ನವದೆಹಲಿ, ಫೆ 06 ,ಬಿಜೆಪಿಯಲ್ಲಿ ದೆಹಲಿ ಮುಖ್ಯಮಂತ್ರಿಯಾಗಲು ಸಮರ್ಥ ವ್ಯಕ್ತಿಗಳೇ ಇಲ್ಲ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ವ್ಯಂಗ್ಯವಾಡಿದ್ದಾರೆ ಗುರುವಾರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ವಿಧಾನಸಭಾ ಚುನಾವಣೆಯ ಪ್ರಚಾರವು ಕೆಲವು ಗಂಟೆಗಳ ನಂತರ ಕೊನೆಗೊಳ್ಳುತ್ತದೆ. ಆದಾಗ್ಯೂ, ಬಿಜೆಪಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಇನ್ನೂ ಬಹಿರಂಗಪಡಿಸಿಲ್ಲ. ಬಿಜೆಪಿಯಲ್ಲಿ ಯಾರೂ ದೆಹಲಿಯ ಸಿಎಂ ಆಗಲು ಅರ್ಹರಲ್ಲ ಎಂಬುದು ಈಗ ಸ್ಪಷ್ಟವಾಗಿದೆ ಎಂದರು. '' ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 'ನನಗೆ ಮತ ನೀಡಿ ಮತ್ತು ನಾನು ಸಿಎಂ ಅನ್ನು ನಿರ್ಧರಿಸುತ್ತೇನೆ' ಎಂದು ಹೇಳುತ್ತಿದ್ದಾರೆ, ಈ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕಿದ್ದಲ್ಲಿ ಜನರಿಗಾಗಿ ಕೆಲಸ ಮಾಡಿರಬೇಕಾಗುತ್ತದೆ. ಅವರಿಗಾಗಿ ಶಾಲೆಗಳು ಮತ್ತು ಆಸ್ಪತ್ರೆಗಳನ್ನು ನಿರ್ಮಿಸಬೇಕಾಗುತ್ತದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಅವರು ಹೇಳಿದರು. "ಇದು 21 ನೇ ಶತಮಾನದ ಭಾರತ, ಈಗ ಅದು ಕೆಲಸದ ಮೇಲೆ ಮತ ಚಲಾವಣೆಯಾಗುತ್ತದೆಯೇ ಹೊರತು, ಜಾತಿ ಮತ್ತು ಧರ್ಮದ ಮೇಲೆ ಅಲ್ಲ" ಎಂದು ಅವರು ಹೇಳಿದರು.ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಚುನಾವಣೆಯಲ್ಲಿ ಪ್ರಮುಖ ವಿಷಯವಾಗಿದೆ. ಪ್ರಚಾರದ ಕೊನೆಯ ದಿನದಂದು ಹಲವಾರು ರ್ಯಾಲಿಗಳು ಸಾಲುಗಟ್ಟಿ ನಿಂತಿವೆ. ಫೆಬ್ರವರಿ 8 ರಂದು 70 ಸ್ಥಾನಗಳಿಗೆ ಮತದಾನ ನಡೆಯಲಿದೆ. ಫೆಬ್ರವರಿ 11 ರಂದು ಫಲಿತಾಂಶಗಳನ್ನು ಪ್ರಕಟಿಸಲಾಗುವುದು.