ಬಿಜೆಪಿ ಪ್ರಚಾರಪರ, ಕಾಂಗ್ರೆಸ್ ಅಭಿವೃದ್ಧಿಪರ ಪಕ್ಷ: ಸಿದ್ದು ಕೊಣ್ಣೂರ
BJP is a propaganda-oriented party, Congress is a development-oriented party: Sidhu Konnur
ಮಹಾಲಿಂಗಪುರ 26: ಬಿಜೆಪಿ ಅಭಿವೃದ್ದಿ ಕೆಲಸ ಮಾಡದೆಯೇ ಪ್ರಚಾರ ಪಡೆದುಕೊಳ್ಳುತ್ತದೆ, ಆದರೆ ಕಾಂಗ್ರೆಸ್ ಅಭಿವೃದ್ದಿ ಮಾಡಿಯೂ ಪ್ರಚಾರ ಪಡದುಕೊಳ್ಳುವುದಿಲ್ಲ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಪ್ರಾರಂಭಿಸಲಾಗಿರುವ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗ ಇನ್ಮುಂದೆ ಹೆಚ್ಚೆಚ್ಚು ಮತದಾರರನ್ನು ತಲುಪಲಿದೆ ಎಂದು ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಹೇಳಿದರು.
ಗ್ರಾಮದಲ್ಲಿ ಸೋಮವಾರ ರಾತ್ರಿ ಹಮ್ಮಿಕೊಳ್ಳಲಾಗಿದ್ದ ಬಾಗಲಕೋಟ ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕರಾಗಿ ನೇಮಕಗೊಂಡ ಸಲೀಮ ಸರಕಾವಸ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬಡವರಿಗೆ ಜೀವನ ಮಟ್ಟ ಸುಧಾರಿಸಲು ರಾಜ್ಯ ಸರಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿಯೂ ರಾಜ್ಯವನ್ನು ಪ್ರಗತಿಯತ್ತ ಕೊಂಡೊಯ್ಯುತ್ತಿದೆ, ಬಡವರು, ಹಿಂದುಳಿದವರ ಏಳ್ಗೆಯೆ ಕಾಂಗ್ರೆಸ್ ಧೇಯವಾಗಿದ್ದು ಸಾಮಾಜಿಕ ಜಾಲತಾಣದ ಮೂಲಕ ಯುವ ಮತದಾರರನ್ನು ತಲುಪುತ್ತಿರುವ ಕಾಂಗ್ರೆಸ್ ಮುಂಬರುವ ಚುನಾವಣೆಗಳಲ್ಲಿ ಭರ್ಜರಿ ಜಯ ಗಳಿಸಲಿದೆ ಎಂದರು.
ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ ಮಾತನಾಡಿ ಕಟ್ಟ ಕಡೆಯ ವ್ಯಕ್ತಗಳೂ ರಾಜಕೀಯವಾಗಿ ಬೆಳೆಯುವುದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಸಾಧ್ಯ ಇದಕ್ಕೆ ಸಲೀಮ ಸರಕಾವಸ ಉತ್ತಮ ಉದಾಹರಣೆ ಪಕ್ಷದ ಈ ಜವಾಬ್ದಾರಿಯನ್ನು ಬಳಸಿಕೊಂಡು ಉತ್ತಮ ಕೊಡುಗೆ ನೀಡುವ ಮೂಲಕ ನಾಯಕನಾಗಿ ಬೆಳೆಯಬೇಕೆಂದರು.
ಕೆಪಿಸಿಸಿ ಸದಸ್ಯ ಬಸವರಾಜ ಕೊಕಟನೂರ, ಪಂಡಿತ ಭೋಸಲೆ, ಅಶೋಕ ಧಡೂತಿ, ಮಹಾಲಿಂಗ ಮಾಯನ್ನವರ ಮಾತನಾಡಿದರು.
ಎಪಿಎಂಸಿ ಅಧ್ಯಕ್ಷರಾದ ದೇವಲ ದೇಸಾಯಿ, ಸಂಜು ಜೋತಾವರ, ಭರಮು ಉಳ್ಳಾಗಡ್ಡಿ, ಸತ್ಯಪ್ಪ ನೇಸೂರ, ನೂರಸಾಬ ನದಾಫ, ಮಹಮ್ಮದ ಝಾರೆ, ಶಿವಪ್ಪಾ ಪಾಟೀಲ, ಅಜಯಕುಮಾರ ಗಾಣಿಗೇರ, ಅಶೋಕ ಮೋಟಗಿ, ಮಲಿಕ ಸರಕಾವಸ, ಅರುಣಕುಮಾರ ಗಾಣಿಗೇರ, ಶೌಕತ ಮಿರ್ಜಿ ಸೇರಿದಂತೆ ಹಲವಾರು ಜನ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಾಗಲಕೋಟ ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕರಾಗಿ ನೇಮಕಗೊಂಡ ಸಲೀಮ ಸರಕಾವಸರನ್ನು ಕಾಂಗ್ರೆಸ್ ಮುಖಂಡರು ಹಾಗೂ ವಿವಿಧ ಸಂಘಟಣೆಯ ಪ್ರಮುಖರು ಸತ್ಕರಿಸಿ ಅಭಿನಂದಿಸಿದರು. ರವಿ ದೊಡವಾಡ ಸ್ವಾಗತಿಸಿದರು, ಗಾಯಕ ಮನು ನಿರೂಪಿಸಿ ವಂದಿಸಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 