ್ತೆ ಆಗಿಲ್ಲ ಇದರ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ಇದು ಡ್ರೋನ್ ಎನ್ನುವುದು ಸದ್ಯದ ಪ್ರಾಥಮಿಕ ಹಂತದ ತನಿಖೆಯಿಂದ ಗೊತ್ತಾಗಿದೆ. ಆದರೆ ಹೆಚ್ಚಿನ ತನಿಖೆಯ ನಂತರವಷ್ಟೆ ನಿಜ ಸಂಗತಿ ತಿಳಿಯಬೇಕಿದೆ ಎಂದೂ ಅವರು ಹೇಳಿದ್ದಾರೆ ಗಡಿಯಲ್ಲಿ ಸೇನೆ ಅನೇಕ ಡ್ರೋನ್ ಗಳನ್ನು ಹೊಡೆದುರುಳಿಸಿರುವುದು ಹೊಸ ಸಂಗತಿ, ವಿಚಾರವೇನಲ್ಲ