ವಿಜಯಪುರ 29: ದಿ. ಡಾ. ಸಿ. ಆರ್. ಬಿದರಿ ಅವರ ಸ್ಮರಣಾರ್ಥ ಬಿ.ಎಲ್.ಡಿ.ಇ. ಸಂಸ್ಥೆಯ ನಾನಾ ಶಾಲೆ- ಕಾಲೇಜುಗಳ ಕ್ರೀಡಾಕೂಟ-2025 ಫೆಬ್ರವರಿ 1 ರಂದು ಶನಿವಾರ ನಗರದಲ್ಲಿ ನಡೆಯಲಿದ್ದು, ಭಾರತೀಯ ಕ್ರಿಕೆಟ್ ಆಟಗಾರ್ತಿ ವೇದಾಕೃಷ್ಣಮೂರ್ತಿ ಮುಖ್ಯ ಅತಿಥಿಯಾಗಿ ಪಾಲ್ಗೋಳ್ಳಲಿದ್ದಾರೆ.
ಬಿ.ಎಲ್.ಡಿ.ಇಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಆಶ್ರಯದಲ್ಲಿ ಕಾಲೇಜಿನ ಕ್ರೀಡಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ಕ್ರೀಡಾಕೂಟ ಪ್ರಾರಂಭವಾಗಲಿದೆ. ಈ ಸಂದರ್ಭದಲ್ಲಿ ಆಶಾ ಎಂ. ಪಾಟೀಲ, ಬಿ.ಎಲ್.ಡಿ. ಇಡೀಮ್ಡ್ ವಿವಿಯ ಸಮ ಕುಲಾಧಿಪತಿ ಡಾ. ವೈ. ಎಂ. ಜಯರಾಜ, ಸಮಕುಲಪತಿ ಡಾ. ಅರುಣ ಇನಾಮದಾರ, ಪ್ರಾಚಾರ್ಯಡಾ. ಅರವಿಂದ ಪಾಟೀಲ, ಉಪಪ್ರಾಚಾರ್ಯ ಡಾ. ಎಂ. ಬಿ. ಪಾಟೀಲ, ಕ್ರೀಡಾ ಸಮಿತಿಯ ಉಪಾಧ್ಯಕ್ಷಡಾ. ಗೀರೀಶ ಕುಲ್ಲೊಳ್ಳಿ, ಬಿ.ಎಲ್.ಡಿ.ಇ ಸಂಸ್ಥೆಯ ಆಡಳಿತಾಧಿಕಾರಿಗಳಾದ ವಿ. ಎಸ್. ಬಗಲಿ, ಪ್ರೊ. ಎಸ್. ಎಚ್. ಲಗಳಿ, ಐ. ಎಸ್. ಕಾಳಪ್ಪನವರ, ಬಿ. ಆರ್. ಪಾಟೀಲ ಉಪಸ್ಥಿತರಿರಲಿದ್ದು, ಕುಲಪತಿಡಾ. ಆರ್. ಎಸ್. ಮುಧೋಳ ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಕ್ರೀಡಾಕೂಟವನ್ನು ಪೂರ್ವ ಪ್ರಾಥಮಿಕ, ಪ್ರಾಥಮಿಕ, ಮಾಧ್ಯಮಿಕ, ಪಿ.ಯುಕಾಲೇಜು ಹಾಗೂ ಪದವಿ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಸಂಘಟಿಸಲಾಗುತ್ತದೆ. ಬಿ.ಎಲ್.ಡಿ.ಇ ಸಂಸ್ಥೆಯ 66 ನಾನಾ ಕಾಲೇಜುಗಳ ಸುಮಾರು 800 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಈ ಕ್ರೀಡಾಕೂಟದಲ್ಲಿ ವೇಗದ ಓಟಗಾರರಿಗೆ ಪುರುಷ ಹಾಗೂ ಮಹಿಳೆಯರ ವಿಭಾಗಗಳಲ್ಲಿ ಒಟ್ಟು 10 ಚಿನ್ನದ ಪದಕಗಳನ್ನು ವಿತರಿಸಲಾಗುತ್ತದೆ.
ಸಂಜೆ ನಡೆಯಲಿರುವ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ವಿಜಯೇಂದ್ರ ಬಿದರಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಈ ಸಂದರ್ಭದಲ್ಲಿ ಆಶಾ ಎಂ. ಪಾಟೀಲ, ಡಾ. ವೈ. ಎಂ. ಜಯರಾಜ, ಡಾ. ಆರ್. ವಿ. ಕುಲಕರ್ಣಿ, ಡಾ. ರಾಜೇಶ ಹೊನ್ನುಟಗಿ, ಡಾ. ಆರ್. ಸಿ. ಬಿದರಿ, ಡಾ. ಶೈಲಜಾ ಬಿದರಿ, ಡಾ. ಸುಮಂಗಲಾ ಪಾಟೀಲ, ಡಾ. ಗೀರೀಶ ಕುಲ್ಲೊಳ್ಳಿ ಉಪಸ್ಥಿರಿರಲಿದ್ದಾರೆ. ಡಾ. ಆರ್. ಎಸ್. ಮುಧೋಳ ಅಧ್ಯಕ್ಷತೆ ವಹಿಸಲಿದ್ದಾರೆ.
ಬಿ.ಎಲ್.ಡಿ.ಇಡೀಮ್ಡ್ ವಿಶ್ವವಿದ್ಯಾಲಯದ ಎಲ್ಲ ಪದಾಧಿಕಾರಿಗಳು, ನಾನಾ ಶಾಲೆ ಮತ್ತು ಕಾಲೇಜುಗಳ ಪ್ರಾಚಾರ್ಯರು, ಸಂಸ್ಥೆಯ ಎಲ್ಲ ಆಡಳಿತಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಡೀಮ್ಡ್ ವಿವಿಯ ನಿರ್ದೇಶಕಿ ಡಾ. ಮಹಾದೇವಿ ವಾಲಿ ಮತ್ತು ಬಿ.ಎಲ್.ಡಿ.ಇ ಸಂಸ್ಥೆಯ ಕ್ರೀಡಾ ನಿರ್ದೇಶಕ ಎಸ್. ಎಸ್. ಕೋರಿ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.