ಪ್ರತಿಭಟನೆಗಳಿಗೆ ಬಿಜೆಪಿ ಗೌರವ ಕೊಡಬೇಕು: ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು,ಡಿ.19:      ಸಂವಿಧಾನವನ್ನೇ  ಬದಲಿಸಲು ಹೊರಟ ಬಿಜೆಪಿ ಸಂವಿಧಾನದ ಹಕ್ಕುಗಳನ್ನು ಗೌರವಿಸುವುದಿಲ್ಲ ಎಂಬುದು  ನಿರೀಕ್ಷಿತವೇ. ಆದರೂ ಅನ್ಯಮಾರ್ಗದಲ್ಲಿ ಪ್ರಜಾಪ್ರಭುತ್ವ ತೋರಿದ ಹಾದಿಯನ್ನು ಬಳಸಿಕೊಂಡು  ರಚನೆಯಾದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರಜೆಗಳ ಪ್ರತಿಭಟನೆಗೆ ಗೌರವ ಕೊಡಬೇಕು  ಎಂದು ಮಾಜಿ ಮುಖ್ಯಮಂತ್ರಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ  ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಶಾಂತಿಯುತ ಹೋರಾಟಕ್ಕೆ ಅವಕಾಶ ನೀಡಬೇಕು. ವಾದ, ವಿವಾದ, ಸಂವಾದ ಪ್ರಜಾಪ್ರಭುತ್ವದ ಮೂಲಭೂತ ಲಕ್ಷಣ. ಹೀಗಾಗಿಯೇ ಪ್ರತಿಭಟಿಸುವುದು,  ಅಭಿಪ್ರಾಯ ವ್ಯಕ್ತಪಡಿಸುವುದು ಭಾರತದಲ್ಲಿ ಸಾಂವಿಧಾನಿಕ ಹಕ್ಕು. ಆದರೆ ನಿಷೇಧಾಜ್ಞೆ,  ಲಾಠಿ ಚಾರ್ಜ್, ಬಂಧನಗಳ ಮೂಲಕ ಬಿಜೆಪಿ ಸರ್ಕಾರ ಸಂವಿಧಾನವೇ ನೀಡಿರುವ ಹಕ್ಕುಗಳನ್ನು  ಹತ್ತಿಕ್ಕುತ್ತಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.