ಉ.ಕರ್ನಾಟಕ ಭಾಗದ ವಿದ್ಯಾರ್ಥಿಗಳ ಪಾಲಿನ ಆಶಾಕಿರಣ ಬಿಎಲ್‌ಡಿಇ ಸಂಸ್ಥೆ: ಡಾ. ಮಿರ್ಧೆ
BLDE is a ray of hope for students of North Karnataka: Dr. Mirdhe
ವಿಜಯಪುರ 09: ಉಜ್ವಲ ಭವಿಷ್ಯಕ್ಕೆ ಓದು, ಪರಿಶ್ರಮ,ನಿರಂತರ ಅಧ್ಯಯನಶೀಲತೆಯನ್ನು ರೂಢಿಸಿಕೊಳ್ಳಬೇಕು. ಮಹಾವಿದ್ಯಾಲಯದ ಮೂಲ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಜ್ಞಾನ ಸಂಪಾದನೆಗೆ ಮುಂದಾಗಬೇಕು ಎಂದು ಪ್ರಾಚಾರ್ಯೆ ಡಾ.ರಾಬಿಯಾ ಎಂ.ಮಿರ್ಧೆ ಹೇಳಿದರು.
ನಗರದ ಬಿ.ಎಲ್.ಡಿ.ಇ.ಸಂಸ್ಥೆಯ ಎಸ್.ಬಿ.ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಸಹಯೋಗದಲ್ಲಿ ದಿನಾಂಕ:08-08-2025 ರಂದು ಜರುಗಿದ 2025-26 ನೇ ಸಾಲಿನ ಬಿ.ಎ ಮತ್ತು ಬಿ.ಎಸ್ಸಿ ಮತ್ತು ಬಿಸಿಎ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಧೀಕ್ಷಾರಂಭ(ಓರಿಯಂಟೇಶನ್ ಪ್ರೋಗ್ರಾಮ್) ಕಾರ್ಯಕ್ರಮದಲ್ಲಿ ಶೈಕ್ಷಣಿಕ ನೀತಿ ನಿಯಮಗಳು ವಿವಿಧ ವಿಭಾಗಗಳು ಹಾಗೂ ಸೌಲಭ್ಯಗಳನ್ನೂ ವಿದ್ಯಾರ್ಥಿಗಳಿಗೆ ಪರಿಚಯಿಸಿದರು. ಬಿ.ಎಲ್.ಡಿ.ಇ ಸಂಸ್ಥೆಯು ಉತ್ತರ ಕರ್ನಾಟಕದ ಜನಪ್ರಿಯ ಸಂಸ್ಥೆಯಾಗಿದೆ, ವಿದ್ಯಾರ್ಥಿಗಳ ಪಾಲಿನ ಆಶಾಕಿರಣ ಕಲಿಕಾರ್ಥಿಗಳ ಸರ್ವತೋಮುಖ ಏಳಿಗೆಗೆ ಶ್ರಮಿಸುತ್ತಿರುವ ಒಂದು ಹೆಮ್ಮೆಯ ಸಂಸ್ಥೆಯಾಗಿದ್ದು ಇದರ ಅಡಿಯಲ್ಲಿ ವಿವಿಧ ಮಹಾವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಾರಂಭವಾದ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
1945 ರಲ್ಲಿ ಪ್ರಾರಂಭವಾದ ಅಂದಿನ ವಿಜಯ ಕಾಲೇಜು ಇಂದಿನ ಎಸ್.ಬಿ.ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯ.ಇಲ್ಲಿ ಕಲಿತ ಹಲವಾರು ವಿದ್ಯಾರ್ಥಿಗಳು ತಮ್ಮ ಉತ್ತಮ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ. ಆ ಪ್ರಯತ್ನದಲ್ಲಿ ಇಂದಿನ ವಿದ್ಯಾರ್ಥಿಗಳು ಕೇವಲ ಪದವಿ, ಸರ್ಟಿಫಿಕೇಟ್ ಗಳಿಗಾಗಿ ಓದದೆ ಜೀವನದಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಿಕೊಂಡು ಮುನ್ನಡೆಯಬೇಕು.ನಮ್ಮ ಮಹಾವಿದ್ಯಾಲಯವು ನೂತನ ಕಟ್ಟಡ ಉತ್ತಮ ಪರಿಸರ, ಅತ್ತ್ಯುತ್ತಮ ಮೂಲ ಸೌಕರ್ಯಗಳು,ವ್ಯಸ್ಥಿತವಾದ ಗ್ರಂಥಾಲಯ,ಆಡಳಿತ ಮಂಡಳಿ,ನುರಿತ ಬೋಧಕ ಸಿಬ್ಬಂದಿ ಒಳಗೊಂಡಿದೆ,ದಿನನಿತ್ಯ ಕಾಲೇಜಿಗೆ ತಪ್ಪದೆ ಹಾಜರಾಗಿ ಮೂಲ ಸೌಲಭ್ಯವನ್ನು ಬಳಸಿಕೊಂಡು ಉತ್ತಮಜ್ಞಾನ ವೃದ್ದಿಸಿಕೊಳ್ಳಬೇಕು.ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಗ್ರಂಥಪಾಲಕಿ ಸವಿತಾ ಕನಕರೆಡ್ಡಿ ಗ್ರಂಥಾಲಯದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.ಎನ್‌ಸಿಸಿ ಮುಖ್ಯಸ್ಥರಾದ ಡಾ.ರಾಮಚಂದ್ರ ನಾಯಕ ಅವರು ಎನ್‌ಸಿಸಿ ಬಗ್ಗೆ ತಿಳಿಸಿದರು.ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯಸ್ಥರಾದ ಮತ್ತು ಉಪ ಪ್ರಾಚಾರ್ಯ ಡಾ.ಅನಿಲ ಭೀ.ನಾಯಕ ಮಾಹಿತಿ ನೀಡಿದರು.ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರಾದ ಡಾ.ಶ್ರೀನಿವಾಸ ದೊಡ್ಡಮನಿ ಸಾಂಸ್ಕೃತಿಕ ಮತ್ತು ವಿವಿಧ ಸೆಲ್ ಗಳ ಬಗ್ಗೆ ಮಾಹಿತಿ ನೀಡಿದರು. ಎನ್‌ಎಸ್‌ಎಸ್ ವಿಭಾಗದ ಮುಖ್ಯಸ್ಥರಾದ ಡಾ.ತರನ್ನುಮ್ ಜಬಿನ್ ಖಾನ್ ಮತ್ತು ಡಾ.ಮಿಲನ್ ರಾಠೋಡ್ ಅವರು ಎನ್‌ಎಸ್‌ಎಸ್ ಬಗ್ಗೆ ಮಾಹಿತಿ ನೀಡಿದರು.
ಡಾ.ಅನೀಲಕುಮಾರ ಆರ್.ಪಾಟೀಲ ಮಹಾವಿದ್ಯಾಲಯದ ರೆಡ್ ಕ್ರಾಸ್ ಮತ್ತು ಕ್ರೀಡಾ ವಿಭಾಗದ ಬಗ್ಗೆ ಮಾಹಿತಿ ನೀಡಿದರು. ಡಾ.ಶ್ರೀಧರ ಜೋಶಿ ಇ-ವಿದ್ಯಾ ಬಗ್ಗೆ ಮಾಹಿತಿ, ಡಾ.ಉಷಾದೇವಿ ಹಿರೇಮಠ ಕಲಾ ವಿಭಾಗಗಳ ಪರಿಚಯ, ಪ್ರೊ.ಮಹಾಂತೇಶ ಜೇವೂರ ಬಿಸಿಎ ವಿಭಾಗದ ಹಾಗೂ ಡಾ.ಧರ್ಮಗುರು ಪ್ರಸಾದ ಸೈನ್ಸ ವಿಭಾಗಗಳ ಪರಿಚಯವನ್ನು ಮಾಡಿದರು. ಡಾ ಡಾ.ಅನಿಲ ಭೀ.ನಾಯಕ ಸ್ವಾಗತಿಸಿದರು, ಡಾ.ಉಷಾದೇವಿ ಹಿರೇಮಠ ಹಾಗೂ ಡಾ.ರೇಣುಕಾದೇವಿ ಕಮತರ ಕಾರ್ಯಕ್ರಮ ನಿರೂಪಿಸಿದರು. ಐಕ್ಯೂಏಸಿ ಮುಖ್ಯಸ್ಥರಾದ ಡಾ.ಪಿ. ಎಸ್. ಪಾಟೀಲ ವಂದಿಸಿದರು.
ಈ ಸಂದರ್ಭದಲ್ಲಿ ಎಲ್ಲ ವಿಭಾಗಗಳ ಮುಖ್ಯಸ್ಥರುಗಳು ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 