ಲೋಕದರ್ಶನ ವರದಿ
ಮಹಾಲಿಂಗಪುರ27 : ರಾಷ್ಟ್ರದ ರಾಜಕಾರಣದಲ್ಲಿ ಅದೆಷ್ಟೋ ಕಸ ಕಡ್ಡಿಗಳಿಗೆ ಅವುಗಳನ್ನು ಬಿಟ್ಟು ಅತ್ಯಮೂಲ್ಯ ಹೂಗಳನ್ನೇ ಆಯ್ಕೆ ಮಾಡುತ್ತಿದ್ದೀಯಲ್ಲ ದೇವರೇ, ಭಾರತೀಯ ಜನತಾ ಪಕ್ಷದ ಅತ್ಯಮೂಲ್ಯ ಹೂಗಳನ್ನು ಕಿತ್ತುಕೊಂಡಿದ್ದು ಸಾಕು ದೇವರೇ..
ಸ್ಥಳೀಯ ನಿಲಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ದಿ. ಅರುಣ್ ಜೇಟ್ಲಿಯವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಜಪ ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಮೇಣದ ಬತ್ತಿ ಬೆಳಗಿಸಿ, ಪುಷ್ಪಾರ್ಪಣೆ ಮಾಡಿ, ಮೌನಾಚರಿಸಿ ಮೇಲಿನಂತೆ ಪ್ರಾಥರ್ಿಸಿದರು.
ಕಾನಿಪ ಅಧ್ಯಕ್ಷ ಜಯರಾಮ್ ಶೆಟ್ಟಿ ಮಾತನಾಡಿ ಅರುಣ್ ಜೇಟ್ಲಿ ಮಹಾನ್ ದಾರ್ಶನಿಕ, ಈ ಕಾಲದ ಅಪರೂಪದ ವ್ಯಕ್ತಿ. ಎಂತಹ ಕ್ಲಿಷ್ಟ ಪರಿಸ್ಥಿತಿಯನ್ನು ನಿಭಾಯಿಸುವ ಮುತ್ಸದ್ಧಿ. ಗುಜರಾತನಿಂದ ಮೋದಿಯನ್ನು ದೆಹಲಿಗೆ ಕರೆದುಕೊಂಡು ಬಂದು ಭಾರತಕ್ಕೆ ಮಹಾನ್ ಪ್ರಧಾನಿಯನ್ನು ನೀಡಿದ ಧೀಮಂತ. ಇವರ ಅಗಲಿಕೆಯಿಂದ ಕೇವಲ ಪಕ್ಷ ಬಡವಾಗಿಲ್ಲ ದೇಶವೇ ಬಡವಾಗಿದೆ ಎಂದರು.
ಮನೋಹರ ಶಿರೋಳ ಮಾತನಾಡಿ ಜನಗತ್ತಿನ ನಂ.1 ದೇಶ ಕಟ್ಟುವ ಮೋದಿಯ ಒಂದೊಂದು ಮಹಾನ್ ತೋಳುಗಳು ಕಳಚುತ್ತಿರುವಂತೆ ಅಟಲ್ ಬಿಹಾರಿ ವಾಜಪೇಯಿ, ಅನಂತಕುಮಾರ, ಮನೋಹರ ಪರಿಕ್ಕರ್, ಸುಶ್ಮಾ ಸ್ವರಾಜ, ಅರುಣ್ ಜೇಟ್ಲಿ ಅವರಂತಹ ಮುತ್ಸದ್ಧಿ ದೇಶ ಭಕ್ತರನ್ನು ಕಳೆದುಕೊಂಡು ದೇಶ ಬಡವಾಗಿದೆ ಎಂದರು.
ಭಾಜಪ ಗ್ರಾಮೀಣ ಘಟಕದ ಅಧ್ಯಕ್ಷ ಬಸನಗೌಡ ಪಾಟೀಲ ಪುಷ್ಪಾರ್ಪಣೆ ಮಾಡಿದರು, ನಗರ ಘಟಕದ ಅಧ್ಯಕ್ಷ ಮಹಾಲಿಂಗಪ್ಪ ಕುಳ್ಳೊಳ್ಳಿ, ಜಿ.ಎಸ್. ಗೊಂಬಿ, ಪುರಸಭಾ ಸದಸ್ಯ ರಾಜು ಚಮಕೇರಿ, ಶಿವು ಅಂಗಡಿ, ಶಿವನಗೌಡ ಪಾಟೀಲ, ಶಂಕರಗೌಡ ಪಾಟೀಲ, ಚನ್ನಪ್ಪ ಪಟ್ಟಣಶೆಟ್ಟಿ, ವಿಷ್ಣುಗೌಡ ಪಾಟೀಲ, ಶಿವಾನಂದ ಹುಣಶ್ಯಾಳ, ಮಹೇಶ ಜಿಡ್ಡಿಮನಿ, ತಿಪ್ಪಣ್ಣ ಬಂಡಿವಡ್ಡರ ಇತರರು ಇದ್ದರು.