ಬಿಜೆಪಿಗೆ ಪರ್ಯಾಯ ಬೇಕು, ಶರದ್ ಪವಾರ್ ಅಭಿಮತ

ನವದೆಹಲಿ, ಡಿ 19ದೇಶದಲ್ಲಿ ' ಆಡಳಿತರೂಢ  ಬಿಜೆಪಿಗೆ ಪರ್ಯಾಯ ರಾಜಕೀಯ ಶಕ್ತಿ  ಅಗತ್ಯವಿದೆ,ಇದಕ್ಕೆ   ಕಾಲವೂ ಸನ್ನಿಹಿತವಾಗುತ್ತಿದೆ  ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್  ಪ್ರತಿಪಾದಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿ ಬಿಜೆಪಿ ವಿರೋಧಿ ಒಕ್ಕೂಟ ರಚನೆಯಾಗಲಿದೆಯೇ? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ದೇಶದ ಕೆಲವು ಭಾಗಗಳಲ್ಲಿ ಬಿಜೆಪಿ ವಿರೋಧಿ ಭಾವನೆ  ಹೆಚ್ಚುತ್ತಿದೆ ಎಂದು ಉತ್ತರಿಸಿದರು."ಅಂತಹ ಬದಲಾವಣೆ ದೊಡ್ಡ ಮಟ್ಟದಲ್ಲಿ  ಬರಬೇಕಾದರೆ  ಜನರಿಗೆ ಪರ್ಯಾಯ ಬೇಕು, ಮತ್ತು ಅಂತಹ ಪರ್ಯಾಯವು ದೇಶದಲ್ಲಿಯೇ ಇರಬೇಕು ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಉಲ್ಲೇಖಿಸಿ  ಹೇಳಿದರು.ರಾಹುಲ್ ಗಾಂಧಿ ಮಂಗಳವಾರ ದಕ್ಷಿಣ ಕೊರಿಯಾ ಪ್ರಧಾನಿ ಲೀ ನಕ್-ಯೋನ್ ಅವರನ್ನು ಭೇಟಿ ಮಾಡಿರುವುದಾಗಿ ಹೇಳಿದ್ದಾರೆ.ಭಾರತದಲ್ಲಿ  ಪೌರತ್ವ ಕಾನೂನು  ತಿದ್ದುಪಡಿ ಪ್ರತಿಭಟನೆಯ ಕಾವು ಜೋರಾಗಿರುವಾಗ  ರಾಹುಲ್  ದಕ್ಷಿಣ ಕೊರಿಯಾ ಭೇಟಿ ಸಾಕಷ್ಟು ಕೂತುಹಲ ಮೂಡಿಸಿದೆ. ಹೊಸ ಪೌರತ್ವ ಕಾನೂನನ್ನು ವಿರೋಧಿಸಿ ಪ್ರತಿಪಕ್ಷ ನಾಯಕರು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿರುವ ಬಗ್ಗೆ, 'ಕೆಲವು ಅಸಮಾನ್ಯ ವಿಷಯಗಳ ಬಗ್ಗೆ ಬಿಜೆಪಿಯೇತರ ಪಕ್ಷಗಳು, ನಾಯಕರು  ಒಗ್ಗೂಡುತ್ತಿರುವುದು ಇದರಿಂದ ಸ್ಪಷ್ಟವಾಗಿದೆ.ಆಡಳಿತ ಪಕ್ಷವನ್ನು ಎದುರಿಸಲು ಇಂತಹ ಸಮಾನ ಮನಸ್ಕ  ಪಕ್ಷಗಳ ಸಂಘಟನೆ  ಬಲಪಡಿಸಲು ಇನ್ನೂ ಸ್ವಲ್ಪ ಸಮಯ ಬೇಕಾಗಲಿದೆ ಎಂದೂ ಅವರು ಹೇಳಿದರು.