ಲೋಕದರ್ಶನ ವರದಿ
ಕೊಪ್ಪಳ 05: ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಸಚಿವ ಸಿ.ಸಿ. ಪಾಟೀಲ್ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಕೊಪ್ಪಳ ನಗರದಲ್ಲಿ ಜನಜಾಗೃತಿ ಅಭಿಯಾನ ನಡೆಸಿದರು.
ನಗರದ ಶ್ರೀರಾಘವೇಂದ್ರಸ್ವಾಮಿ ಮಠದಲ್ಲಿ ಪೂಜೆ ಸಲ್ಲಿಸಿ ನಂತರ ಜನಜಾಗೃತಿ ಅಭಿಯಾನ ಬಸ್ನಿಲ್ದಾಣದವರೆಗೆ ಸಂಸದ ಸಂಗಣ್ಣ ಕರಡಿ, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಕುಡಚಿ ಶಾಸಕ ಪಿ. ರಾಜೀವ್ ಹಾಗೂ ಯಲಬುಗರ್ಾ ಶಾಸಕ ಹಾಲಪ್ಪ ಆಚಾರ್ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮನೆ, ಅಂಗಡಿಗಳಿಗೆ ತೆರಳಿ ಸಿಎಎ ಕುರಿತು ಮನವರಿಕೆ ಮಾಡಿದರು.
ಪೌರತ್ವ ಕಾಯ್ದೆ ಬೆಂಬಲಿಸಿ ಜನಜಾಗೃತಿ ಅಭಿಯಾನ ನಡೆಸಿದ ಬಿಜೆಪಿ ನಂತರ ಮಾತನಾಡಿದ ಸಚಿವ ಸಿ.ಸಿ. ಪಾಟೀಲ್, ಸಿಎಎ ಕಾಯ್ದೆ ವಿರೋಧಿಸಿ ಮಂಗಳೂರು ಮತ್ತು ಇತರೆಡೆ ನಡೆದ ಗಲಭೆಗೆ ಕಾಂಗ್ರೆಸ್ ಪಕ್ಷದ ಪ್ರಚೋದನೆ ಕಾರಣ ಎಂದು ಆರೋಪಿಸಿದರು. ಕೇಂದ್ರ ಸಕರ್ಾರ ಜಾರಿಗೆ ತಂದಿರುವ ಸಿಎಎ ಕಾಯ್ದೆ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದಲ್ಲಿ ದೌರ್ಜನ್ಯಕ್ಕೊಳಗಾದ ಅಲ್ಲಿನ ಅಲ್ಪಸಂಖ್ಯಾತರಿಗೆ ನಮ್ಮ ದೇಶಕ್ಕೆ ಬಂದರೆ ಪೌರತ್ವ ಕೊಡುತ್ತದೆ ಎಂದರು. ಇನ್ನೂ ಕಾಂಗ್ರೆಸ್ ಪಕ್ಷದವರು ಕಾಯ್ದೆಯನ್ನು ಅರ್ಥಮಾಡಿಕೊಳ್ಳದೆ ಒಂದು ಜನಾಂಗವನ್ನು ಎತ್ತಿಕಟ್ಟುವ ಕೆಲಸ ಮಾಡಿದೆ ಎಂದು ಆರೋಪಿಸಿದರು. ಇನ್ನು ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ಪ್ರಚೋದನಾತ್ಮಕ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಸಚಿವ ಪಾಟೀಲ್ ಅವರು ಸೋಮಶೇಖರರೆಡ್ಡಿ ಅವರ ಭಾಷಣದ ಸಂಪೂರ್ಣ ವಿವರವನ್ನು ನಾನು ಕೇಳಿಲ್ಲ. ಯಾರೇ ಆಗಿರಲಿ ಜವಬ್ದಾರಿಯುತ ಸ್ಥಾನದಲ್ಲಿರುವವರು ಪ್ರಚೋದನಾತ್ಮಕ ಹೇಳಿಕೆ ನೀಡಬಾರದು. ಈ ಬಗ್ಗೆ ಪಕ್ಷದ ವರಿಷ್ಠರು ಸೂಕ್ತ ತೀಮರ್ಾನ ಕೈಗೊಳ್ಳುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅಮರೇಶ ಕರಡಿ, ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ, ಹಿರಿಯ ಮುಖಂಡರಾದ ಸುರೇಶ ದೇಸಾಯಿ,ಸದಸ್ಯನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್ ಮೈನಹಳ್ಳಿ, ಸದಸ್ಯರಾದ ನಾಗಭೂಷಣ ಸಾಲಿಮಠ, ಮಧುರಾ ಕರಣಂ, ಶಹನಾಜ ಬೇಗಂ, ಬಸವರಾಜ ಭೋವಿ, ಪಕ್ಷದ ಮುಖಂಡರಾದ ಗವಿಸಿದ್ದಪ್ಪ ಕರಡಿ, ಫಾಲಾಕ್ಷಪ್ಪ ಗುಂಗಾಡಿ, ಹೇಮಲತಾ ನಾಯಕ, ಅಪ್ಪಣ್ಣ ಪದಕಿ, ಹಾಲೇಶ್ ಕಂದಾರಿ, ದೇವರಾಜ್ ಹಾಲಸಮುದ್ರ, ದಿಶಾ ಸಮಿತಿ ಸದಸ್ಯ ಗಣೇಶ ಹೊರತಟ್ನಾಳ್, ಪ್ರಾಣೇಶ ಮಾದಿನೂರು,ಬಸನಗೌಡ ಕುರುಡಗಿ, ಚಂದ್ರಸ್ವಾಮಿ ಬಹದ್ದೂರುಬಂಡಿ,ವಿರೂಪಾಕ್ಷಯ್ಯ ಗದಗಿನಮಠ,ಚಂದ್ರಕಾಂತ ನಾಯಕ, ರವಿಚಂದ್ರ ಮಾಲಿಪಾಟೀಲ, ವಸಂತ ನಾಯಕ ಹೊಸಲಿಂಗಾಪುರ, ವೀಣಾ ಬನ್ನಿಗೊಳ, ಶ್ರೀನಿವಾಸ ಪೂಜಾರ, ಮಹೇಶ ಹಾದಿಮನಿ, ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ಬಿ.ಗಿರೀಶಾನಂದ ಜ್ಞಾನಸುಂದರ ಹಾಗೂ ಅನೇಕರು ಉಪಸ್ಥಿತರಿದ್ದರು.