ದ್ವೇಷ, ವಿಭಜನೆ ರಾಜಕೀಯಲ್ಲಿ ಬಿಜೆಪಿ ಮೀರಿಸುವವರಿಲ್ಲ : ಅಖಿಲೇಶ್ ವಾಗ್ದಾಳಿ

ಇಟವಾ, ಆಗಸ್ಟ್ 16           ಬಿಜೆಪಿ ದೇಶದಲ್ಲಿ ಕೋಮು, ದ್ವೇಷ ಭಾವನೆ ಬಿತ್ತಿ ದೇಶವನ್ನು ಒಡೆಯುವ ರಾಜಕೀಯ  ಮಾಡುತ್ತಿದ್ದು, ಈ ವಿಚಾರದಲ್ಲಿ ಅವರನ್ನು ಮೀರಿಸುವವರು ಇನ್ನೊಬ್ಬರಿಲ್ಲ  ಎಂದು ಸಮಾಜವಾದಿ ಪಕ್ಷದ  ಅಧ್ಯಕ್ಷ ಅಖಿಲೇಶ್ ಯಾದವ್  ಗಂಭೀರ  ಆರೋಪ ಮಾಡಿದ್ದಾರೆ.  

ಚುನಾವಣಾ ಸಮಯದಲ್ಲಿ, ರಾಜಕೀಯ ಲಾಭಕ್ಕಾಗಿ ಬಿಜೆಪಿ ನಾಯಕರು ಕೋಮುಭಾವನೆ ಕೆರಳಿಸಿ ದ್ವೇಷದ ರಾಜಕೀಯ ಮಾಡಿದ್ದಾರೆ ಈಗಲೂ ಅದೇ ನೀತಿ ಮುಂದುವರೆಸಿ ಜನರನ್ನು ಎತ್ತಿಕಟ್ಟಲಾಗುತ್ತಿದೆ ಈ ವಿಚಾರದಲ್ಲಿ ಅವರನ್ನು ಮೀರಿಸುವವರಿಲ್ಲ  ಎಂದು ವಾಗ್ದಾಳಿ  ಮಾಡಿದರು.  

ಸೈಫೈನಿಂದ ಲಕ್ನೋಗೆ ಹಿಂದಿರುಗುವ ಮೊದಲು ಪಕ್ಷದ ಕಾರ್ಯಕರ್ತರಿಗೆ ಸಲಹೆ ನೀಡಿದ ಅವರು  ಸುಳ್ಳು ಹೇಳುವವರನ್ನು, ಉತ್ತಮ ಬಟ್ಟೆ ಧರಿಸುವವರನ್ನು ಜನರು ನಂಬುತ್ತಾರೆ ಎಂದರು.  

ಸಮಾಜವಾದಿ ಪಕ್ಷಕ್ಕೆ ಇಂದು ಶಿಸ್ತು ಮತ್ತು ತರಬೇತಿಯ ಅವಶ್ಯಕತೆಯಿದೆ ಪಕ್ಷದ ಹಿರಿಯ ಮುಖಂಡರನ್ನು ಭೇಟಿಯಾಗಲು ಬಯಸಿದರೆ ಪಕ್ಷದ ಕಾರ್ಯಕರ್ತರೊಬ್ಬರು ಇನ್ನೊಂದು   ಹಾದಿಯಲ್ಲಿ ಅಡಚಣೆ ಎದುರಿಸುತ್ತಿದ್ದಾರೆ ಎಂಬುದು ತಮ್ಮ ಗಮನಕ್ಕೆ ಬಂದಿದೆ . ಇದನ್ನು ಸರಿಪಡಿಸಲು ಕ್ರಮ ಕೈಗೊಳ್ಳುವುದಾಗಿಯೂ  ಅವರು ಹೇಳಿದರು.  

ವಿರೋಧ ಪಕ್ಷಗಳ ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚಿಸಿದ ಯಾದವ್, ಎದುರಾಳಿಗಳನ್ನುಮೆಟ್ಟಿ ನಿಲ್ಲಬೇಕಾದರೆ  ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವ ಅಗತ್ಯವಿದೆ. ಪಕ್ಷವನ್ನು  ಗ್ರಾಮೀಣ ಪ್ರದೇಶಗಳಲ್ಲಿ ಮತ್ತಷ್ಟು ಬಲಪಡಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಕಾರ್ಯಕರ್ತರಿಗೆ ಅವರು ಕಿವಿಮಾತು ಹೇಳಿದರು.  

ಬೂತ್ ಉಸ್ತುವಾರಿಗಳ ವ್ಯಕ್ತಿತ್ವ  ಸರಿಯಿಲ್ಲದ ಕಾರಣ  ಗ್ರಾಮೀಣ ಪ್ರದೇಶಲ್ಲಿ ಪಕ್ಷಕ್ಕೆ ಹಿನ್ನಡೆಯಾಗುತ್ತಿದೆ ಎಂದು ಅವರು ಹೇಳಿದರು.  

ಬಿಜೆಪಿ ಸರ್ಕಾರದ ಬಗ್ಗೆ ಮಾತನಾಡಿದ ಅವರು, ಸುಳ್ಳು ಮತ್ತು ವಂಚನೆಯ ರಾಜಕಾರಣವು ಇಂದು ಉತ್ತುಂಗದಲ್ಲಿದೆ ಮತ್ತು ಸರ್ಕಾರದ ವಿರುದ್ಧ ಮಾತನಾಡುವ ಜನರನ್ನು ಹೇಗೆ ನಡೆಸಿಕೊಳ್ಳಲಾಗುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಅವರು ಲೇವಡಿ ಮಾಡಿದರು.