ಓವೆಲ್ 07: ಟಿ20 ಕ್ರಿಕೆಟ್ನಲ್ಲಿ ದಾಖಲೆಗಳು ಸರ್ವಕಾಲಿಕವಲ್ಲ. ಈ ಆಟದಲ್ಲಿ ಒಬ್ಬರನ್ನೊಬ್ಬರು ಮೀರಿಸುವ ಸ್ಫೋಟಕ ಆಟಗಾರರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ. ಆದರೆ, ಇಂಗ್ಲೆಂಡ್ನ ಟಿ- 20 ಬ್ಲಾಸ್ಟ್ ಕ್ರಿಕೆಟ್ನಲ್ಲಿ ಇಂಗ್ಲೆಂಡ್ನ ಜೋ ಡೆನ್ಲಿ ಕ್ರಿಕೆಟ್ ಇತಿಹಾಸದಲ್ಲಿ ಯಾರು ಮಾಡದ ಅಪರೂಪದ ದಾಖಲೆ ನಿಮರ್ಿಸಿದ್ದಾರೆ.
ಹೌದು, ಯಾವೊಬ್ಬ ಆಟಗಾರ ಟಿ- 20 ಪಂದ್ಯದಲ್ಲಿ ಹೆಚ್ಚು ಸಿಕ್ಸರ್, ವೇಗದ ಶತಕ, ಅರ್ಧಶತಕ, ಹ್ಯಾಟ್ರಿಕ್ ವಿಕೆಟ್ ಹೀಗೆ ಯಾವುದೇ ದಾಖಲೆ ಮಾಡಿದರೂ ಈ ಹಿಂದೆ ಯಾರಾದರೂ ಮಾಡಿಯೇ ಇರುತ್ತಾರೆ. ಇಲ್ಲವಾದರೆ ಮುಂದೊಂದು ದಿನ ಯಾರಾದರೂ ಈ ದಾಖಲೆಯನ್ನು ಮುರಿಯುತ್ತಾರೆ. ಆದರೆ, ಡೆನ್ಲಿಯ ಈ ದಾಖಲೆ ಹಿಂದೆಯೂ ಯಾರೂ ಮಾಡಿಲ್ಲ, ಮುಂದೆಯೂ ಮಾಡುವುದು ಕಷ್ಟ ಎಂಬ ಅಪರೂಪದ ದಾಖಲೆ ನಿಮರ್ಿಸಿದ್ದಾರೆ.
ಆರಂಭಿಕರಾಗಿ ನಿನ್ನೆ ಕೆಂಟ್ ತಂಡದ ಪರ ಬ್ಯಾಟ್ ಬೀಸಿದ್ದ ಡೆನ್ಲಿ ಶತಕ ಬಾರಿಸಿದ್ದರು. 63 ಎಸೆತಗಳಲ್ಲಿ 12 ಬೌಂಡರಿ , 2 ಸಿಕ್ಸರ್ ಸಿಡಿಸಿದ್ದರು. ಅದೇ ಪಂದ್ಯದಲ್ಲಿ ಬೌಲಿಂಗ್ ಕೂಡ ಮಾಡಿದ್ದ ಡೆನ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದು ಸೋಲಿನತ್ತ ತೆರಳುತ್ತಿದ್ದ ತಂಡವನ್ನು ಗೆಲುವಿನತ್ತ ತಿರುಗಿಸಿದರು. ಕೊನೆಗೂ ಕೆಂಟ್ ತಂಡ ಸರರ್ೆ ತಂಡವನ್ನು 6 ರನ್ಗಳಿಂದ ರೋಚಕವಾಗಿ ಸೋಲಿಸಿತು.
ಈ ಪಂದ್ಯದಲ್ಲಿ ಡೆನ್ಲಿ, ಶತಕ ಹಾಗೂ ಹ್ಯಾಟ್ರಿಕ್ ವಿಕೆಟ್ ಪಡೆದು ತಮ್ಮ ತಂಡವನ್ನು ಗೆಲ್ಲಿಸಿದರಲ್ಲದೆ, ಅಪರೂಪದ ಸಾಧನೆಗೆ ಪಾತ್ರರಾದರು.