ಪಣಜಿ, ಡಿ 23 ಪ್ರಧಾನಿ ನರೇಂದ್ರ
ಮೋದಿ ಸಾಗರೋತ್ತರ ಭಾರತೀಯ ಪ್ರಜೆಗಳು (ಒಸಿಐ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ)
ನೀತಿಗಳಲ್ಲಿ ದ್ವಂದ ನೀತಿ ಅನುಸರಿಸುತಿದ್ದಾರೆ ಎದು ಗೋವಾ ಕಾಂಗ್ರೆಸ್ ಆರೋಪಿಸಿದೆ ಯುಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಗೋವಾ ಪ್ರದೇಶ
ಕಾಂಗ್ರೆಸ್ ಸಮಿತಿ (ಜಿಪಿಸಿಸಿ) ವಕ್ತಾರ ಟ್ರಾಜನೋ ಡಿ ಮೆಲ್ಲೋ, 2017ರಲ್ಲಿ ಪೋರ್ಚುಗಲ್ ಪ್ರಧಾನಿ
ಅಂಟೋನಿಯ ಕೋಸ್ಟೋ ಒಸಿಐ ಗುರುತಿನ ಚೀಟಿ ನೀಡಿ ಗಮನ ಸೆಳೆದಿದ್ದ ಮೋದಿ, ಈಗ ಎನ್ ಆರ್ ಸಿ ಜಾರಿಗೊಳಿಸಿ
ಪೋರ್ಚುಗೀಸ್ ಪಾಸ್ ಪೋರ್ಟ್ ಹೊಂದಿರುವ ಗೋವಾ ಜನರಿಗೆ ಆತಂಕ ಉಂಟು ಮಾಡಿದ್ದಾರೆ ಎಂದು ಆರೋಪಿಸಿದರು. ಬಿಜೆಪಿ ನೇತೃತ್ವದ ಎನ್ ಡಿಎ, ಎನ್ ಆರ್ ಸಿಯನ್ನ ದೇಶಾದ್ಯಂತ
ಜಾರಿಗೊಳಿಸುವ ಗುಪ್ತ ಆಲೋಚನೆ ಹೊಂದಿದೆ. ಆದರೆ, ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಈಗಾಗಲೇ ಎನ್ ಆರ್ ಸಿ ಜಾರಿಗೆ ನಕಾರ
ಸೂಚಿಸಿದ್ದಾರೆ ಎಂದರು.