ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಅತ್ಯುತ್ತಮ ಸೇವಾ ಪ್ರಶಸ್ತಿ

ವಿಜಯಪುರ 01: ರಾಜ್ಯ ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಸಲ್ಲಿಸಿದ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ಕನರ್ಾಟಕ ಸಕರ್ಾರದ  ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು 2018ನೇ ಸಾಲಿನ ಅತ್ಯುತ್ತಮ ಸೇವಾ ಪ್ರಶಸ್ತಿಯನ್ನು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಬಿ.ಎಂ. ಪಾಟೀಲ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗೆ ನೀಡಲಾಗಿದೆ.

ಸೋಮವಾರ ದಿ.3ರಂದು ಬೆಂಗಳೂರು ಸ್ವಾತಂತ್ರ ಉದ್ಯಾನವನದಲ್ಲಿ ನಡೆಯಲಿರುವ ವಿಶ್ವ ವಿಕಲಚೇತನರ ದಿನಾಚರಣೆ ಸಮಾರಂಭದಲ್ಲಿ ಬಿ.ಎಲ್.ಡಿ.ಇ ವೈದ್ಯಕೀಯ ಕಾಲೇಜಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ನೀಡಲಾಗಿದೆ ಎಂದು ಇಲಾಖಾ ನಿದರ್ೆಶಕ ಜಯವಿಭವಸ್ವಾಮಿ ತಿಳಿಸಿದ್ದಾರೆ.

ವಿಜಯಪುರ ಬಿ.ಎಲ್.ಡಿ.ಇ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ರಾಜ್ಯ ಸಕರ್ಾರ ಸಹಯೋಗದೊಂದಿಗೆ 2013-14ನೇ ಸಾಲಿನಲ್ಲಿ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರವನ್ನು ಆರಂಭಸಲಾಯಿತು. ಈ ಕೇಂದ್ರವು ಇದುವರೆಗೆ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ 125ಮಿಕ್ಕಿ ವೈದ್ಯಕೀಯ  ತಪಾಸಣಾ ಶಿಬಿರಗಳನ್ನು ನಡೆಸಿ, 16448 ಜನರನ್ನು ತಪಾಸಣೆಗೆ ಒಳಪಡಿಸಿ 1706 ಜನರಿಗೆ ವಿಕಲಚೇತನರು ಎಂದು ಗುತರ್ಿಸಿ, ಗುರುತಿನ ಚೀಟಿಯನ್ನು ನೀಡಲಾಗಿದೆ. ಎನ್.ಟಿ.ಪಿ.ಸಿ ಕೂಡಗಿ ಹಾಗೂ ಬಿ.ಎಲ್.ಡಿ.ಇ ವಿವಿ ಧನ  ಸಹಯೊಗದೊಂದಿಗೆ 200ಕ್ಕೂ ಅಧಿಕ ವಿಕಲಚೇತನರಿಗೆ ಉಚಿತವಾಗಿ ಕೃತಕ ಅಂಗಾಂಗ ಸಾಧನಗಳನ್ನು ಅಳವಡಿಸಿ ಅವರು ಸ್ವತಂತ್ರರಾಗಿ ಬದುಕಲು ಅವಕಾಶ ಕಲ್ಪಿಸಲಾಗಿದೆ.

ಈ ಸಾಧನಗಳಿಂದ ಅವರು ಸಾಮಾಜಿಕವಾಗಿ ಉಪಯುಕ್ತವಾದ ಜೀವನ ನಡೆಸಲು ಸಹಕಾರಿಯಾಗಿದೆ. ಬಿ.ಎಲ್.ಡಿ.ಇ ಸೇವೆಯನ್ನು ಪರಿಗಣಿಸಿರುವ ರಾಜ್ಯ ಸಕರ್ಾರ ಈ ಪ್ರಶಸ್ತಿಯನ್ನು ನೀಡುತ್ತಿದ್ದು, ಸಂಸ್ಥೆಯ ಪರವಾಗಿ ವಿಕಲಚೇತನರ ಪುನರ್ವಸತಿ ಕೇಂದ್ರದ ನೋಡಲ್ ಅಧಿಕಾರಿ ಡಾ.ಎಂ.ಸಿ.ಯಡವಣ್ಣನವರ, ಆಸ್ಪತ್ರೆಯ ಸಹಾಯಕ ವೈದ್ಯಕೀಯ ಅಧೀಕ್ಷಕ ಡಾ.ವಿಜಯಕುಮಾರ ವಾರದ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.