ನವದೆಹಲಿ, ಡಿಸೆಂಬರ್ 1-ಬಿಎಸ್‌ಎಫ್‌ನ ದಿನದ ಅಂಗವಾಗಿ. ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಮತ್ತು ಪ್ರಧಾನಿ ನರೆಂದ್ರ ಮೋದಿ ಸಿಬ್ಬಂದಿ ಮತ್ತು ಅವರ ಕುಟುಂಬಕ್ಕೆ ಶುಭ ಹಾರೈಸಿದ್ದಾರೆ.
ಗಡಿ ಭದ್ರತಾ ಪಡೆಯ ಎಲ್ಲಾ ಸಿಬ್ಬಂದಿಗೆ ಶುಭಾಶಯ ತಿಳಿಸಲು ನನಗೆ ಖುಷಿಯಾಗಿದೆ ರಕ್ಷಣಾ ಸೇವೆಗಳಿಗೆ ನಾವು ಯಾವಾಗಲೂ ಕೃತಜ್ಞರಾಗಿರಬೇಕು.'ಡ್ಯೂಟಿ ಟು ಡೆತ್' ಎಂಬ ಧ್ಯೇಯವಾಕ್ಯದಿಂದ ನಿರ್ದೇಶಿಸಲ್ಲಪಟ್ಟಿರುವ ಅವರ ಬದ್ಧತೆ ಮತ್ತು ಶೌರ್ಯಕ್ಕೆ ನಾನು ಶಿರಬಾಗಿ ವಂದಿಸುವೆ ಎಂದು ನಾಯ್ಡು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಗಡಿ ಭದ್ರತಾ ಪಡೆ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಶುಭ ಕೋರಿದ್ದಾರೆ . ಈ ಕುರಿತು ಟ್ವೀಟ್ ಮಾಡಿರುವ ಅವರು, ಗಡಿ ರಕ್ಷಣೆಯಲ್ಲಿ ತೋರಿದ ಕಾಳಜಿ ಮತ್ತು ನೈಸರ್ಗಿಕ ವಿಪತ್ತುಗಳ ನಿರ್ವಹಣಾ ಸಮಯದಲ್ಲಿ ಬಿಎಸ್ಎಫ್ ಸಿಬ್ಬಂದಿಯ ಸೇವೆ ಅನನ್ಯ ಎಂದೂ ಸ್ಮರಿಸಿದ್ದಾರೆ.